For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದ 'ಮದಗಜ'

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಭರದಿಂದ ಚಿತ್ರೀಕರಣ ಮಾಡುತ್ತಿದೆ. ಲಾಕ್‌ಡೌನ್ ಮುಗಿದ ತಕ್ಷಣ ಎರಡನೇ ಹಂತದ ಶೂಟಿಂಗ್ ಆರಂಭಿಸಿದ್ದ ಮದಗಜ ಮೈಸೂರಿಗೆ ಹಾರಿತ್ತು. ಇದೀಗ, ಮೈಸೂರಿನಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದೆ.

  ಬೀದಿಗಿಳಿದು ಅಣ್ಣಮ್ಮ ಸ್ಟೆಪ್ ಹಾಕಿದ ಶ್ರೀಮುರಳಿ, ಕಾರಣ ಏನ್ ಗೊತ್ತಾ..? | Madhagaja | Srimurali | Filmibeat

  ಈ ಸುದ್ದಿಯನ್ನು ಸ್ವತಃ ನಿರ್ದೇಶಕ ಮಹೇಶ್ ಗೌಡ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 19 ರಂದು ಎರಡನೇ ಹಂತದ ಶೂಟಿಂಗ್ ಪ್ರಾರಂಭಿಸಲಾಗಿತ್ತು. 12 ದಿನಗಳ ಮೈಸೂರು ಶೆಡ್ಯೂಲ್ ಮುಗಿಸಲಾಗಿದೆ.

  ನಟ ಶ್ರೀಮುರಳಿಯನ್ನು ದಿಢೀರ್ ಭೇಟಿಯಾದ ಡಿ ಬಾಸ್ ದರ್ಶನ್: ಕಾರಣವೇನು?ನಟ ಶ್ರೀಮುರಳಿಯನ್ನು ದಿಢೀರ್ ಭೇಟಿಯಾದ ಡಿ ಬಾಸ್ ದರ್ಶನ್: ಕಾರಣವೇನು?

  ಇತ್ತೀಚಿಗಷ್ಟೆ ಮದಗಜ ಸೆಟ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು. ಮೈಸೂರಿನಲ್ಲಿಯೇ ಇದ್ದ ದರ್ಶನ್, ಶ್ರೀಮುರಳಿ ಸಿನಿಮಾದ ಸೆಟ್‌ಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.

  ದರ್ಶನ್ ನಟಿಸಿರುವ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರೇ ಮದಗಜ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಇನ್ನುಳಿದಂತೆ 'ಅಯೋಗ್ಯ' ಚಿತ್ರದ ಯಶಸ್ಸಿನ ನಂತರ ಮಹೇಶ್ ಗೌಡ ಮದಗಜ ನಿರ್ದೇಶಿಸುತ್ತಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

  ಶ್ರೀಮುರಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಎರಡನೇ ಹಂತ ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಮೂರನೇ ಹಂತದ ಶೂಟಿಂಗ್‌ಗೆ ಚಾಲನೆ ನೀಡಲಿದೆ.

  English summary
  Kannada actor Srimurali starrer madagaja movie second schedule completed at mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X