»   » ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಗೆ ಹೈವೇಯಲ್ಲೇ ಲವ್ವು

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಗೆ ಹೈವೇಯಲ್ಲೇ ಲವ್ವು

Posted By:
Subscribe to Filmibeat Kannada

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರಿಗೆ ಹೈವೇಯಲ್ಲೇ ಲವ್ವಾಗಿದೆ. ಅವರನ್ನು ಹೈವೇ ಲವ್ ಗೆ ಇಳಿಸುತ್ತಿರುವವರು ನಿರ್ದೇಶಕರಾಗಿ ಬದಲಾಗಿರುವ ಪತ್ರಕರ್ತ ಶ್ರೀನಾಥ್. ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ 'ಲವ್ ಆನ್ ಎನ್ಎಚ್ 4' ಚಿತ್ರದಲ್ಲಿ ಕಿಟ್ಟಿ ಅತಿಥಿ ಪಾತ್ರ ಪೋಷಿಸಿದ್ದಾರೆ.

ಈ ಚಿತ್ರದ ವಿಶೇಷ ಎಂದರೆ ಹಲವಾರು ವಿವಾದಿತ ಸೆಲೆಬ್ರಿಟಿಗಳು ಚಿತ್ರದಲ್ಲಿ ಅಭಿನಯಿಸುತ್ತಿರುವುದು. ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ನರ್ಸ್ ಜಯಲಕ್ಷ್ಮಿ, ನಟಿ ನಯನಕೃಷ್ಣ, ರಾಮದಾಸ್ ಪ್ರೇಮ ಪ್ರಕರಣದ ಪ್ರೇಮಕುಮಾರ್ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರ ಸ್ಯಾಂಡಲ್ ವುಡ್ ಗಮನಸೆಳೆದಿದೆ. [ಸ್ಯಾಂಡಲ್ ವುಡ್ ಚಿತ್ರಕ್ಕೆ ಪ್ರೇಮಕುಮಾರಿ ಎಂಟ್ರಿ]

Srinagara Kitty

ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಮೈತ್ರಿಯಾ ಗೌಡ ಅವರು ನಟ ತಿಲಕ್ ಶೇಖರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಬಿಗ್ ಬಾಸ್ ಸೀಸನ್ 2 ವಿನ್ನರ್ ಅಕುಲ್ ಬಾಲಾಜಿ ಇದ್ದಾರೆ. ಇದೀಗ ಚಿತ್ರಕ್ಕೆ ಹೊಸದಾಗಿ ಶ್ರೀನಗರ ಕಿಟ್ಟಿ ಸೇರ್ಪಡೆಯಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಕಿಟ್ಟಿ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ಅವರು ಮಾಧುರಿ ಇಟಗಿ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತದೆ ಚಿತ್ರತಂಡ. ಚಿತ್ರದಲಿ ಇಷ್ಟೆಲ್ಲಾ ತಾರೆಗಳಿರುವ ಕಾರಣ 'ಲವ್ ಆನ್ ಎನ್ಎಚ್ 4' ಚಿತ್ರದ ಕುತೂಹಲದ ಕೇಂದ್ರವಾಗಿದೆ.

ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ್ ಶೆಟ್ಟಿ ಹಾಗೂ ಲಯನ್ ಎಸ್. ವೆಂಕಟೇಶ್ ಅವರು ನಿರ್ಮಿಸುತ್ತಿರುವ ಚಿತ್ರ ಇದು. ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ನಿರ್ದೇಶನವಿದೆ.

ನಿರಂಜನ್ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಫೈವ್ ಸ್ಟಾರ್ ಗಣೇಶ್, ಇಮ್ರಾನ್, ಕಪಿಲ್, ಜಗ್ಗಿ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಕುಲ್ ಬಾಲಾಜಿ, ತಿಲಕ್, ಮಾಧುರಿ, ಬುಲೆಟ್ ಪ್ರಕಾಶ್, ಮಂಡ್ಯ ರಮೇಶ್, ನಯನಕೃಷ್ಣ, ನರ್ಸ್ ಜಯಲಕ್ಷ್ಮೀ, ಮೈತ್ರೇಯ ಗೌಡ, ರ್ಯಾಪಿಡ್ ರಶ್ಮಿ, ರಾಕ್ ಸ್ಟಾರ್ ರೋಹಿತ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Diamond Star Srinagara Kitty plays a cameo role in Akul Bajali lead Kannada movie 'Love on NH 4'. Kitty has acted opposite Madhuri Itagi in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada