»   » ಮೈಸೂರಿನಲ್ಲಿ ಬರ್ತ್ ಡೇ ಬಾಯ್ ಶ್ರೀಮುರಳಿ ಸಂಭ್ರಮ

ಮೈಸೂರಿನಲ್ಲಿ ಬರ್ತ್ ಡೇ ಬಾಯ್ ಶ್ರೀಮುರಳಿ ಸಂಭ್ರಮ

Posted By:
Subscribe to Filmibeat Kannada

'ಚಂದ್ರ ಚಕೋರಿ' ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಟ್ಟ ಮುದ್ದಿನ ಚಂದಮಾಮ ಶ್ರೀಮುರುಳಿಗಿಂದು ಹುಟ್ಟುಹಬ್ಬದ ಸಂಭ್ರಮ. 'ಉಗ್ರಂ' ಯಶಸ್ಸಿನೊಂದಿಗೆ ತಮ್ಮ 34ನೇ ಜನ್ಮದಿನವನ್ನು ಶ್ರೀಮುರುಳಿ ಧಮಾಕೇಧಾರ್ ಆಗಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಇಂದು ಮುಂಜಾನೆಯೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಶ್ರೀಮುರುಳಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ನಂತರ ತಮ್ಮ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು ಶ್ರೀಮುರುಳಿ. [ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]

Srimuruli's 34th Birthday-Rathavara first look out

ವರ್ಷಗಳ ನಂತ್ರ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿರುವ ಶ್ರೀಮುರುಳಿ, ಈ ಬಾರಿ ತಮ್ಮ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ. 'ಉಗ್ರಂ' ಚಿತ್ರದ ನಂತ್ರ ಶ್ರೀಮುರುಳಿ ನಟಿಸುತ್ತಿರುವ 'ರಥಾವರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ತಮ್ಮ ಫ್ಯಾನ್ಸ್ ಗೆ ಅಚ್ಚರಿ ಗಿಫ್ಟ್ ನೀಡಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಥೇಟ್ 'ಉಗ್ರಂ' ನಂತೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಶ್ರೀಮುರುಳಿಯ 'ರಥಾವರ' ಫಸ್ಟ್ ಲುಕ್ ಪೋಸ್ಟರ್ ಸಿಕ್ಕಾಪಟ್ಟೆ ಖಡಕ್ ಆಗಿದೆ. ಎಲ್ಲರ ಎದೆ ನಡುಗಿಸುವಂತೆ ಪೋಸ್ ಕೊಟ್ಟಿರುವ ಶ್ರೀಮುರುಳಿ, 'ರಥಾವರ' ಚಿತ್ರದಲ್ಲೂ ಉಗ್ರಾವತಾರ ತಾಳುವುದು ಖಚಿತ ಅಂತ ಪೋಸ್ಟರ್ರೇ ಸಾರಿ ಸಾರಿ ಹೇಳುತ್ತಿದೆ.

Srimuruli's 34th Birthday-Rathavara first look out2

ಈಗಾಗಲೇ 'ರಥಾವರ' ಚಿತ್ರ ಸದ್ದಿಲ್ಲದೇ ಶೂಟಿಂಗ್ ಆರಂಭಿಸಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ಆನೆ ಪಟಾಕಿ' ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರು, 'ರಥಾವರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?]

ಆರು ತಿಂಗಳುಗಳ ಕಾಲ 'ರಥಾವರ' ಚಿತ್ರದ ಈ ಲುಕ್ ಗಾಗಿ ಬೆವರು ಹರಿಸಿದ್ದ ಶ್ರೀಮುರುಳಿ, ಇಂದು ಅಭಿಮಾನಿಗಳಿಗೆ ದರ್ಶನ ನೀಡುವ ಮೂಲಕ ಫುಲ್ ಖುಷ್ ಆಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮದೊಂದಿಗೆ, ರಥಾವರ ಫಸ್ಟ್ ಲುಕ್ ಪೋಸ್ಟರ್ ಔಟ್. ಹೀಗೆ ಡಬಲ್ ಡಬಲ್ ಖುಷಿಯಲ್ಲಿರುವ ಶ್ರೀಮರುಳಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. (ಫಿಲ್ಮಿಬೀಟ್ ಕನ್ನಡ)

English summary
Actor Srimuruli is celebrating his 34th birthday today (December 17th). On this occasion, Srimuruli's upcoming film Rathavara's first look poster is out. Take a look at the poster.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada