twitter
    For Quick Alerts
    ALLOW NOTIFICATIONS  
    For Daily Alerts

    44 ವರ್ಷಗಳ ಹಿಂದೆಯೇ ಶುರುವಾಗಿತ್ತು ಶ್ರೀದೇವಿಯ ಕನ್ನಡ ಪ್ರೇಮ.!

    By Bharath Kumar
    |

    ಶ್ರೀದೇವಿ ಬಾಲಿವುಡ್ ಗಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಯಶಸ್ಸು ಕಂಡಿದ್ದರು. ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ತಮ್ಮ ಮೋಹಕ ನಟನೆಯ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದರು. ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಸಿನಿಮಾ ಮಾಡಿದ್ದ ಶ್ರೀದೇವಿ ಕನ್ನಡದಲ್ಲೂ ಕೆಲವು ಸಿನಿಮಾಗಳನ್ನ ಮಾಡಿದ್ದಾರೆ.

    ಸ್ಯಾಂಡಲ್ ವುಡ್ ನಲ್ಲಿ 6 ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಡಾ ರಾಜ್ ಕುಮಾರ್ ಅಭಿನಯದ ಚಿತ್ರದಲ್ಲಿ ಆಗಿನ ಸಮಯದಲ್ಲೇ ಅಭಿನಯಿಸಿ ಶ್ರೀದೇವಿ ಶಬ್ಬಾಶ್ ಎನಿಸಿಕೊಂಡಿದ್ದರು. ಮತ್ತೊಂದೆಡೆ ಅಂಬರೀಷ್ ಜೊತೆಯಲ್ಲೂ ಶ್ರೀದೇವಿ ತೆರೆಹಂಚಿಕೊಂಡಿದ್ದಾರೆ.

    ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್

    ಹಾಗಿದ್ರೆ, ಶ್ರೀದೇವಿ ಅಭಿನಯಿಸಿದ್ದ ಕನ್ನಡ ಸಿನಿಮಾಗಳು ಯಾವುದು.? ಆ ಚಿತ್ರಗಳಲ್ಲಿ ಶ್ರೀದೇವಿಯ ಪಾತ್ರವೇನಾಗಿತ್ತು ಎಂಬುದರ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ......

    ಡಾ ರಾಜ್ ಸಿನಿಮಾದಲ್ಲಿ ಶ್ರೀದೇವಿ

    ಡಾ ರಾಜ್ ಸಿನಿಮಾದಲ್ಲಿ ಶ್ರೀದೇವಿ

    ಡಾ.ರಾಜ್‌ ಕುಮಾರ್‌, ಲೀಲಾವತಿ ಅಭಿನಯದಲ್ಲಿ ಬಿಡುಗಡೆಯಾಗಿದ್ದ 'ಭಕ್ತ ಕುಂಬಾರ' (1974) ಚಿತ್ರದಲ್ಲಿ ಶ್ರೀದೇವಿ ಚೊಚ್ಚಲ ಭಾರಿಗೆ ಕನ್ನಡದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದರು. ಆಗ ಅವರ ವಯಸ್ಸು ಕೇವಲ 11 ವರ್ಷ. ನಿರ್ವಹಿಸಿದ ಸಣ್ಣ ಪಾತ್ರದಲ್ಲಿ ಮನೋಘ್ನ ಅಭಿನಯದ ಮೂಲಕ ಮನಸ್ಸಿನಲ್ಲಿ ಉಳಿದು ಬಿಟ್ಟರು.

    ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರ

    ಭವಿಷ್ಯ ನುಡಿದಿದ್ದ ಲೀಲಾವತಿ

    ಭವಿಷ್ಯ ನುಡಿದಿದ್ದ ಲೀಲಾವತಿ

    ಅಂದು ಶ್ರೀದೇವಿಯ ಅಭಿನಯ ಮತ್ತು ಸೌಂದರ್ಯ ನೋಡಿ ಹಿರಿಯ ನಟಿ ಲೀಲಾವತಿ ಅವರು ಆರ್ಶೀವಾದ ಮಾಡಿದ್ದರು. ''ನೀನೊಬ್ಬ ದೊಡ್ಡ ನಟಿಯಾಗುವೆ'' ಎಂದು ಮನಸ್ಸಿನಿಂದ ಹಾರೈಸಿದ್ದರು. ಅದರಂತೆ ಶ್ರೀದೇವಿ ಕೂಡ ದೊಡ್ಡ ಸ್ಟಾರ್ ಆಗಿ ಬೆಳೆದರು.

    ಶ್ರೀದೇವಿ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿಶ್ರೀದೇವಿ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ

    ಬಾಲ ಕಲಾವಿದೆ

    ಬಾಲ ಕಲಾವಿದೆ

    'ಭಕ್ತ ಕುಂಬಾರ' ಚಿತ್ರದಲ್ಲಿ ನಟಿಸಿದ ನಂತರ 'ಬಾಲ ಭಾರತ', 'ಸಂಪೂರ್ಣ ರಾಮಾಯಣ' ಹಾಗೂ 'ಯಶೋಧ ಕೃಷ್ಣ' ಚಿತ್ರದಲ್ಲೂ ಶ್ರೀದೇವಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದರು.

    ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಪ್ರೀತಿಸುತ್ತಲೇ ದ್ವೇಷಿಸಿದ ಆರ್.ಜಿ.ವಿಯ ಈ ಪತ್ರ

    ಹೆಣ್ಣು ಸಂಸಾರದ ಕಣ್ಣು

    ಹೆಣ್ಣು ಸಂಸಾರದ ಕಣ್ಣು

    ಬಾಲನಟಿಯಾಗಿ ನಟಿಸಿ ಯಶಸ್ಸು ಕಂಡಿದ್ದ ಶ್ರೀದೇವಿ 1975ರಲ್ಲಿ ತೆರೆಕಂಡ 'ಹೆಣ್ಣು ಸಂಸಾರದ ಕಣ್ಣು' ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದರು. ಶೇಷಗಿರಿ ರಾವ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರದಲ್ಲಿ ಶ್ರೀನಾಥ್ ಮತ್ತು ಮಂಜುಳಾ ನಾಯಕ, ನಾಯಕಿಯಾಗಿದ್ದರು. ಈ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದರೂ ಎಲ್ಲರ ಗಮನ ಸೆಳೆಯುವಂತಹ ಅಭಿನಯ ಮಾಡಿದ್ದರು.

    'ಚಿತ್ರರಂಗಕ್ಕೆ ಇರುವುದು ಒಬ್ಬರೇ ಶ್ರೀ ದೇವಿ' ಎಂದ ನಟ ಯಶ್'ಚಿತ್ರರಂಗಕ್ಕೆ ಇರುವುದು ಒಬ್ಬರೇ ಶ್ರೀ ದೇವಿ' ಎಂದ ನಟ ಯಶ್

    ಅಂಬಿ-ರಜನಿ ಜೊತೆ ಅಭಿನಯ

    ಅಂಬಿ-ರಜನಿ ಜೊತೆ ಅಭಿನಯ

    1978ರಲ್ಲಿ ತೆರೆಕಂಡ 'ಪ್ರಿಯಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಶ್ರೀಮುತ್ತುರಾಮನ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಂಬರೀಷ್ ಜತೆ ಶ್ರೀದೇವಿ ತೆರೆ ಹಂಚಿಕೊಂಡಿದ್ದರು.

    ಅಸುನೀಗಿದ ಶ್ರೀದೇವಿ ಬಗ್ಗೆ ಕೆಲ ವಿಶಿಷ್ಟ ಸಂಗತಿಗಳುಅಸುನೀಗಿದ ಶ್ರೀದೇವಿ ಬಗ್ಗೆ ಕೆಲ ವಿಶಿಷ್ಟ ಸಂಗತಿಗಳು

    ನಂತರ ಕನ್ನಡಕ್ಕೆ ಬರಲೇ ಇಲ್ಲ

    ನಂತರ ಕನ್ನಡಕ್ಕೆ ಬರಲೇ ಇಲ್ಲ

    ಇಲ್ಲಿಂದ ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡ ಶ್ರೀದೇವಿ ಮತ್ತೆ ಕನ್ನಡದಲ್ಲಿ ಅಭಿನಯಿಸಲಿಲ್ಲ. ನೋಡು ನೋಡುತ್ತಿದ್ದಂತೆ ದಕ್ಷಿಣ ಭಾರತದ ಎವರ್ ಗ್ರೀನ್ ನಟಿಯಾಗುವಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಮತ್ತೊಂದೆಡೆ ಬಾಲಿವುಡ್ ನಲ್ಲೂ ಮೋಡಿ ಮಾಡಿದರು.

    English summary
    Sridevi has acted in a few Kannada films in her five-decade career in celluloid. She had acted in Bhakta Kumbara (1974), Bala Bharata, Sampoorna Ramayanam and Yashoda Krishna. Later, she essayed a role in Hennu Samsarada Kannu (1975 ).
    Monday, February 26, 2018, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X