For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಬೆಳ್ಳಿತೆರೆಗೆ ಸೃಜನ್ ಲೋಕೇಶ್ ಹೈಜಂಪ್

  |

  ಕಿರುತೆರೆಯ ಜನಪ್ರಿಯ ನಟ ಸೃಜನ್ ಲೋಕೇಶ್ ಮತ್ತೊಮ್ಮೆ ಬೆಳ್ಳಿತೆರೆಗೆ ಜಿಗಿಯಲಿದ್ದಾರೆ. ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಪುತ್ರರತ್ನ ಸೃಜನ್, ರಾಧಿಕಾ ಜೊತೆ 'ನೀಲ ಮೇಘ ಶ್ಯಾಮ' ಚಿತ್ರದಲ್ಲಿ ನಾಯಕನಟರಾಗಿ ಬಣ್ಣ ಹಚ್ಚಿದರಾದರೂ ಆ ಚಿತ್ರ ತೆರೆಕಂಡಿದ್ದು ಭಾರಿ ಲೇಟು. ಅಷ್ಟರಲ್ಲಾಗಲೇ ರಾಧಿಕಾ ಅಭಿನಯದ 'ನಿನಗಾಗಿ' ಪ್ರಾರಂಭವಾಗಿ, ಬಿಡುಗಡೆಯೂ ಆಗಿ ಚಿತ್ರ ಸೂಪರ್ ಹಿಟ್ ಆಯ್ತು. ರಾಧಿಕಾ 'ಸ್ಟಾರ್ ನಟಿ' ಪಟ್ಟ ಗಿಟ್ಟಿಸಿದ್ದೂ ಆಗಿತ್ತು.

  ಆದರೆ ನಟ ಸೃಜನ್ ಲೋಕೇಶ್ ಅವರಿಗೆ ಮಾತ್ರ ಕಲಾವಿದರ ಕುಟುಂಬವಾದರೂ ಕನ್ನಡದ ಸ್ಟಾರ್ ಪಟ್ಟ ಒಲಿಯಲೇ ಇಲ್ಲ. ಆ ಚಿತ್ರದ ನಂತರ ಮತ್ತೆ ಸೃಜನ್ ನಾಯಕರಾಗಿ ನಟಿಸಲಿಲ್ಲ, ಸಣ್ಣ-ಪುಟ್ಟ ಪಾತ್ರಗಳಲ್ಲೇ ತೃಪ್ತಿ ಪಟ್ಟಿದ್ದಾಯ್ತು. ರಕ್ತದಲ್ಲೇ 'ಕಲೆ'ಯೇನೋ ಇತ್ತು. ಆದರೆ ಸ್ಟಾರ್ ಆಗಲು ಮಾತ್ರ ಅದೇಕೋ ಸಾಧ್ಯವೇ ಆಗಲಿಲ್ಲ. ಹೋಗಲಿ, ಕೊನೆಯ ಪಕ್ಷ ಸಿನಿಮಾದಲ್ಲಿ ಬೇಡಿಕೆಯ ನಟರಾಗಲೂ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಕಿರುತೆರೆ ಮಾತ್ರ ಕೈಬಿಡಲಿಲ್ಲ.

  ಕಿರುತೆರೆಯಲ್ಲಿ ಸೃಜನ್ ಮುಟ್ಟಿದ್ದೆಲ್ಲಾ ಚಿನ್ನ. ನಟರಾಗಿ, ನಿರೂಪಕರಾಗಿ ಸೃಜನ್ ಕಿರುತೆರೆ ಪ್ರೇಕ್ಷಕರಿಗೆ ಅತ್ಯಂತ ಪ್ರಿಯ ನಟ. ಹೀಗಿರುವಾಗ, ಮತ್ತೆ ಬೆಳ್ಳಿತೆರೆಯ ಕಡೆ ಇನ್ನೊಂದು ಜಂಪ್ ಮಾಡಿ ನೋಡಲು ಮುಂದಾಗಿದ್ದಾರೆ ಸೃಜನ್. ಇದೀಗ ಮತ್ತೆ ಹೀರೋ ಆಗಲು ಹೊರಟಿರುವ ಅವರು ಸಹಿ ಮಾಡಿರುವ ಚಿತ್ರದ ಹೆಸರು 'ಆನೆ ಪಟಾ'. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಿತ್ರವನ್ನು ಎಲ್ ಟಿ ಸುರೇಶ್ ಬಾಬು ನಿರ್ಮಿಸುತ್ತಿದ್ದಾರೆ.

  ಚಂದ್ರಶೇಖರ್ ಬಂಡಿಯಪ್ಪ ಅವರಿಗೆ ಇದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರವಾದರೂ ಈ ಮೊದಲು ರಾಜೇಂದ್ರ ಸಿಂಗ್ ಬಾಬು ಹಾಗೂ ಎಸ್ ನಾರಾಯಣ್ ಗರಡಿಯಲ್ಲಿ ಅವರು ಪಳಗಿದ್ದಾರೆ. ಈ ಮಂಡ್ಯದ ಹುಡುಗ ಮಮ್ಮುಟ್ಟಿ ಅಭಿನಯದ ಮಲಯಾಳಂ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಏನೂ ಅರಿಯದ ಹೊಸ ನಿರ್ದೇಶಕರಲ್ಲ. ಇಂಥ ಚಂದ್ರಶೇಖರ್ ಚಿತ್ರಕ್ಕೆ ಈ ಮೊದಲು ಇಟ್ಟ ಹೆಸರು 'ಗೆಂಡೆ ತಿಮ್ಮ' ಇಷ್ಟವಾಗದೇ ಈಗ 'ಆನೆ ಪಟಾಕಿ' ಎಂದು ಹೆಸರಿಟ್ಟುಕೊಂಡಿದ್ದಾರೆ.

  ಅಂದಹಾಗೆ, ಈ ಚಿತ್ರವು ಬರುವ ತಿಂಗಳು, ಸೆಪ್ಟೆಂಬರ್ 5 ರಂದು ಮುಹೂರ್ತ ಆಚರಿಸಿಕೊಳ್ಳಲಿದೆ. ರಕ್ಷಿತಾ-ಪ್ರೇಮ್ ನೈಜ ಲವ್ ಸ್ಟೋರಿ ಆಧಾರಿತ ಎನ್ನಲಾಗಿರುವ ಈ ಚಿತ್ರದಲ್ಲಿ ರಿಯಲ್ ತಾರಾ ಜೋಡಿ ಜೈಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ತೆರೆಯಲ್ಲೂ ಗಂಡ-ಹೆಂಡತಿಯಾಗೇ ಕಾಣಿಸಿಕೊಳ್ಳಲಿರುವುದು ವಿಶೇಷ. ಜಗದೀಶ್ ವಾಲಿ ಛಾಯಾಗ್ರಹಣ, ಲಿಂಗರಾಜು ಸಂಕಲನವಿರುವ ಚಿತ್ರಕ್ಕೆ ಧರ್ಮ ಅವೀಶ್ ಎಂಬ ಹೊಸ ಪ್ರತಿಭೆಯ ಸಂಗೀತವಿದೆ (ಒನ್ ಇಂಡಿಯಾ ಕನ್ನಡ)

  English summary
  Actor Srujan Lokesh Acts in a movie titled 'Aane Pataki' of a real love story of star couple Rakshita-Prem. This movie to direct by a new comer Chandrashekhar Bandiyappa. LT Suresh Babu produces this project. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X