For Quick Alerts
  ALLOW NOTIFICATIONS  
  For Daily Alerts

  ಚಿಪ್ಸ್ ಕೊಟ್ರೆ ಬಿಸ್ಕೇಟ್ ಕೊಡ್ತೀನಿ; ಮಗುವಿನ ಜೊತೆ ನಟ ಶ್ರೀಮುರಳಿ ಆಟ

  |

  ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ 'ಮದಗಜ' ಸಿನಿಮಾದ ಚಿತ್ರೀಕರಣ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರೀಕರಣ ನಡುವೆ ಶ್ರೀಮುರಳಿ ಮಗುವಿನ ಜೊತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

  ಚಿಪ್ಸ್ ಕೊಟ್ರೆ ಬಿಸ್ಕೇಟ್ ಕೊಡ್ತೀನಿ, ಮಗುವಿನ ಜೊತೆ ಶ್ರೀಮುರಲಿ ಮುದ್ದಾದ ಆಟ

  ಚಿತ್ರೀಕರಣ ಸೆಟ್ ನಲ್ಲಿ ಬಿಡುವಿನ ವೇಳೆ ಶ್ರೀಮುರಳಿ ಮುದ್ದಾದ ಮಗುವಿನ ಜೊತೆ ಚಿಪ್ಸ್, ಬೆಸ್ಕೇಟ್ ಆಟವಾಗಿದ್ದಾರೆ. ಚಿಪ್ಸ್ ಕೊಟ್ರೆ ಬೆಸ್ಕೇಟ್ ಕೊಡ್ತೀನಿ ಅಂತ ಮಗುವನ್ನು ಕಾಡಿಸುತ್ತಿದ್ದಾರೆ. ಮಗು ಶ್ರೀಮುರಳಿ ಬಳಿಯೂ ಬರುವುದಿಲ್ಲ. ಅಲ್ಲದೇ ಚಿಪ್ಸ್ ಕೊಡಲು ನಿರಾಕರಿಸಿತು. ಬಳಿಕ ಬಿಸ್ಕೇಟ್ ಕೊಡ್ತೀನಿ ಚಿಪ್ಸ್ ಕೊಡು ಎಂದು ರೋರಿಂಗ್ ಸ್ಟಾರ್ ಕಾಡಿಸಿದ್ದಾರೆ. ಬಳಿಕ ಶ್ರೀಮುರಳಿಗೆ ಚಿಪ್ಸ್ ತಿನಿಸಿದ್ದಾರೆ.

  ಇದೇ ವೇಳೆ ಶ್ರೀಮುರಳಿ ಮಕ್ಕಳಿಗೆ ಯಾರ ಬಳಿಯೂ ಹೋಗದಂತೆ, ಯಾರು ಮುಟ್ಟದಂತೆ ಪೋಷಕರು ಚೆನ್ನಾಗಿ ಹೇಳಿಕೊಟ್ಟಿದ್ದಾರೆ, ಅದು ತುಂಬಾ ಒಳ್ಳೆಯದು. ನನ್ನ ಮಕ್ಕಳನ್ನು ಸಹ ಮುಟ್ಟಲು ಬಿಡುತ್ತಿರಲಿಲ್ಲ. ಮಗಳನ್ನು ಫೋಟೋತೆಗಿಲಿಕ್ಕೂ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

  ಸದ್ಯ ಮದಗಜ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಇತ್ತೀಚಿಗಷ್ಟೆ ಮದಗಜ ಚಿತ್ರೀಕರಣ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದು ಕೆಲವು ದಿನಗಳು ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.

  ಚಿತ್ರದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಬಿದ್ದು ಗಾಯಕೊಂಡಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆಕ್ಷನ್ ದೃಶ್ಯ ಸೆರೆಹಿಡಿಯಲು ಅದ್ದೂರಿ ಸೆಟ್ ಕೂಡ ನಿರ್ಮಾಣಮಾಡಲಾಗಿತ್ತು. ಚಿತ್ರದ ಅತೀ ದೊಡ್ಡ ಫೈಟ್ ದೃಶ್ಯ ಇದಾಗಿದ್ದು, ಸುಮಾರು 300ಕ್ಕೂ ಅಧಿಕ ಜೂನಿಯರ್ ಕಲಾವಿದರು ಆಕ್ಷನ್ ದೃಶ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

  Sriimurali playing with a kid in Madhagaja Shooting Set ; Watch Video

  ಈ ವೇಳೆ ಶ್ರೀಮುರಳಿ ಕಾಲಿಗೆ ಏಟಾಗಿತ್ತು. ಕಾಲಿಗೆ ಪೆಟ್ಟು ಬೀಳುತ್ತಿದ್ದಂತೆ ಶ್ರೀಮುರಳಿ ಸ್ಥಳದಲ್ಲೇ ಕುಸಿದಿದ್ದರು. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಶ್ರೀಮುರಳಿ 15 ದಿನಗಳು ಸಂಪೂರ್ಣ ವಿಶ್ರಾಂತಿ ಪಡೆದಿದ್ದರು. ಇನ್ನೇನು ಚಿತ್ರೀಕರಣ ಪ್ರಾರಂಭ ಮಾಡಲು ಶುರುವಾಗುತ್ತಿದ್ದಂತೆ ಕೊರೊನಾ ಲಾಕ್ ಡೌನ್ ಶುರುವಾಯಿತು. ಮತ್ತೆ ಚಿತ್ರೀಕರಣ ಸ್ಥಗಿತ ಮಾಡಲಾಯಿತು. ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಲಾಗಿದೆ.

  ಅಂದಹಾಗೆ ಮದಗಜ ಸಿನಿಮಾ ಸೆಟ್ಟೇರಿ ಎರಡು ವರ್ಷದ ಮೇಲಾಗಿದೆ. ಕೊರೊನಾ ಕಾರಣದಿಂದ ತಡವಾಗಿದ್ದ ಸಿನಿಮಾಗೆ ಲಾಕ್ ಡೌನ್ ಬಳಿಕ ಮತ್ತೆ ಕಿಕ್ ಸ್ಟಾರ್ಟ್ ನೀಡಲಾಗಿದೆ. ಇನ್ನು ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಆಶಿಕಾ ಹಳ್ಳಿ ಹುಡುಗಿಯಾಗಿ ಮತ್ತು ಮಾಡ್ರನ್ ಲುಕ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಆಶಿಕಾ ಹುಟ್ಟುಹಬ್ಬದ ಪ್ರಯುಕ್ತ ಖಡಕ್ ಲುಕ್ ಬಿಡುಗಡೆ ಮಾಡುವ ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ.

  ಈ ಹಿಂದೆ ಚಿತ್ರದಿಂದ ಆಶಿಕಾ ಅವರ ಹಳ್ಳಿ ಲುಕ್ ಬಿಡುಗಡೆಯಾಗಿತ್ತು. ಮುಗ್ಧ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದ ಆಶಿಕಾ ದಿಢೀರ್ ಅಂತ ಬೋಲ್ಡ್ ಅವತಾರ ತಾಳಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಆಶಿಕಾ ಇದುವರೆಗೂ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಗ್ಲಾಮರ್ ಜೊತೆಗೆ ಸೀದಸಾದ ಹುಡುಗಿಯಾಗಿ ತೆರೆಮೇಲೆ ಬರುತ್ತಿದ್ದ ಆಶಿಕಾ ಇದೀಗ ಸಿಗರೇಟ್ ಹಿಡಿದು ಶಾಕ್ ನೀಡಿದ್ದರು.

  ಇನ್ನು ಚಿತ್ರದಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ನಟಿಸಿದ್ದಾರೆ. ಈಗಾಗಲೇ ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿರುವ ಮದಗಜ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Actor Sriimurali playing with a kid in Madhagaja Shooting Set; Watch Video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X