For Quick Alerts
  ALLOW NOTIFICATIONS  
  For Daily Alerts

  ಎ.ಆರ್ ಮುರುಗದಾಸ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿ

  By Bharath Kumar
  |

  ತೆಲುಗು ಸ್ಟಾರ್ ನಟ ನಾನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದ ನಟಿ ಶ್ರೀರೆಡ್ಡಿ ಈಗ ತಮ್ಮ ಬಾಣವನ್ನ ನಿರ್ದೇಶಕ ಎಆರ್ ಮುರುಗದಾಸ್ ಕಡೆ ಬಿಟ್ಟಿದ್ದಾರೆ.

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮುರುಗದಾಸ್ ಕೂಡ ನನಗೆ ಮೋಸ ಮಾಡಿದ್ದಾರೆ ಎಂದು ಶ್ರೀರೆಡ್ಡಿ ಆರೋಪ ಮಾಡಿದ್ದಾರೆ.

  ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಶ್ರೀರೆಡ್ಡಿ ನೇರವಾಗಿ ಹೇಳದೆ, ಪರೋಕ್ಷವಾಗಿ ಮುರುಗದಾಸ್ ಮೇಲೆ ಬಾಂಬ್ ಸಿಡಿಸಿದ್ದಾರೆ. ಇದೀಗ ಸೌತ್ ಸಿನಿ ದುನಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ, ಸ್ಟಾರ್ ಡೈರೆಕ್ಟರ್ ವಿರುದ್ಧ ಶ್ರೀರೆಡ್ಡಿ ಮಾಡುತ್ತಿರುವ ಆರೋಪವೇನು.? ತಮ್ಮ ಎಫ್.ಬಿ ಅಕೌಂಟ್ ನಲ್ಲಿ ಏನೆಂದು ಬರೆದುಕೊಂಡಿದ್ದಾರೆ.? ಮುಂದೆ ಓದಿ.....

  ಆ ದಿನ ಗ್ರೀನ್ ಪಾರ್ಕ್ ಹೋಟೆಲ್ ನಲ್ಲಿ.....

  ಆ ದಿನ ಗ್ರೀನ್ ಪಾರ್ಕ್ ಹೋಟೆಲ್ ನಲ್ಲಿ.....

  ಯಾವುದನ್ನ ನಿಖರವಾಗಿ ಹೇಳದ ಶ್ರೀರೆಡ್ಡಿ ಯಾವಾಗಲೋ ನಡೆದ ಘಟನೆ ಎಂಬಂತೆ ಹಿಂದಿನ ಫ್ಲ್ಯಾಶ್ ಬ್ಯಾಕ್ ವಿಷ್ಯದ ಬಗ್ಗೆ ಸುಳಿವು ನೀಡಿದ್ದಾರೆ '' ಹಾಯ್ ತಮಿಳು ಡೈರೆಕ್ಟರ್ ಮುರುಗದಾಸ್ ಜೀ....ಹೇಗಿದ್ದೀರಾ.? ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ.?'' ಎಂದು ಪ್ರಶ್ನಿಸಿದ್ದಾರೆ.

  ತ್ರಿಷಾ, ಕಾಜಲ್, ಶ್ರುತಿ ಸೇರಿ 36 ಜನರ ಹೆಸರು ಪೋಸ್ಟ್ ಮಾಡಿದ ಶ್ರೀರೆಡ್ಡಿ, ಯಾಕೆ.? ತ್ರಿಷಾ, ಕಾಜಲ್, ಶ್ರುತಿ ಸೇರಿ 36 ಜನರ ಹೆಸರು ಪೋಸ್ಟ್ ಮಾಡಿದ ಶ್ರೀರೆಡ್ಡಿ, ಯಾಕೆ.?

  ನಮ್ಮ ಮಧ್ಯೆ ಜಾಸ್ತಿ.....

  ನಮ್ಮ ಮಧ್ಯೆ ಜಾಸ್ತಿ.....

  ಈ ಬಗ್ಗೆ ಮಾತು ಮುಂದುವರೆಸಿರುವ ಶ್ರೀರೆಡ್ಡಿ ''ವೇಲಗೊಂಡ ಶ್ರೀನಿವಾಸ್ ಅವರ ಮುಖಾಂತರ ನಾವು ಭೇಟಿ ಮಾಡಿದ್ದೇವು. ನೀವು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದ್ರೆ, ನಮ್ಮಿಬ್ಬರ ಮಧ್ಯೆ ಜಾಸ್ತಿ.........ಇದುವರೆಗೂ ನೀವು ನನಗೆ ಯಾವುದೇ ಆಫರ್ ಮಾಡಲಿಲ್ಲ.'' ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

  ಶ್ರೀರೆಡ್ಡಿ-ನಾನಿ ವಿವಾದಕ್ಕೆ ನಟ ವಿಶಾಲ್ ಎಂಟ್ರಿ: ನಟಿಯ ವಿರುದ್ಧ ಬೇಸರ ಶ್ರೀರೆಡ್ಡಿ-ನಾನಿ ವಿವಾದಕ್ಕೆ ನಟ ವಿಶಾಲ್ ಎಂಟ್ರಿ: ನಟಿಯ ವಿರುದ್ಧ ಬೇಸರ

  ಕುತೂಹಲಕ್ಕೆ ಕಾರಣಯ್ತು 'ಆ' ಸಾಲು

  ಕುತೂಹಲಕ್ಕೆ ಕಾರಣಯ್ತು 'ಆ' ಸಾಲು

  ಇಷ್ಟೆಲ್ಲಾ ಸಾಲುಗಳನ್ನ ಬರೆದಿರುವ ಶ್ರೀರೆಡ್ಡಿ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಮಾತು ಕೊಟ್ಟು, ಯಾವುದೇ ಚಾನ್ಸ್ ಕೊಟ್ಟಿಲ್ಲ ಎಂಬುದನ್ನ ನೇರವಾಗಿ ಹೇಳುತ್ತಿದ್ದಾರೆ. ''ಆದ್ರೆ, ನಮ್ಮಿಬ್ಬರ ಮಧ್ಯೆ ಜಾಸ್ತಿ.........'' ಎಂದು ಏನೋ ಹೇಳಲು ಬಂದು ಏನೂ ಹೇಳದೆ ಸುಮ್ಮನಾಗಿರುವುದು ಸಾಕಷ್ಟು ಅನುಮಾನಕ್ಕೆ ಜಾಗ ಮಾಡಿದೆ.

  ಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿ ಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿ

  ನೀವು ಕೂಡ ಗ್ರೇಟ್ ಸರ್

  ನೀವು ಕೂಡ ಗ್ರೇಟ್ ಸರ್

  ಕೊನೆಯದಾಗಿ 'ನೀವು ಕೂಡ ಗ್ರೇಟ್ ಸರ್' ಎಂದು ಹೇಳಿರುವ ಶ್ರೀರೆಡ್ಡಿ ನಿರ್ದೇಶಕ ಎಆರ್ ಮುರುಗದಾಸ್ ಅವರ ಬಗ್ಗೆ ಬಹಳ ವ್ಯಂಗ್ಯ ಮಾಡಿದ್ದಾರೆ. ಶ್ರೀರೆಡ್ಡಿ ಹಾಕಿರುವ ಸ್ಟೇಟಸ್ ನೋಡಿದವರು ಒಂದೊಂದು ಬಗೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ, ನಿಜವಾಗಲೂ ಏನಿದರ ಅರ್ಥವೆಂಬುದು ಅವ್ರೇ ಹೇಳಬೇಕಿದೆ.

  English summary
  Actress srireddy latest Facebook post, she said Murugadoss met her through writer Veligonda Srinivas in a star hotel and promised her a role. She hinted that he backtracked on the promises after having long 'conversation' with her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X