»   »  'ಹೊಂಬಣ್ಣ' ಟ್ರೈಲರ್ ಗೆ ಮನಸೋತ ಶ್ರೀನಗರ ಕಿಟ್ಟಿ ಏನ್ ಹೇಳಿದ್ರು ನೋಡಿ..

'ಹೊಂಬಣ್ಣ' ಟ್ರೈಲರ್ ಗೆ ಮನಸೋತ ಶ್ರೀನಗರ ಕಿಟ್ಟಿ ಏನ್ ಹೇಳಿದ್ರು ನೋಡಿ..

Posted By:
Subscribe to Filmibeat Kannada

ಕನ್ನಡ ನೆಲದ ಇತ್ತೀಚಿನ ಹಲವು ಸಿನಿಮಾಗಳು ಇಲ್ಲಿ ತೆರೆಕಾಣುವ ಮೊದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ ಈಗ 'ಹೊಂಬಣ್ಣ' ಚಿತ್ರ ಸೇರ್ಪಡೆಗೊಂಡಿದೆ. ಈ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬ ನಟರುಗಳು ಚಿತ್ರದ ಬಗ್ಗೆ, ಚಿತ್ರಕಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭಕೋರುತ್ತಿದ್ದಾರೆ.

'ಹೊಂಬಣ್ಣ' ಟ್ರೈಲರ್‌ ನೋಡಿ ಶುಭಹಾರೈಸಿದ್ರು ಬಹುಭಾಷಾ ನಟ ಸೋನು ಸೂದ್

'ಹೊಂಬಣ್ಣ' ಚಿತ್ರದ ಟ್ರೈಲರ್ ನೋಡಿ ಕಿಚ್ಚ ಸುದೀಪ್ ಮತ್ತು ಬಹುಭಾಷಾ ನಟ ಸೋನು ಸೂದ್ ಹೊಗಳಿ, ಚಿತ್ರದ ಯಶಸ್ಸಿಗೆ ವಿಶ್ ಮಾಡಿದ್ದರು. ಈಗ ಚಿತ್ರದ ಟ್ರೈಲರ್ ನೋಡಿರುವ ಸ್ಯಾಂಡಲ್ ವುಡ್ ನ ಡೈಮೆಂಡ್ ಸ್ಟಾರ್ ಶ್ರೀನಗರ ಕಿಟ್ಟಿ ರವರು ಚಿತ್ರದ ಕಥಾವಸ್ತುವಿನ ಆಳದ ಬಗ್ಗೆ ಮನಸೋತು ಏನು ಹೇಳಿದ್ದಾರೆ ನೋಡಿ..

Srinagar Kittiy Appreciates 'Hombanna' Movie trailer

'ಈಗ ತಾನೆ ಈ ಸಿನಿಮಾ ಟ್ರೈಲರ್ ನೋಡಿದೆ. ತುಂಬಾನೆ ಪ್ರಾಮಿಸ್ಸಿಂಗ್ ಆಗಿದೆ. ತುಂಬಾನೆ ಚೆನ್ನಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ನಡೆಯುತ್ತಿರುವಂತಹ ವಿದ್ಯಾಮಾನಗಳು, ಕಾಡಿನ ಒತ್ತುವರಿ ವಿಷಯಗಳನ್ನು ಇಟ್ಟುಕೊಂಡು ಅತ್ಯುತ್ತಮವಾದ ಸಿನಿಮಾ ಮಾಡಿದ್ದಾರೆ. ಪ್ರತಿಯೊಂದು ಪಾತ್ರಗಳು, ಆ ಪಾತ್ರಗಳಲ್ಲಿನ ಮಾತುಗಳು ಎಲ್ಲವೂ ಮನಸ್ಸಿಗೆ ಮುಟ್ಟುವ ಹಾಗಿದೆ. ಪ್ಲೀಸ್ ಎಲ್ಲರೂ ನೋಡಿ ಸಿನಿಮಾ ಗೆಲ್ಲಿಸಿಕೊಡಿ. ನಮ್ಮ ಕಳಕಳಿಯನ್ನು ನಾವು ಮೆರೆಯೋಣ' ಎಂದು ಶ್ರೀನಗರ ಕಿಟ್ಟಿ ರವರು ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ. ಆ ವಿಡಿಯೋ ನೋಡಲು ಕ್ಲಿಕ್ ಮಾಡಿ .

ರಿಲೀಸ್‌ಗೂ ಮುನ್ನವೇ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು 'ಹೊಂಬಣ್ಣ'

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಚಿತ್ರ ವೆನಿಜುವೆಲಾದಲ್ಲಿ ನಡೆದ 'ಫೈವ್ ಕಾಂಟಿನೆಂಟ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್' ನಲ್ಲಿ ವಿವಿಧ ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅಲ್ಲದೇ ಇದೇ ತಿಂಗಳು ನಡೆಯಲಿರುವ 'ಮಿಯಾಮಿ ಇಂಡಿಪೆಂಡೆಂಟ್' ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆ ಆಗಿದೆ. ಈ ಚಿತ್ರವು ಇದೇ ಜುಲೈ 7 ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

English summary
Kannada Actor Srinagar Kitty has taken facebook page to appreciate Kannada Movie 'Hombanna' trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada