»   » ಶಿವಣ್ಣ-ಸುದೀಪ್ ಜೊತೆ 'ದಿ ವಿಲನ್' ಚಿತ್ರದಲ್ಲಿ ಟಾಲಿವುಡ್ ಸ್ಟಾರ್.! ಯಾರವರು.?

ಶಿವಣ್ಣ-ಸುದೀಪ್ ಜೊತೆ 'ದಿ ವಿಲನ್' ಚಿತ್ರದಲ್ಲಿ ಟಾಲಿವುಡ್ ಸ್ಟಾರ್.! ಯಾರವರು.?

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಒಟ್ಟಾಗಿ ನಟಿಸಲಿರುವ 'ದಿ ವಿಲನ್' ಚಿತ್ರದ ಬಗ್ಗೆ ಎಲ್ಲೆಲ್ಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರುವಾಗಲೇ, 'ದಿ ವಿಲನ್' ಚಿತ್ರತಂಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ.

ಅದೇನಪ್ಪಾ ಅಂದ್ರೆ, 'ದಿ ವಿಲನ್' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೊತೆ ಟಾಲಿವುಡ್ ಸ್ಟಾರ್ ಒಬ್ಬರು ನಟಿಸುತ್ತಿದ್ದಾರೆ. ಯಾರವರು ಅಂತ ತಿಳಿದುಕೊಳ್ಳುವ ಕುತೂಹಲ ಇದ್ಯಾ.? ಹಾಗಾದ್ರೆ, ಸಂಪೂರ್ಣ ವರದಿ ಓದಿರಿ....

'ದಿ ವಿಲನ್' ಚಿತ್ರದಲ್ಲಿ ಟಾಲಿವುಡ್ ಹೀರೋ.!

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳಲಿರುವ ಟಾಲಿವುಡ್ ಹೀರೋ ಇವರೇ... ಶ್ರೀಕಾಂತ್. ['ಫೇಸ್ ಬುಕ್ ಲೈವ್'ನಲ್ಲಿ ಸುದೀಪ್: 'ದಿ ವಿಲನ್' ಕಥೆ ಬಿಚ್ಚಿಟ್ಟ ಕಿಚ್ಚ]

'ದಿ ವಿಲನ್' ಚಿತ್ರದಲ್ಲಿ ಶ್ರೀಕಾಂತ್

'ದಿ ವಿಲನ್' ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಕೂಡ ಅಭಿನಯಿಸುತ್ತಿದ್ದಾರೆ.['ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?]

ಗಾಸಿಪ್ ಅಲ್ಲ.!

ಹೇಳಿ ಕೇಳಿ, 'ದಿ ವಿಲನ್' ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಲಿರುವ ಸಿನಿಮಾ. ಹೀಗಾಗಿ ಇದು ಹೊಸ ಗಾಸಿಪ್ ಇರಬಹುದು ಅಂತ ಭಾವಿಸಬೇಡಿ. ಇದು ಗಾಸಿಪ್ ಅಲ್ಲ. ಹಂಡ್ರೆಡ್ ಪರ್ಸೆಂಟ್ ನಿಜ.

ಶ್ರೀಕಾಂತ್ ರವರೇ ಕನ್ಫರ್ಮ್ ಮಾಡಿದ್ದಾರೆ.!

'ದಿ ವಿಲನ್' ಚಿತ್ರದಲ್ಲಿ ನಟಿಸುವುದಾಗಿ ಸ್ವತಃ ಶ್ರೀಕಾಂತ್ ರವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಶ್ರೀಕಾಂತ್ ಟ್ವೀಟ್

''ಕನ್ನಡದ ಸೂಪರ್ ಸ್ಟಾರ್ಸ್ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ'' ಅಂತ ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.

ಶ್ರೀಕಾಂತ್ ರವರ ಪಾತ್ರವೇನು.?

'ದಿ ವಿಲನ್' ಚಿತ್ರದಲ್ಲಿ ಶ್ರೀಕಾಂತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಷ್ಟೇ ಸದ್ಯಕ್ಕೆ ಖಾಸ್ ಖಬರ್. 'ದಿ ವಿಲನ್' ಸಿನಿಮಾ ಶ್ರೀಕಾಂತ್ ಅಭಿನಯಿಸಲಿರುವ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದು ಮೊದಲೇನಲ್ಲ.!

ಟಾಲಿವುಡ್ ನಟ ಶ್ರೀಕಾಂತ್ ಕನ್ನಡದಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ 'ಹೆಂಡತಿ ಹೇಳಿದರೆ ಕೇಳಬೇಕು', 'ಉಗಾದಿ'ಯಂತಹ ಕನ್ನಡ ಚಿತ್ರಗಳಲ್ಲಿ ಶ್ರೀಕಾಂತ್ ಅಭಿನಯಿಸಿದ್ದಾರೆ.

ಕನ್ನಡಿಗ ಶ್ರೀಕಾಂತ್

ಟಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಹುಟ್ಟಿ-ಬೆಳೆದಿದ್ದೆಲ್ಲ ಕರ್ನಾಟಕದಲ್ಲೇ. ಗಂಗಾವತಿಯಲ್ಲಿ ಹುಟ್ಟಿದ ಶ್ರೀಕಾಂತ್, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಪದವಿ ಪಡೆದವರು.

'ದಿ ವಿಲನ್' ಶೂಟಿಂಗ್ ಯಾವಾಗ.?

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ದಿ ವಿಲನ್' ಚಿತ್ರೀಕರಣ ಇನ್ನೂ ಶುರು ಆಗಿಲ್ಲ. ಆದ್ರೆ, ಪ್ರೀ-ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.

'ದಿ ವಿಲನ್'ಗಾಗಿ ಸುದೀಪ್ ಹೊಸ ಹೇರ್ ಸ್ಟೈಲ್

'ಹೆಬ್ಬುಲಿ' ಚಿತ್ರಕ್ಕಾಗಿ ವಿಭಿನ್ನ ಹೇರ್ ಕಟ್ ಮಾಡಿಸಿಕೊಂಡಿದ್ದ ಕಿಚ್ಚ ಸುದೀಪ್, 'ದಿ ವಿಲನ್' ಚಿತ್ರಕ್ಕೂ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ 'ದಿ ವಿಲನ್' ಸಿನಿಮಾದಲ್ಲಿನ ಸುದೀಪ್ ಲುಕ್ ರಿವೀಲ್ ಆಗಲಿದೆ.

English summary
Tollywood Actor Srikanth is all set to share screen space with Kannada Actor Shiva Rajkumar and Kiccha Sudeep in Prem Directorial 'The Villain'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada