For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ 'ರಥಾವರ' ಆರ್ಭಟಕ್ಕೆ ಬಾಕ್ಸ್ ಫೀಸ್ ಉಡೀಸ್!

  By Harshitha
  |

  'ಉಗ್ರಂ' ವೀರಂ ಅಂತ ಕಳೆದ ವರ್ಷ ಗಲ್ಲಪೆಟ್ಟಿಗೆಯಲ್ಲಿ ಮೋಡಿ ಮಾಡಿದಂತೆ ಈ ವರ್ಷ ಕೂಡ ಶ್ರೀಮುರಳಿ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ರೋರಿಂಗ್ ಸ್ಟಾರ್!

  ಬಹುನಿರೀಕ್ಷೆಯೊಂದಿಗೆ ತೆರೆಕಂಡ 'ರಥಾವರ' ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ರಥಾವರ' ಚಿತ್ರ ಎರಡು ದಿನಗಳಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು ಗೊತ್ತಾ? ಬರೋಬ್ಬರಿ 5 ಕೋಟಿ! [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

  ಹೌದು, ನಿರ್ಮಾಪಕ ಜಯಣ್ಣ ನೀಡಿರುವ ಮಾಹಿತಿ ಪ್ರಕಾರ 'ರಥಾವರ' ಸಿನಿಮಾ ಬಿಡುಗಡೆ ಆದ ಎರಡು ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) 5 ಕೋಟಿ ಕಲೆಕ್ಷನ್ ಮಾಡಿದೆ. ಇಂದು (ಭಾನುವಾರ) ಎಲ್ಲೆಡೆ, ಎಲ್ಲಾ ಶೋಗಳು ಬುಕ್ ಆಗಿರುವ ಕಾರಣ ಇವತ್ತಿನ ಕಲೆಕ್ಷನ್ 'ಅತಿ ಹೆಚ್ಚು' ಅಂತ ಅಂದಾಜಿಸಲಾಗಿದೆ.

  ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ 'ರಥಾವರ' ಸಿನಿಮಾಗೆ ಪ್ರೇಕ್ಷಕರಿಂದ ಜೈಕಾರ ಸಿಕ್ಕಿದೆ. ಅದಕ್ಕೆ ಸಾಕ್ಷಿ ಈ ಕಲೆಕ್ಷನ್ ರಿಪೋರ್ಟ್.

  English summary
  According to the sources, Kannada Actor Sriimurali starrer Kannada Movie 'Rathaavara' box office collection is Rs.5 crore in 2 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X