»   » 'ರಾಜವಂಶ'ದಿಂದ ಬಂತು ಹೊಸ ವರ್ಷದ ಉಡುಗೊರೆ

'ರಾಜವಂಶ'ದಿಂದ ಬಂತು ಹೊಸ ವರ್ಷದ ಉಡುಗೊರೆ

Posted By:
Subscribe to Filmibeat Kannada

ಹೊಸ ವರ್ಷದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ರಾಜ್ ಕುಟುಂಬ ಉಡುಗೊರೆ ನೀಡಿದೆ. ನಟ ಶಿವರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾಗಳ ಫಸ್ಟ್ ಲುಕ್ ಗಳು ಇದೀಗ ರಿಲೀಸ್ ಆಗಿದೆ.

'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ

ಶಿವರಾಜ್ ಕುಮಾರ್ ಅವರ 'SRK' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಹಿಂದೆ ಚಿತ್ರದ ಟೈಟಲ್ ಟೀಸರ್ ಬಿಟ್ಟು ಗಮನ ಸೆಳೆದಿದ್ದ ಚಿತ್ರತಂಡ ಈಗ ಮತ್ತೆ ಸಿನಿಮಾ ಪೋಸ್ಟರ್ ನಲ್ಲಿ ಕುತೂಹಲ ಹುಟ್ಟಿಸಿದೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿರುವ ಈ ಪೋಸ್ಟರ್ ನಲ್ಲಿ ಮೂಲಕ ಶಿವಣ್ಣ ಅಂಡ್ ಟೀಂ ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಕೋರಿದೆ. 'SRK' ಸಿನಿಮಾವನ್ನು ರಾಜ್ ಕುಟುಂಬದ ಕುಡಿ ಲಕ್ಕಿ ಗೋಪಾಲ್ ನಿರ್ದೇಶನ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.

SRK and Ananthu vs Nusruth movies posters released

ಇದರ ಜೊತೆಗೆ ವಿನಯ್ ರಾಜ್ ಕುಮಾರ್ ಅವರ 'ಅನಂತು v/s ನುಸ್ರತ್' ಸಿನಿಮಾದ ಪೋಸ್ಟರ್ ಕೂಡ ಹೊರಬಂದಿದೆ. ವಿನಯ್ ರಾಜ್ ಕುಮಾರ್ ಇಲ್ಲಿ ಪಕ್ಕಾ ಬ್ರಾಹ್ಮಣ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪಂಚೆ ತೊಟ್ಟು ವಿನಯ್ ಪೋಸ್ ಕೊಟ್ಟಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಸುಧೀರ್ ಶಾನುಭೋಗ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಲತಾ ಹೆಗಡೆ ನಾಯಕಿ ಆಗಿದ್ದಾರೆ.

SRK and Ananthu vs Nusruth movies posters released

ಇದರೊಂದಿಗೆ ಶಿವಣ್ಣ ನಟನೆಯ 'ಟಗರು' ಚಿತ್ರದ ಮೇಕಿಂಗ್ ಕೂಡ ಹೊಸ ವರ್ಷದ ವಿಶೇಷವಾಗಿ ರಿಲೀಸ್ ಆಗಿದೆ. ಜೊತೆಗೆ 'ದಿ ವಿಲನ್' ಸಿನಿಮಾದ ಟೀಸರ್ ಕೂಡ ಇಂದು ಬರಬೇಕಿತ್ತು, ಆದರೆ ಕಾರಣಾಂತರಗಳಿಂದ ಟೀಸರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

English summary
Kannada Actor Shiva Rajkumar's SRK and Vinay Rajkumar's 'Ananthu vs Nusruth' kannada movies posters released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X