For Quick Alerts
  ALLOW NOTIFICATIONS  
  For Daily Alerts

  ಚಿನ್ನದ ಪದಕ ಗೆದ್ದ ಹಿಮಾದಾಸ್ ಗೆ ಶುಭಕೋರಿದ ಶ್ರೀಮುರಳಿ-ದುನಿಯಾ ವಿಜಿ

  By Bharath Kumar
  |

  ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹಿಮಾದಾಸ್ ಗೆ ದೇಶದಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

  ಚಿರತೆಯ ವೇಗದಲ್ಲಿ ಗುರಿ ಮುಟ್ಟಿದ ಹಿಮಾದಾಸ್ ಅವರ ಓಟ ನೋಡಿ ಖ್ಯಾತ ಕ್ರೀಡಾ ಪಟುಗಳು, ಕ್ರಿಕೆಟ್‌ ಆಟಗಾರರು, ಬಾಲಿವುಡ್‌ ದಿಗ್ಗಜರು, ಸಿನಿಮಾ ನಟ ನಟಿಯರು ಥ್ರಿಲ್ ಆಗಿದ್ದಾರೆ.

  ಇತ್ತ ನಮ್ಮ ಕನ್ನಡದ ಸಿನಿ ತಾರೆಯರು ಕೂಡ ಹಿಮಾದಾಸ್ ಗೆ ಸಲ್ಯೂಟ್ ಮಾಡಿದ್ದಾರೆ. ಬಡತನದಲ್ಲಿ ಬೆಳದು ಬಂದ ಹಿಮಾ ಮಾಡಿದ ಸಾಧನೆಗೆ ತಲೆಬಾಗಿದ್ದಾರೆ. ಅದರಲ್ಲೂ ನಟ ಶ್ರೀಮುರಳಿ ಮತ್ತು ದುನಿಯಾ ವಿಜಯ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಲ್ಯೂಟ್ ಮಾಡಿದ ಶ್ರೀಮುರಳಿ

  ಸಲ್ಯೂಟ್ ಮಾಡಿದ ಶ್ರೀಮುರಳಿ

  ಹಿಮಾದಾಸ್ ಸಾಧನೆಗೆ ನನ್ನ ಸಲ್ಯೂಟ್. 18 ವರ್ಷದ ಹುಡುಗಿ ಎಷ್ಟು ಚೆನ್ನಾಗಿ ತನ್ನನ್ನು ತಾನು ಹ್ಯಾಂಡಲ್‌ ಮಾಡಿದ್ದಾಳೆ ಎಂದರೆ ನಿಜಕ್ಕೂ ಅದ್ಭುತ. ನನಗೆ ಅದನ್ನು ನೋಡಿ ಬಹಳ ಥ್ರಿಲ್ ಆಯಿತು. ಆಕೆ ಬಹಳ ಇಂಟೆಲಿಜೆಂಟ್‌, ದೈಹಿಕವಾಗಿ ಸಮರ್ಥಳು. ನಿಜಕ್ಕೂ ಹಿಮಾದಾಸ್ ಸಾಧನೆ ಅಮೇಜಿಂಗ್..''ಎಂದು ಶ್ರೀಮುರಳಿ ಹಾಡಿಹೊಗಳಿದ್ದಾರೆ.

  ಹಿಮಾ ದಾಸ್ ದೇಶಭಕ್ತಿ ಮೆಚ್ಚಿಕೊಂಡ ಪ್ರಧಾನಿ ನರೇಂದ್ರ ಮೋದಿ

  ದುನಿಯಾ ವಿಜಯ್

  ದುನಿಯಾ ವಿಜಯ್

  ''ಅಸ್ಸಾಂ ಬಡ ಕುಟುಂಬದಲ್ಲಿ ಜನಿಸಿ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಹಿಮದಾಸ್ ಸಹೋದರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಇಂತಹ ಅಪ್ಪಟ ಪ್ರತಿಭೆಗಳಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳು ಗಮನ ಹರಿಸಬೇಕು. ಹಿಮದಾಸ್ ರ ಸಾಧನೆ ಇನ್ನಷ್ಟು ಮಂದಿ ಸಹೋದರಿಯರಿಗೆ ಸ್ಫೂರ್ತಿಯಾಗಲಿ'' ಎಂದು ದುನಿಯಾ ವಿಜಯ್ ಆಶಿಸಿದ್ದಾರೆ.

  ಶೂಟಿಂಗ್: ಭಾರತಕ್ಕೆ ಬಂಗಾರ ಗೆದ್ದ ಮನು ಭಾಕರ್-ಅನ್ಮೋಲ್ ಜೋಡಿ

  ಅನುಷ್ಕಾ ಶರ್ಮಾ

  ಅನುಷ್ಕಾ ಶರ್ಮಾ

  ಬಾಲಿವುಡ್ ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಿಮಾದಾಸ್ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದು, ''ನೀನು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದೀರಾ. ಇದು ಮಹಾನ್ ಸಾಧನೆ, ನಮ್ಮೆಲ್ಲರಿಗೂ ಹೆಮ್ಮೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಶಾರೂಖ್ ಫುಲ್ ಹ್ಯಾಪಿ

  ಶಾರೂಖ್ ಫುಲ್ ಹ್ಯಾಪಿ

  ಭಾರತದ ತ್ರಿವರ್ಣ ಧ್ವಜವನ್ನ ಫಿನ್ ಲ್ಯಾಂಡ್ ನಲ್ಲಿ ಹಾರಾಡಿಸಿದ ಹಿಮಾದಾಸ್ ಗೆ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮನಪೂರ್ವಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

  ಮಹೇಶ್ ಬಾಬು

  ಮಹೇಶ್ ಬಾಬು

  ''ಭಾರತದ ಕ್ರೀಡೆಯ ಇತಿಹಾಸದಲ್ಲೇ ಇದು ಅತಿ ದೊಡ್ಡ ಸಾಧನೆ. ಹಿಮಾದಾಸ್ ಅವರ ಈ ಸಾಧನೆಗೆ ನಾವು ಹೆಮ್ಮೆಪಡಲೆ ಬೇಕು'' ಎಂದು ತೆಲುಗು ನಟ ಮಹೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

  ಅಥ್ಲಿಟ್‌ ಹಿಮಾ ದಾಸ್‌ಗೆ 10 ಲಕ್ಷ ಬಹುಮಾನ ಘೋಷಿಸಿದ ಪರಮೇಶ್ವರ್‌

  ರಾಜಮೌಳಿ ಖುಷಿ

  ರಾಜಮೌಳಿ ಖುಷಿ

  ಹಿಮಾದಾಸ್ ಅವರ ಸಾಧನೆಯ ಬಗ್ಗೆ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿದ್ದು, ''400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯ ಸಾಧನೆ ಭಾರತೀಯರ ಹೆಮ್ಮೆ'' ಎಂದಿದ್ದಾರೆ.

  English summary
  sandalwood celebrities like, srimurali, duniya vijay congratulated Indian athlete Hima Das who created history by winning gold in the women’s 400 metre event at the IAAF World U20 in Finland.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X