»   » ಡಿಸೆಂಬರ್ 4ಕ್ಕೆ ನಿಮ್ಮ ಮುಂದೆ 'ರಥಾವರ'ನ ದರ್ಶನ..!

ಡಿಸೆಂಬರ್ 4ಕ್ಕೆ ನಿಮ್ಮ ಮುಂದೆ 'ರಥಾವರ'ನ ದರ್ಶನ..!

Posted By:
Subscribe to Filmibeat Kannada

'ಉಗ್ರಂ' ಶ್ರೀಮುರಳಿ ಅವರ ಬಹುನಿರೀಕ್ಷಿತ 'ರಥಾವರ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಜೊತೆಗೆ ಡಿಸೆಂಬರ್ 4 ರಂದು ರಾಜ್ಯಾದ್ಯಂತ 'ರಥಾವರ'ನ ದರ್ಶನವಾಗಲಿದೆ.

ಆಕ್ಷನ್-ಕಮ್ ರೊಮ್ಯಾಂಟಿಕ್ 'ರಥಾವರ' ಚಿತ್ರಕ್ಕೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅವರು 'ಉಗ್ರಂ' ನಟನೊಂದಿಗೆ ಡ್ಯುಯೆಟ್ ಹಾಡಿದ್ದಾರೆ.[ದಸರಾ ಉಡುಗೊರೆ : ಶ್ರೀಮುರಳಿ 'ರಥಾವರ' ಟೀಸರ್ ಔಟ್]

Srimurali's 'Rathaavara' gets U/A certificate: Releasing on Dec 4th

ನಟ ಶ್ರೀ ಮುರಳಿ ಅವರಿಗೆ 'ಉಗ್ರಂ' ಚಿತ್ರ ಭರ್ಜರಿ ಬ್ರೇಕ್ ನೀಡಿತ್ತು. ಅದರಂತೆ ಇದೀಗ ಬಹುನಿರೀಕ್ಷಿತ 'ರಥಾವರ' ಸಿನಿಮಾ ಕೂಡ ಸಿನಿರಸಿಕರಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.

ಶ್ರೀಮುರಳಿ ಅವರು 'ಉಗ್ರಂ' ಚಿತ್ರದಲ್ಲಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಂತೆ, 'ರಥಾವರ' ಚಿತ್ರದಲ್ಲೂ ಅದೇ ಖದರ್ ತೋರಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಮಾರ್ಕೆಟ್ ನಲ್ಲಿ ಹಿಟ್ ಲಿಸ್ಟ್ ಪಡೆದುಕೊಂಡಿವೆ.[ಕುಂಬಳಕಾಯಿ ಒಡೆದ 'ರಥಾವರ' ಚಿತ್ರತಂಡ]

ಅಂದಹಾಗೆ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿರುವ ಶ್ರೀಮುರಳಿ ಅವರ 'ರಥಾವರ' ಡಿಸೆಂಬರ್ 4 ರಂದು ಗ್ರ್ಯಾಂಡ್ ರಿಲೀಸ್ ಕಾಣುತ್ತಿದ್ದು, ವಿಶೇಷ ಅಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್' ಕೂಡ ಅದೇ ವಾರದಲ್ಲಿ ತೆರೆ ಕಾಣುತ್ತಿದೆ.

ಆದ್ದರಿಂದ ಯಾವ ಚಿತ್ರ ಪ್ರೇಕ್ಷಕರ ಮನಗೆಲ್ಲುತ್ತೆ ಅಂತ ಡಿಸೆಂಬರ್ ಮೊದಲ ವಾರದಲ್ಲಿ ತಿಳಿಯಲಿದೆ.

ಇದೇ ಮೊದಲ ಬಾರಿಗೆ ನಟ ಶ್ರೀಮುರಳಿ ಧ್ವನಿ ನೀಡಿರುವ 'ಹುಡುಗಿ ಕಣ್ಣು' ಹಾಡು ಮಾಸ್ ಹಿಟ್ ಆಗಿದ್ದು, ಗಾಂಧಿನಗರದ ಎಲ್ಲಾ ಅಭಿಮಾನಿಗಳ ಬಾಯಲ್ಲಿ ಗುನುಗುನಿಸುತ್ತಿದೆ.

Srimurali's 'Rathaavara' gets U/A certificate: Releasing on Dec 4th

ನಟ ಶ್ರೀಮುರಳಿ, ನಟಿ ರಚಿತಾರಾಮ್ ಸೇರಿದಂತೆ ಚಿತ್ರದಲ್ಲಿ ಪಿ.ರವಿಶಂಕರ್ ಖಳನಾಯಕನಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಕಾಮಿಡಿ ನಟ ಚಿಕ್ಕಣ್ಣ, ಸಾಧುಕೋಕಿಲ ಮತ್ತು ಚರಣ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.[ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]

ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಚಿತ್ರಕ್ಕೆ ಧರ್ಮ ವಿಶ್ ಅವರ ಸಂಗೀತ ನಿರ್ದೇಶನವಿದ್ದರೆ, 'ಉಗ್ರಂ' ಖ್ಯಾತಿಯ ಭುವನ್ ಗೌಡ ಅವರು ಚಿತ್ರಕ್ಕೆ ಕ್ಯಾಮರಾ ಕೈಚಳಕ ತೋರಿದ್ದಾರೆ.

'ಉಗ್ರಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ ನಟ ಶ್ರೀಮುರಳಿ ಅವರು 'ರಥಾವರ' ಮೂಲಕ ಮತ್ತೆ ಚಂದನವನದಲ್ಲಿ ಧೂಳೆಬ್ಬಿಸ್ತಾರಾ?, ಅಂತ ಕಾದು ನೋಡೋಣ.

English summary
'Ugramm' star Srimurali's upcoming movie 'Rathaavara' gets U/A certificate by censor board, confirms releasing on Dec 4th. Rathaavara is the action cum romantic entertainer directed by newbie Chandrashekar Bandiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada