»   » ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ

ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಚಿತ್ರ 'ಬುಗುರಿ' ರಾಜ್ಯಾದ್ಯಂತ ರಿಲೀಸ್ ಆಗಿದೆ. ಗಣೇಶ್-ಎರಿಕಾ ಫರ್ನಾಂಡಿಸ್-ರೀಚಾ ಪನೈ ಮುಖ್ಯ ಭೂಮಿಕೆಯಲ್ಲಿರುವ 'ಬುಗುರಿ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಮಿಂಚಿದ್ದಾರೆ.

ಗಣೇಶ್ 'ಬುಗುರಿ' ಆಟ ನೋಡೋಕೆ ಹೋದ ಪ್ರೇಕ್ಷಕರಿಗೆ ಸಿಕ್ಕ ಸರ್ ಪ್ರೈಸ್ ಅಂದ್ರೆ ಇದೆ. ಇಲ್ಲಿಯವರೆಗೂ 'ಬುಗುರಿ' ಚಿತ್ರತಂಡ ಶ್ರೀನಗರ ಕಿಟ್ಟಿಯ ಸ್ಪೆಷಲ್ ರೋಲ್ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಕಿಟ್ಟಿ-ಗಣಿಯನ್ನ ಒಟ್ಟಾಗಿ ನೋಡಿ ಸಿನಿ ಪ್ರಿಯರು ಖುಷಿ ಪಟ್ಟಿದ್ದಾರೆ.


srinarag kitty ganesg

ಅಷ್ಟಕ್ಕೂ ಶ್ರೀನಗರ ಕಿಟ್ಟಿ 'ಬುಗುರಿ' ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಕಾರಣ ಗಣೇಶ್ ಮತ್ತು ಎಂ.ಡಿ.ಶ್ರೀಧರ್. ಗಣಿ ಮತ್ತು ನಿರ್ದೇಶಕ ಎಂ.ಡಿ.ಶ್ರೀಧರ್ ಗೆ ಕಿಟ್ಟಿ ಆಪ್ತ ಸ್ನೇಹಿತರು. ಇಬ್ಬರ ಸ್ನೇಹಕ್ಕೆ ಬೆಲೆ ಕೊಟ್ಟು 'ಬುಗುರಿ' ಚಿತ್ರದ ಪುಟ್ಟ ಪಾತ್ರದಲ್ಲಿ ಕಿಟ್ಟಿ ಅಭಿನಯಿಸಿದರಂತೆ. ['ಸಿಲ್ವರ್ ಜ್ಯುಬಿಲಿ' ಚಿತ್ರದ ಪ್ರಚಾರಕ್ಕೆ ಗಣೇಶ್ ಗೆ ಪುರುಸೊತ್ತಿಲ್ವ!]


ಅಂದ್ಹಾಗೆ, 'ಬುಗುರಿ' ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಸಿಕ್ಕಿದೆ. ಕುಟುಂಬ ಸಮೇತ ಕೂತು ಎಂಜಾಯ್ ಮಾಡಬಹುದಾದ ಸಿನಿಮಾ ಇದು. ವೀಕೆಂಡ್ ನಲ್ಲಿ ನೀವು ಫ್ರೀ ಇದ್ರೆ, 'ಬುಗುರಿ' ಆಟ ನೋಡೋಕೆ ಮರೀಬೇಡಿ.

English summary
Kannada Actor Srinagar Kitty has made a special appearance in Ganesh starrer 'Buguri'. The movie has hit the screens all over Karnataka this week. 'Buguri' is directed by M.D.Shridhar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada