»   » ಗೀತಾ ಮತ್ತು ಅಂಜಲಿ ಜೊತೆ ಬಂದ ಶ್ರೀನಗರಕಿಟ್ಟಿ

ಗೀತಾ ಮತ್ತು ಅಂಜಲಿ ಜೊತೆ ಬಂದ ಶ್ರೀನಗರಕಿಟ್ಟಿ

Posted By:
Subscribe to Filmibeat Kannada

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರ ಹೊಸ ಚಿತ್ರ ಸೆಟ್ಟೇರಿದೆ. ಈ ಬಾರಿ ಕಿಟ್ಟಿಗೆ ಇಬ್ಬರು ನಾಯಕಿಯರು. ಖ್ಯಾತ ನಿರ್ಮಾಪಕ ಎಸ್ ವಿ ಬಾಬು ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅವರ ಸಮ್ಮುಖದಲ್ಲಿ ಚಿತ್ರ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು.

ಗೀತಾ ಮತ್ತು ಅಂಜಲಿ ಪಾತ್ರಗಳನ್ನು ಕ್ರಮವಾಗಿ ತೆಲುಗು ತಮಿಳಿನ ನಿಕಿತಾ ನಾರಾಯಣ್ ಹಾಗೂ ಕನ್ನಡದ ಸನಾತನಿ ಪೋಷಿಸುತ್ತಿದ್ದಾರೆ. ಕಿಟ್ಟಿ ಅವರು ಈ ಹಿಂದೆ ಅಭಿನಯಿಸಿದ್ದ 'ಇಂತಿ ನಿನ್ನ ಪ್ರೀತಿಯಾ' ಹಾಗೂ 'ಸಂಜು ವೆಡ್ಸ್ ಗೀತಾ' ಚಿತ್ರಗಳ ರೀತಿಯಲ್ಲೇ ನವಿರು ಪ್ರೇಮಕಥೆಯನ್ನು 'ಗೀತಾಂಜಲಿ' ಒಳಗೊಂಡಿದೆಯಂತೆ. [ಟೋನಿ ಚಿತ್ರ ವಿಮರ್ಶೆ: ಮಿಸ್ ಮಾಡದೆ ನೋಡಿ]

Geethanjali starts rolling

ಮೂರು ವರ್ಷಗಳ ಬಳಿಕ ನಿರ್ದೇಶಕ ರಾಜಶೇಖರ್ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. 'ಈ ಸಂಭ್ರಮ' ಚಿತ್ರದ ಬಳಿಕ ಅವರು ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಸಿಂಪಲ್ ಲವ್ ಸ್ಟೋರಿಯಲ್ಲಿ ಕೆಲವು ಟ್ವಿಸ್ಟ್ಸ್ ಮತ್ತು ಟರ್ನ್ ಇದ್ದು ಪ್ರೇಕ್ಷಕರನ್ನು ಸೀಟಿಗೆ ಅಂಟಿಕುಳಿತುಕೊಳ್ಳುವಂತೆ ಮಾಡುತ್ತವೆ ಎನ್ನುತ್ತಾರೆ ನಿರ್ದೇಶಕರು.

'ಗೀತಾಂಜಲಿ' ಚಿತ್ರಕ್ಕೆ ಇದೇ ಮೊದಲ ಬಾರಿಗೆ ಗುರುಕಿರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಲೂಸುಗಳು ಖ್ಯಾತಿಯ ಚಿದಾನಂದ್ ಅವರ ಛಾಯಾಗ್ರಹಣ, ಎಸ್ ಜಿಎಲ್ ಪ್ರೊಡಕ್ಷನ್ಸ್ ನ ಲಕ್ಷ್ಮಿ ನಾಯಕ್ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಇದೆ. ಕಿಟ್ಟಿ ಅವರು ಮತ್ತೊಮ್ಮೆ ಪ್ರೇಮಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. (ಏಜೆನ್ಸೀಸ್)

English summary
Diamond Star Srinagara Kitty new movie titled as 'Geethanjali'. Actress Nikita Narayan and Sanathani in lead roles started rolling at Kanteerava studios with guests - noted producer and business tycoon SV Babu, lovely star Premkumar and others gracing the muhurut on Sunday morning.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada