»   » ಯಾರು ಎಷ್ಟೇ ಅನುಮಾನ ಪಟ್ಟರೂ, ಶ್ರೀದೇವಿ ಸಾವಿನ ಕೇಸ್ ದುಬೈನಲ್ಲಿ ಕ್ಲೋಸ್ ಆಗಿದೆ!

ಯಾರು ಎಷ್ಟೇ ಅನುಮಾನ ಪಟ್ಟರೂ, ಶ್ರೀದೇವಿ ಸಾವಿನ ಕೇಸ್ ದುಬೈನಲ್ಲಿ ಕ್ಲೋಸ್ ಆಗಿದೆ!

Posted By:
Subscribe to Filmibeat Kannada

ಬಾತ್ ಟಬ್ ನಲ್ಲಿ ಶ್ರೀದೇವಿ ಮುಳುಗಲು ಹೇಗೆ ಸಾಧ್ಯ?
ಶ್ರೀದೇವಿ ಮುಳುಗುವಷ್ಟು ಬಾತ್ ಟಬ್ ಆಳವಾಗಿತ್ತೇ?
ಮೋಹಿತ್ ಮಾರ್ವಾ ಮದುವೆ ಮುಗಿದ್ಮೇಲೂ, ಶ್ರೀದೇವಿ ದುಬೈನಲ್ಲೇ ಉಳಿದುಕೊಂಡಿದ್ದೇಕೆ?
ಬೋನಿ ಕಪೂರ್ ಶನಿವಾರ ದುಬೈಗೆ ತೆರಳಿದ್ದು ಯಾಕೆ.?
ಸರ್ ಪ್ರೈಸ್ ಡಿನ್ನರ್ ಹಿಂದಿನ ಗುಟ್ಟೇನು.?

- ಇಂತಹ ಹತ್ತು ಹಲವು ಪ್ರಶ್ನೆಗಳು, ಅನುಮಾನಗಳು ಅನೇಕರಲ್ಲಿ ಕಾಡುತ್ತಿದೆ. ಅದು, ಶ್ರೀದೇವಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ್ಮೇಲೆ. ಫೋರೆನ್ಸಿಕ್ ರಿಪೋರ್ಟ್ ನಲ್ಲಿ ಶ್ರೀದೇವಿ ''ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ'' ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ, ಶ್ರೀದೇವಿ ಸಾವಿನ ಬಗ್ಗೆ ಸಹಜವಾಗಿ ಪ್ರಶ್ನೆಗಳು ಎದ್ದಿವೆ.

Sridevi death: Dubai Public Prosecution has completed all procedures, case has been closed

ಎಷ್ಟೇ ಪ್ರಶ್ನೆಗಳು ಎದ್ದರೂ, ಯಾರು ಎಷ್ಟೇ ಅನುಮಾನ ಪಟ್ಟರೂ, ಸದ್ಯಕ್ಕೆ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಮಾತ್ರ ಶ್ರೀದೇವಿ ಸಾವಿನ ಕೇಸ್ ನ ಕ್ಲೋಸ್ ಮಾಡಿದೆ.

ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟಾಗ, ಅನುಸರಿಸಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಶ್ರೀದೇವಿ ಸಾವಿನ ಪ್ರಕರಣದಲ್ಲೂ ಅನುಸರಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ, ದುಬೈ ಪೊಲೀಸರ ತನಿಖೆ ಮುಗಿದ್ಮೇಲೆ, ಶ್ರೀದೇವಿ ಸಾವಿನ ಪ್ರಕರಣವನ್ನ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ಲೋಸ್ ಮಾಡಿದೆ.

ಆಕಸ್ಮಿಕವಾಗಿ ಶ್ರೀದೇವಿ ನೀರಿನಲ್ಲಿ ಮುಳುಗಿ, ಪ್ರಜ್ಞೆ ತಪ್ಪಿ, ಪ್ರಾಣ ಬಿಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖ ಆಗಿರುವುದರಿಂದ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಅಂತ್ಯ ಹಾಡಿ, ಕುಟುಂಬಕ್ಕೆ ಶ್ರೀದೇವಿ ಪಾರ್ಥೀವ ಶರೀರವನ್ನ ಹಸ್ತಾಂತರಿಸಿದೆ.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ) ಮುಗಿದಿದ್ದು, ಶ್ರೀದೇವಿ ಪಾರ್ಥೀವ ಶರೀರ ಸದ್ಯ ದುಬೈ ಏರ್ ಪೋರ್ಟ್ ತಲುಪಿದೆ.

ಇಂದು ರಾತ್ರಿ ಭಾರತಕ್ಕೆ ಶ್ರೀದೇವಿ ಪಾರ್ಥೀವ ಶರೀರ ತರಲಾಗುವುದು.

English summary
Sridevi Death: Dubai Public Prosecution has completed all procedures and has now closed the case.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada