For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.!

  By Bharath Kumar
  |

  ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಅಕಾಲಿಕ, ಅನಿರೀಕ್ಷಿತ ಸಾವನ್ನ ಯಾರೊಬ್ಬರು ಮರೆಯವುದಿಲ್ಲ. ಫೆಬ್ರವರಿ 24ರಂದು ಸಂಬಂಧಿಕರ ಮದುವೆಗೆಂದು ಹೋಗಿದ್ದ ಶ್ರೀದೇವಿ ದುಬೈನ ಹೋಟೆಲ್ ನ ಬಾತ್ ಟಾಬ್ ನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದರು.

  ಆರಂಭದಲ್ಲಿ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಯಿತು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ದುಬೈ ಪೊಲೀಸರು ಅಕಸ್ಮಾತ್ತಾಗಿ ಬಾತ್ ಟಾಬ್ ನಲ್ಲಿ ಮುಳಗಿ ನಿಧನ ಹೊಂದಿದ್ದಾರೆ ಎಂದು ವರದಿ ನೀಡಿದರು.

  ಶ್ರೀದೇವಿ ಸಾವಿನ ಪ್ರಕರಣಕ್ಕೆ ಮರುಜೀವ: ಸುಪ್ರೀಂ ಅಂಗಳದಲ್ಲಿ ಡೆತ್ ಮಿಸ್ಟರಿ.! ಶ್ರೀದೇವಿ ಸಾವಿನ ಪ್ರಕರಣಕ್ಕೆ ಮರುಜೀವ: ಸುಪ್ರೀಂ ಅಂಗಳದಲ್ಲಿ ಡೆತ್ ಮಿಸ್ಟರಿ.!

  ಆದ್ರೆ, ಶ್ರೀದೇವಿ ಸಾವಿನ ಬಗ್ಗೆ ತನಿಖೆ ಮಾಡಬೇಕು, ಇದು ಸಹಜ ಸಾವಲ್ಲ ಎಂದು ಈ ಹಿಂದೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಷ್ಟೇ ಅನುಮಾನಗಳನ್ನ ವ್ಯಕ್ತಪಡಿಸಿದರೂ, ಸರ್ವೋಚ್ಚ ನ್ಯಾಯಾಲಯ ಮಾತ್ರ ಈ ಅರ್ಜಿಗಳನ್ನ ಪರಿಷ್ಕರಿಸಲೇ ಇಲ್ಲ. ಇದೀಗ, ದೆಹಲಿಯ ಮಾಜಿ ಪೊಲೀಸ್ ಅಧಿಕಾರಿ ಶ್ರೀದೇವಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ಕೊಲೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ....

  ಮಾಜಿ ಎಸಿಪಿಯಿಂದ ಆರೋಪ

  ಮಾಜಿ ಎಸಿಪಿಯಿಂದ ಆರೋಪ

  ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ. ಅವರನ್ನ ಪ್ಲ್ಯಾನ್ ಮಾಡಿ ಕೊಲೆ ಮಾಡಲಾಗಿದೆ ಎಂದು ದೆಹಲಿಯ ಮಾಜಿ ಎಸಿಪಿ ವೇದ್ ಭೂಷಣ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಸಾವಿನ ಬಗ್ಗೆ ನನಗೆ ಅನುಮಾನ ಇದೆ ಎಂದು ಹೇಳಿದ್ದು, ಇದು ಬಾಲಿವುಡ್ ಮಂದಿಗೆ ಅಚ್ಚರಿಯಾಗಿದೆ.

  ಶ್ರೀದೇವಿ ಸಾವಿನ ತನಿಖೆ ಅಗತ್ಯ

  ಶ್ರೀದೇವಿ ಸಾವಿನ ತನಿಖೆ ಅಗತ್ಯ

  ದುಬೈ ಪೊಲೀಸರು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿ ಬಗ್ಗೆ ನನಗೆ ಅನುಮಾನವಿದೆ. ಬಾತ್ ಟಾಬ್ ನಲ್ಲಿ ಬಲವಂತವಾಗಿ ಮುಳುಗಿಸಿ ಸಾಯಿಸಬಹುದು. ನಂತರ ಸಹಜವಾಗಿ ಬಿದ್ದರು ಎಂದು ತಪ್ಪಿಸಿಕೊಳ್ಳಬಹುದು. ಶ್ರೀದೇವಿ ಅವರ ವಿಚಾರದಲ್ಲೂ ಅಷ್ಟೇ. ಅವರು ದುರದೃಷ್ಟವಶಾತ್ ಸಾಯಲಿಲ್ಲ. ಯಾರೋ ಪ್ಲ್ಯಾನ್ ಮಾಡಿ ಕೊಂದಿದ್ದಾರೆ'' ಎಂದು ಶಂಕೆ ಹೊರಹಾಕಿದ್ದಾರೆ.

  ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?! ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

  ತನಿಖೆಗೆ ಮುಂದಾಗ್ತಾರ ವೇದ್ ಭೂಷಣ್.?

  ತನಿಖೆಗೆ ಮುಂದಾಗ್ತಾರ ವೇದ್ ಭೂಷಣ್.?

  ಅಂದ್ಹಾಗೆ, ಮಾಜಿ ಎಸಿಪಿ ವೇದ್ ಭೂಷಣ್ ಅವರು ಈಗ ಖಾಸಗಿಯಾಗಿ ತನಿಖೆ ಸಂಸ್ಥೆಯನ್ನ ನಡೆಸುತ್ತಿದ್ದಾರೆ. ಬಹುಶಃ ಶ್ರೀದೇವಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಇವರು ವೈಯಕ್ತಿಕ ಆಸಕ್ತಿಯಿಂದ ತನಿಖೆ ನಡೆಸಲು ಮುಂದಾಗಬಹುದು ಎಂದು ಹೇಳಲಾಗ್ತಿದೆ.

  ಕೋರ್ಟ್ ಯಾಕೆ ಅರ್ಜಿ ತಿರಸ್ಕರಿಸುತ್ತಿದೆ

  ಕೋರ್ಟ್ ಯಾಕೆ ಅರ್ಜಿ ತಿರಸ್ಕರಿಸುತ್ತಿದೆ

  ಈಗಾಗಲೇ ಶ್ರೀದೇವಿನ ಬಗ್ಗೆ ತನಿಖೆ ನಡೆಸಿ ಎಂದು ಮೂರ್ನಾಲ್ಕು ಅರ್ಜಿಗಳು ಸುಪ್ರೀಂ ಕೋರ್ಟ್ ಬಾಗಿಲು ಮುಟ್ಟಿದ್ದರು, ಆ ಅರ್ಜಿಗಳನ್ನ ನ್ಯಾಯಾಲಯ ತಿರಸ್ಕರಿಸುತ್ತಲೇ ಇದೆ. ಯಾಕೆ ತನಿಖೆಗೆ ಆದೇಶ ನೀಡುತ್ತಿಲ್ಲ ಎಂಬ ಪ್ರಶ್ನೆ ಹಲವರದ್ದು.?

  ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

  English summary
  Assistant Commissioner of Police in Delhi, Ved Bhushan, has claimed that Sridevi’s death looks more like a planned murder than an accident. Ved Bhushan runs a private investigation agency.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X