»   » ಡಿಫರೆಂಟ್ ಗೆಟಪ್ ನಲ್ಲಿ 'ನಮ್ ಹುಡುಗ' ಕಿಟ್ಟಿ

ಡಿಫರೆಂಟ್ ಗೆಟಪ್ ನಲ್ಲಿ 'ನಮ್ ಹುಡುಗ' ಕಿಟ್ಟಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಈಗ ಸಖತ್ ಬಿಜಿಯಾಗಿದ್ದಾರೆ. ಅವರ ಸವಾರಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಬಿಜಿಯಲ್ಲೇ ಅವರು ಇನ್ನೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ. ಚಿತ್ರದ ಹೆಸರು 'ಸುಬ್ರಮಣಿ'. ಈ ಸುಬ್ರಮಣಿಗೆ ಇಬ್ಬರು ನಾಯಕಿಯರು.

ಸವಾರಿ 2 ಚಿತ್ರದಲ್ಲಿ ಕಿಟ್ಟಿ ಜೊತೆ ಅಭಿನಯಿಸಿರುವ ಪೂರ್ಣಿಮಾ ಇಲ್ಲೂ ಇದ್ದಾರೆ. ಸುನಿಲ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟರ್ ಸಹ ವಿಭಿನ್ನವಾಗಿದೆ. ಕಿಟ್ಟಿ ಇಲ್ಲಿ ಯಮಹಾ ಬೈಕ್ ನಲ್ಲಿ ಬರ್ರನೆ ಸದ್ದು ಮಾಡಲಿದ್ದಾರೆ. ಬಹುಶಃ ಅವರ ಗೆಟಪ್ ಮಾಸ್ ಪ್ರೇಕ್ಷಕರಿಗೆ ಈ ಬಾರಿ ಸಖತ್ ಇಷ್ಟ ಆಗಬಹುದು.

ಜುದಾ ಸಾಂಡಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಶ್ರೀನಗರ ಕಿಟ್ಟಿ ಈ ಬಾರಿ ತೆರೆಯ ಮೇಲೆ ಏನೆಲ್ಲಾ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಅವರ ಬಹುಪರಾಕ್ ಚಿತ್ರವೂ ಭರದಿಂದ ಚಿತ್ರೀಕರಣ ಸಾಗಿದೆ. ಬನ್ನಿ ನೋಡೋಣ ನಮ್ ಹುಡುಗ 'ಸುಬ್ರಮಣಿ' ಅವತಾರಗಳನ್ನು...

ಇಬ್ಬರು ನಾಯಕಿಯರ ಮುದ್ದಿನ ಹುಡುಗ

ಪುರಾಣದ ಸುಬ್ರಹ್ಮಣ್ಯನಿಗೆ ಇಬ್ಬರು ಪತ್ನಿಯರು ಅದೇ ರೀತಿ ನಮ್ಮ ಸುಬ್ರಮಣಿಗೆ ಇಬ್ಬರು ನಾಯಕಿಯರು. ಒಬ್ಬರು 'ಸವಾರಿ 2' ಖ್ಯಾತಿಯ ಪೂರ್ಣಿಮಾ, ಇನ್ನೊಬ್ಬ ಬೆಡಗಿ ದಿಶಾ ಪಾಂಡೆ.

ಯಮಹಾ ಬೈಕ್ ಏನ್ ಮ್ಯಾಚಿಂಗ್ ಗುರು

ನಮ್ಮ ಕಿಟ್ಟಿಗೂ ಆ ಯಮಹಾ ಬೈಕಿಗೂ ಆ ಕೂಲಿಂಗ್ ಗ್ಲಾಸಿಗೂ ಏನ್ ಮ್ಯಾಚಿಂಗ್ ಗುರು...ಇಷ್ಟೆಲ್ಲಾ ನೋಡಿದ ಮೇಲೆ ನಮ್ ಹುಡುಗನ ಪ್ರಾಬ್ಲಂ ಏನೆಲ್ಲಾ ಇರುತ್ತದೆ ಎಂದು ನಿಮಗೇ ಅರ್ಥವಾಗಿಯೇ ಇರುತ್ತದೆ.

ಸ್ಟೈಲ್ ನೋಡಿದರೆ ಗೊತ್ತಾಗಲ್ವಾ...

ನಮ್ ಹುಡುಗ ಸುಬ್ರಮಣಿ ನಿಂತಿರುವ ಸ್ಟೈಲ್ ನೋಡಿದರೆ ಗೊತ್ತಾಗುವುದಿಲ್ಲವಾ...ಯಾವುದೋ ಹುಡುಗಿ ನಿರೀಕ್ಷೆಯಲ್ಲಿದ್ದಾನೆ ಅಂಥ.

ಹುಡುಗಿಗಾಗಿ ಕಾದುಕಾದು ಸುಸ್ತಾದ ಸುಬ್ರಮಣಿ

ಹುಡುಗಿಗಾಗಿ ಕಾದುಕಾದು ಸುಸ್ತಾದ ಸುಬ್ರಮಣಿ ಕಡೆಗೆ ತುಟಿಗೊತ್ತಿಕೊಂಡ ಗೆಳತಿಯೇ ಸಿಗರೇಟ್...

ಹೀಗೂ ಉಂಟು ನೋಡಿ..

ಹೀಗೂ ಉಂಟು ನೋಡಿ ನಮ್ಮ ಹುಡುಗ ಸುಬ್ರಮಣಿ ಸ್ಟೈಲ್.

ಪೋಸ್ಟರ್ ಹಿಂಗಿದೆ ಇನ್ನು ಸಿನಿಮಾ ಹೆಂಗಿರುತ್ತೋ?

ಚಿತ್ರದ ಪೋಸ್ಟರ್ ನೋಡಿದರೆ ಸುಬ್ರಮಣಿ ಡಿಸೈನ್ ಚೆನ್ನಾಗಿದೆ ಅನ್ನಿಸುತ್ತೆ ಅಲ್ವಾ. ಇನ್ನು ಚಿತ್ರವೂ ಅಷ್ಟೇ ಕಲರ್ ಫುಲ್ ಆಗಿ ಮೂಡಿಬರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

English summary
Diamond Star Srinagara Kitty upcoming Kannada movie Subramani launched. The actor has been paired with his Savaari 2 co-star Poornima in this film. The movie producer Sunil Yadav and music director Judah Sandy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada