For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರಕ್ಕಾಗಿ ಹೊಸ ಅವತಾರ ಎತ್ತಿದ ರೋರಿಂಗ್ ಸ್ಟಾರ್ ಶ್ರೀಮುರಳಿ

  By Harshitha
  |
  ಹೊಸಾ ಸಿನಿಮಾಗೆ ಹೊಸಾ ಅವತಾರದಲ್ಲಿ ನಟ ಶ್ರೀಮುರಳಿ | Filmibeat Kannada

  'ಉಗ್ರಂ' ವೀರಂ ಅಂತ ಗಾಂಧಿನಗರದಲ್ಲಿ ಉಗ್ರ ಪ್ರತಾಪ ಮೆರೆದಿದ್ದ ನಟ ಶ್ರೀಮುರಳಿ, 'ರಥಾವರ' ಏರಿ, ಶಿವಣ್ಣನ ಜೊತೆಗೆ 'ಮಫ್ತಿ' ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದ್ದಾಯ್ತು. ಮೂರು ವರ್ಷಗಳಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಶ್ರೀಮುರಳಿ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

  'ಬಹದ್ದೂರ್', 'ಭರ್ಜರಿ' ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಲಿರುವ ಸಿನಿಮಾಗೆ ಶ್ರೀಮುರಳಿ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸದ್ಯ 'ಪ್ರೊಡಕ್ಷನ್ 1' ಅಂತ ನಾಮಕರಣ ಮಾಡಲಾಗಿದೆ.

  ಹೇಳಿ ಕೇಳಿ ಶ್ರೀಮುರಳಿ ರೋರಿಂಗ್ ಸ್ಟಾರ್. ಅಂದ್ಮೇಲೆ, ಅವರ ಸಿನಿಮಾಗಳಲ್ಲಿ ಆಕ್ಷನ್ ಇರಲೇಬೇಕು. ಹೊಸ ಸಿನಿಮಾಗೋಸ್ಕರ ಭರ್ಜರಿ ತಯಾರಿ ನಡೆಸುತ್ತಿರುವ ಶ್ರೀಮುರಳಿಯ ಹೊಸ ಲುಕ್ ಹೇಗಿದೆ ಗೊತ್ತಾ.?

  ಹುರಿಗಟ್ಟಿದ ಮೀಸೆ ಮತ್ತು ಗಡ್ಡ ಇರುವ, ತಲೆಕೂದಲು ಪೂರ್ತಿ ಟ್ರಿಮ್ ಆಗಿರುವ ನಟ ಶ್ರೀಮುರಳಿಯ ಈ ಹೊಸ ಅವತಾರ ಚೇತನ್ ಕುಮಾರ್ ನಿರ್ದೇಶನದ 'ಪ್ರೊಡಕ್ಷನ್ 1' ಚಿತ್ರಕ್ಕಾಗಿ.

  ಚೇತನ್ ನಿರ್ದೇಶನದಲ್ಲಿ 'ಟ್ರೆಂಡ್' ಬದಲಿಸಿದ ಶ್ರೀಮುರಳಿ

  ''ಪ್ರತಿಯೊಂದು ಅನುಭವಕ್ಕೂ ಒಂದು ಕಾರಣ ಇರುತ್ತದೆ'' ಅಂತ ಸ್ಟೇಟಸ್ ಹಾಕಿ ಫೇಸ್ ಬುಕ್ ನಲ್ಲಿ ಶ್ರೀಮುರಳಿ ತಮ್ಮ ಹೊಸ ಲುಕ್ ನ ರಿವೀಲ್ ಮಾಡಿದ್ದಾರೆ. ಶ್ರೀಮುರಳಿಯ ಹೊಸ ಲುಕ್ ಗೆ ಸಾವಿರಾರು ಮಂದಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

  ಅಂದ್ಹಾಗೆ, ಈ ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಕೂಡ ಇರಲಿದೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ನಾಯಕಿಯ ಹುಡುಕಾಟದಲ್ಲಿ ನಿರ್ದೇಶಕರು ತೊಡಗಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

  English summary
  Check out the new look of Kannada Actor Srimurali for his upcoming film 'Production no.1'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X