»   » 'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು

'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು

Posted By: ಸ್ವಾಮಿ
Subscribe to Filmibeat Kannada

ದುಬೈ ಪೋರೆನ್ಸಿಕ್ ರಿಪೋರ್ಟ್ ಪ್ರಕಾರ, ಬಾಲಿವುಡ್ ನಟಿ ಶ್ರೀದೇವಿ ಸಾವು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿವಿಕೆಯಿಂದಾಗಿದೆ. ಹೀಗಾಗಿ, ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕೂಡ ಅದನ್ನೇ ನಂಬಿ ಶ್ರೀದೇವಿಯ ಕೇಸ್ ಕ್ಲೋಸ್ ಮಾಡಿದೆ.

ದುಬೈನಿಂದ ಶ್ರೀದೇವಿ ಪಾರ್ಥೀವ ಶರೀರ ಮುಂಬೈಗೆ ತಲುಪಿದ್ದಾಗಿದೆ. ಶ್ರೀದೇವಿಯ ಅಂತಿಮ ಯಾತ್ರೆ ಇನ್ನೇನು ಆರಂಭ ಆಗಲಿದೆ. ಶ್ರೀದೇವಿಗೆ ಅಂತಿಮ ವಿದಾಯ ಹೇಳುವ ಈ ಹೊತ್ತಲ್ಲೂ ಕೆಲವರಿಗೆ ಕೆಲವು ಪ್ರಶ್ನೆಗಳು ಕಾಡುತ್ತಿವೆ.

ಶ್ರೀದೇವಿ ಅಂತಿಮ ಸಂಸ್ಕಾರದೊಂದಿಗೆ ಆ ಎಲ್ಲ ಪ್ರಶ್ನೆಗಳು ಸಮಾಧಿ ಆಗಬಹುದು. ಉತ್ತರ ಸಿಗದೆಯೂ ಇರಬಹುದು. ಆದ್ರೆ, ಆ ಪ್ರಶ್ನೆಗಳತ್ತ ಒಂದು ಬಾರಿ ಕಣ್ಣು ಹಾಯಿಸಬಹುದಲ್ಲವೇ.?

ದುಬೈನಲ್ಲಿ ಶ್ರೀದೇವಿ ಉಳಿದುಕೊಂಡಿದ್ದೇಕೆ.?

ಮೋಹಿತ್ ಮಾರ್ವಾ ಮದುವೆ ಮುಗಿದ ಬಳಿಕ ಪುತ್ರಿ ಖುಷಿ ಜೊತೆಗೆ ಬೋನಿ ಕಪೂರ್ ಭಾರತಕ್ಕೆ ವಾಪಸ್ ಬಂದರೆ, ಶ್ರೀದೇವಿ ಮಾತ್ರ ದುಬೈನಲ್ಲೇ ಉಳಿದುಕೊಳ್ಳುವುದೇಕೆ.? ಶ್ರೀದೇವಿ ಶಾಪಿಂಗ್ ಮಾಡಲು ದುಬೈನಲ್ಲಿ ಉಳಿದುಕೊಂಡರು ಎಂದು ವರದಿ ಆಗಿದೆ. ಹಾಗಿದ್ದರೆ, ಎರಡು/ಮೂರು ದಿನಗಳ ಕಾಲ ಶ್ರೀದೇವಿ ಹೋಟೆಲ್ ರೂಮ್ ನಿಂದ ಯಾಕೆ ಆಚೆ ಬರಲಿಲ್ಲ.? ಶ್ರೀದೇವಿ ಜೊತೆ ಆಕೆಯ ಸಹೋದರಿ ಇದ್ದದ್ದು ನಿಜವೇ.?

3 ದಿನ ಹೋಟೆಲ್ ರೂಮ್ ನಲ್ಲೇ ಲಾಕ್ ಆಗಿದ್ರಾ ಶ್ರೀದೇವಿ? ಇದೇನಿದು ಆಘಾತಕಾರಿ ಸುದ್ದಿ?

ಇದ್ದಕ್ಕಿದ್ದಂತೆ ಬೋನಿ ಕಪೂರ್ ದುಬೈಗೆ ತೆರಳಿದ್ದು ಯಾಕೆ.?

ಭಾರತಕ್ಕೆ ವಾಪಸ್ ಬಂದ್ಮೇಲೆ, ಮರಳಿ ದುಬೈಗೆ ಬೋನಿ ಕಪೂರ್ ಹೋಗುವುದು ಯಾಕೆ.? ಸರ್ ಪ್ರೈಸ್ ಡಿನ್ನರ್ ಹಿಂದಿನ ಗುಟ್ಟೇನು.? ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿದ ಮೂರು ಗಂಟೆ ನಂತರ ಪೊಲೀಸರಿಗೆ ಬೋನಿ ಕಪೂರ್ ಫೋನ್ ಮಾಡ್ತಾರೆ. ಬೋನಿ ಕಪೂರ್ ಇಷ್ಟು ತಡ ಮಾಡಿದ್ದು ಯಾಕೆ.?

ಬಾಲಿವುಡ್ ನಟಿ ಶ್ರೀದೇವಿ ಸಾವು : ಉತ್ತರ ಸಿಕ್ಕದ 5 ಪ್ರಶ್ನೆಗಳು

ಶ್ರೀದೇವಿ ತಲೆಗೆ ಗಾಯ ಆಗಿತ್ತಾ.?

ಶ್ರೀದೇವಿ ತಲೆಯಲ್ಲಿ ಗಾಯದ ಗುರುತುಗಳಿವೆ ಎಂದು ವರದಿ ಆಗಿದೆ. ಬಾತ್ ಟಬ್ ಗೆ ಬಿದ್ಮೇಲೆ ಶ್ರೀದೇವಿ ತಲೆಗೆ ಪೆಟ್ಟಾಯ್ತಾ.? ಅಥವಾ ಅದು ಹಳೆಯ ಗಾಯದ ಗುರುತೇ.?

ಪ್ರಜ್ಞೆ ತಪ್ಪುವಷ್ಟು ಮದ್ಯ ಸೇವಿಸಿದ್ರಾ.?

ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಅಂಶ ಇರುವುದು ಪತ್ತೆ ಆಗಿದೆ. ಆಯಾತಪ್ಪಿ/ಪ್ರಜ್ಞೆ ತಪ್ಪಿ ಬಾತ್ ಟಬ್ ಗೆ ಬೀಳುವಷ್ಟು ಶ್ರೀದೇವಿ ಮದ್ಯ ಸೇವಿಸಿದ್ರಾ.? ಅಥವಾ ಅವರಿಗೆ ಬಲವಂತವಾಗಿ ಯಾರಾದರೂ ಮದ್ಯ ಕುಡಿಸಿದ್ದರಾ.?

ಬೋನಿ ಹೇಗೆ ಮಾತನಾಡಿದರು.?

ಶ್ರೀದೇವಿಗೆ ಸರ್ ಪ್ರೈಸ್ ನೀಡಲು ದುಬೈಗೆ ಹೋಗಿದ್ದ ಬೋನಿ ಕಪೂರ್, ಶ್ರೀದೇವಿ ಬಾತ್ ರೂಮ್ ಗೆ ಹೋಗುವ ಮುನ್ನ 15 ನಿಮಿಷ ಮಾತನಾಡಿದ್ದರಂತೆ. ಒಂದು ವೇಳೆ ಅವರು ಮದ್ಯ ಸೇವಿಸಿದ್ದರೆ, ಪತಿ ಬೋನಿ ಜೊತೆಗೆ 15 ನಿಮಿಷ ಮಾತನಾಡಿದ್ದು ಹೇಗೆ.?

ಬಾತ್ ಟಬ್ ಅಷ್ಟೊಂದು ದೊಡ್ಡದಿತ್ತಾ.?

ನಟಿ ಶ್ರೀದೇವಿ ನೀರಲ್ಲಿ ಮುಳುಗುವಷ್ಟು ಬಾತ್ ಟಬ್ ದೊಡ್ಡದಿತ್ತೇ.?

ಕೇಸ್ ಕ್ಲೋಸ್ ಆಗಿದೆ

ಶ್ರೀದೇವಿ ಸಾವು ನಿಗೂಢ ಎನಿಸಿ, ಇಂತಹ ಹತ್ತು ಹಲವು ಪ್ರಶ್ನೆಗಳು ಕಾಡಿದರೂ, ಯಾವುದಕ್ಕೂ ಉತ್ತರ ಸಿಗಲ್ಲ. ಶ್ರೀದೇವಿ ಸಾವು ಆಕಸ್ಮಿಕ, ಯಾವುದೇ ಅಪರಾಧದ ಸಂಚು ಇಲ್ಲ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕೇಸ್ ಕ್ಲೋಸ್ ಮಾಡಿದೆ. ಹೀಗಿರುವಾಗ, ಉತ್ತರ ತಾನೆ ಎಲ್ಲಿಂದ ಸಿಗುತ್ತೆ.?

ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

English summary
Even though, Dubai Public Prosecution has closed the case of Sridevi's Death, Many questions remain unanswered.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada