For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಕ್ರಂ ಚಿತ್ರಕ್ಕೆ ನಾಯಕಿಯಾದ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ

  |

  ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಅದೃಷ್ಟ ಬದಲಾಗುತ್ತೆ. ಭಾರತದ ದೊಡ್ಡ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗಲಿದೆ ಎಂಬ ಮಾತುಗಳಿತ್ತು. ಆದರೆ, ಕೆಜಿಎಫ್ ರಿಲೀಸ್ ಆಗಿ ಬಹುದೊಡ್ಡ ಸಕ್ಸಸ್ ಕಂಡರೂ ಶ್ರೀನಿಧಿ ಶೆಟ್ಟಿ ಯಾವ ಹೊಸ ಸಿನಿಮಾದ ಬಗ್ಗೆಯೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

  KGF Srinidhi Shetty to pair with Tamil Superstar Vikram in 'Vikram 58' movie | FILMIBEAT KANNADA

  ಕೆಜಿಎಫ್ 2 ಚಿತ್ರದಲ್ಲಿ ಮತ್ತೆ ಬ್ಯುಸಿ ಆದ ಶ್ರೀನಿಧಿ ಶೆಟ್ಟಿ ಬಹುಶಃ ಈ ಸಿನಿಮಾ ಮುಗಿಸುವವರೆಗೂ ಬೇರೆ ಯಾವ ಸಿನಿಮಾನೂ ಮಾಡಬಾರದು ಎಂದು ನಿರ್ಧರಿಸಬಹುದು ಎಂಬ ಊಹೆ ಇತ್ತು.

  ಆದ್ರೀಗ, ಈ ಎಲ್ಲ ನಿರೀಕ್ಷೆ, ಊಹೆಗಳಿಗೆ ಸ್ವತಃ ಶ್ರೀನಿಧಿ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಹೌದು, ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಂ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ಬಗ್ಗೆ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ.

  ಕ್ರಿಕೆಟಿಗ ಇರ್ಫಾನ್ ಪಠಾನ್ ಮೊದಲ ಸಿನಿಮಾಗೆ ನಾಯಕಿಯಾದ ಕನ್ನಡತಿ

  ವಿಕ್ರಂ ನಟಿಸುತ್ತಿರುವ 58ನೇ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರವನ್ನ ಅಜಯ್ ಜ್ಞಾನಮುತ್ತು ನಿರ್ದೇಶಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಅಭಿನಯಿಸುತ್ತಿದ್ದಾರೆ.

  ''ವಿಕ್ರಂ ಅವರ 58ನೇ ಚಿತ್ರದಲ್ಲಿ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ. ಎ.ಆರ್ ರೆಹಮಾನ್ ಸಂಗೀತ ಬಗ್ಗೆ ಥ್ರಿಲ್ ಆಗಿದ್ದೀನಿ. ಈ ಅವಕಾಶ ಕೊಟ್ಟ ಅಜಯ್ ಜ್ಞಾನಮುತ್ತ ಸರ್ ಥ್ಯಾಂಕ್ ಯೂ'' ಎಂದು ಶ್ರೀನಿಧಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

  ಸದ್ಯ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀನಿಧಿ ಶೆಟ್ಟಿ, ಮುಂದಿನ ವಾರದಿಂದಲೇ ತಮಿಳು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಎರಡೂ ಚಿತ್ರವನ್ನ ಒಟ್ಟಿಗೆ ಬ್ಯಾಲೆನ್ಸ್ ಮಾಡಲಿದ್ದಾರಂತೆ.

  English summary
  Kannada actress Srinidhi Shetty debut to tamil film industry with super star chiyaan vikram in 58th movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X