For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್: ವಿಶೇಷ ದಿನ ಸೆಟ್ಟೇರಲಿದೆ ಸಿನಿಮಾ

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಸಿನಿಮಾದ ನಂತರ ಮುಂದಿನ ಸಿನಿಮಾಗೆ ಸಮಯ ತೆಗೆದುಕೊಂಡಿದ್ದಾರೆ. ಶ್ರೀಮುರಳಿ ಮುಂದಿನ ಸಿನಿಮಾ 'ಮದಗಜ' ಎನ್ನುವುದು ಈಗಾಗಲೆ ಗೊತ್ತಿರುವ ವಿಚಾರ. ಆದರೆ ಯಾವಾಗ ಸೆಟ್ಟೇರುತ್ತೆ, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತೆ ಎನ್ನುವ ಮಾಹಿತಿ ಬಹಿರಂಗವಾಗಿರಲಿಲ್ಲ.

  ಕನ್ಫರ್ಮ್ ಆಯ್ತು ಶ್ರೀ ಮುರಳಿ ಮುಂದಿನ ಚಿತ್ರ | SRI MURALI | MADAGAJA | FILMIBEAT KANNADA

  ಚಿತ್ರದ ಟೈಟಲ್ ಬದಲಾಗುತ್ತೆ, ಕಥೆಯಲ್ಲಿ ಬದಲಾವಣೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಚಿತ್ರ ಮದಗಜ ಹೆಸರಿನಲ್ಲಿಯೆ ಸೆಟ್ಟೇರಲಿದ್ದು, ಸಿನಿಮಾಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಶ್ರೀಮುರಳಿ ಮುಂದಿನ ಸಿನಿಮಾಗೆ ವಿಶೇಷ ದಿನದಂದು ಚಾಲನೆ ಸಿಗಲಿದೆ.

  ಹೌದು, ಮುಂದಿನ ತಿಂಗಳು 21ಕ್ಕೆ ಅಂದರೆ ಶಿವರಾತ್ರಿಯ ದಿನ ಮದಜಗ ಸಿನಿಮಾ ಸೆಟ್ಟೇರಲಿದೆ. ಆಯೋಗ್ಯ ಖ್ಯಾತಿಯ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್ ಮೂಲಕವೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

  ಫೆಬ್ರವರಿ 21ಕ್ಕೆ ಮುಹೂರ್ತ ಆಗುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ ಮದಗಜ ಟೀಂ. ವಾರಣಾಸಿಯಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಸದ್ಯ ಶ್ರೀಮುರಳಿ ಬಿಟ್ಟರೆ ಚಿತ್ರಕ್ಕೆ ಉಳಿದ ಕಲಾವಿದರು ಮತ್ತು ತಂತ್ರಜ್ಞರು ಫೈನಲ್ ಆಗಿಲ್ಲ. ವಿಶೇಷ ಅಂದರೆ ಶ್ರೀಮುರಳಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Kannada Actor Sriimurali starrer Madagaja film Muhurath for Shivaratri on February 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X