»   » ಹುಟ್ಟುಹಬ್ಬದ ದಿನ ದೇಶವೇ ಮೆಚ್ಚುವ ಕೆಲಸ ಮಾಡಿದ್ರು ಸೃಜನ್ ಲೋಕೇಶ್!

ಹುಟ್ಟುಹಬ್ಬದ ದಿನ ದೇಶವೇ ಮೆಚ್ಚುವ ಕೆಲಸ ಮಾಡಿದ್ರು ಸೃಜನ್ ಲೋಕೇಶ್!

Posted By:
Subscribe to Filmibeat Kannada

ನಟ ಸೃಜನ್ ಲೋಕೇಶ್ ಇಂದು ತಮ್ಮ 37 ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ನಿರಂತರವಾಗಿ ಮನರಂಜನೆ ನೀಡುತ್ತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೃಜನ್ ರವರು ಇಂದು ಏಳು ಫ್ಯಾನ್ಸ್ ಕ್ಲಬ್ ಗಳ ಉದ್ಘಾಟನೆಗೆ ಮುಂದಾಗಿದ್ದಾರೆ.

ಇದುವರೆಗೂ ತಮ್ಮ ಹೆಸರಲ್ಲಿ ಅಭಿಮಾನಿ ಬಳಗ ಬೇಡ ಎಂದು ವಿರೋಧಿಸುತ್ತಿದ್ದ ಸೃಜನ್ ಇಂದು ಕೊನೆಗೂ ಅಭಿಮಾನಿಗಳ ಬೇಡಿಕೆ ಸ್ಪಂದಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ರೂಪಿಸಿದ್ದ ಸಾಮಾಜಿಕ ಕಳಕಳಿಯ ಕಾರ್ಯಗಳಿಗೂ ಇಂದು ಯಶಸ್ವಿಯಾಗಿ ಚಾಲನೆ ಸಿಕ್ಕಿದೆ. ಈ ಮೂಲಕ ದೇಶವೇ ಮೆಚ್ಚುವ ಉತ್ತಮ ಕೆಲಸಕ್ಕೆ ಇಂದು ಮುಂದಾಗಿದ್ದಾರೆ.

Srujan goes the green way with his seven fan clubs

ಸೃಜನ್ ಲೋಕೇಶ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಅಭಿಮಾನಿ ಸಂಘಗಳ ಮೂಲಕ ಕರ್ನಾಟಕದಾದ್ಯಂತ ಒಂದು ಲಕ್ಷ ಗಿಡ ನೆಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಅವರು 1000 ಸಸಿಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ದೇಶದ ಪರಿಸರ ರಕ್ಷಣೆಗೆ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಆದರೆ ಸಸಿಗಳ ವಿತರಣೆಯನ್ನು ಅವರು ಇದೇ ಮೊದಲೇನು ಮಾಡುತ್ತಿಲ್ಲ. 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಅತಿಥಿಗಳಿಗೂ ಅವರು ಸಸಿಗಳನ್ನು ವಿತರಿಸುತ್ತಿದ್ದಾರೆ.

ಸೃಜನ್ ಲೋಕೇಶ್ ರವರು ಪ್ರಸ್ತುತ 'ಹ್ಯಾಪಿ ಜರ್ನಿ' ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದು, ಜೊತೆಗೆ ಅವರ ಸಾರಥ್ಯದ 'ಮಜಾ ಟಾಕೀಸ್' ಕಾರ್ಯಕ್ರಮ 250 ಸಂಚಿಕೆಗಳನ್ನು ಈ ವಾರ ಪೂರೈಸಲಿರುವ ಖುಷಿಯಲ್ಲು ಇದ್ದಾರೆ.

English summary
Kannada Actor Srujan goes the green way with his seven fan clubs

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada