For Quick Alerts
  ALLOW NOTIFICATIONS  
  For Daily Alerts

  ಬಂಡೆ ಮಹಾಕಾಳಮ್ಮನ ಮೇಲೆ ಅದ್ಹೇಗೆ 'ಗಜ-ಸೃಜ'ಗೆ ಅಪಾರ ನಂಬಿಕೆ.?

  By Harshitha
  |
  ಬಂಡೆ ಮಹಾಕಾಳಮ್ಮನ ಮೇಲೆ ಅದ್ಹೇಗೆ 'ಗಜ-ಸೃಜ'ಗೆ ಅಪಾರ ನಂಬಿಕೆ.?

  ಎಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಪ್ರಾಣಿ ಪ್ರಿಯರು... ಪರಿಸರ ಪ್ರೇಮಿಗಳು... ಹಾಗೇ, ಇವರಿಬ್ಬರಿಗೂ ದೇವರ ಮೇಲೆ ಅಪಾರ ನಂಬಿಕೆ ಇದೆ.

  ಆಸ್ತಿಕರಾಗಿರುವ 'ಗಜ' ಮತ್ತು 'ಸೃಜ' ಒಟ್ಟಿಗೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿರುವ ಉದಾಹರಣೆ ಇದೆ. ವಿಶೇಷವಾಗಿ ಬೆಂಗಳೂರಿನ ಶ್ರೀನಗರದಲ್ಲಿರುವ ಬಂಡೆ ಮಹಾಕಾಳಮ್ಮನ ಮೇಲೆ ದರ್ಶನ್ ಮತ್ತು ಸೃಜನ್ ಗೆ ಬೆಟ್ಟದಷ್ಟು ಭಕ್ತಿಯಿದೆ.

  ಬಂಡೆ ಮಹಾಕಾಳಮ್ಮ ದೇವಸ್ಥಾನದ ಅರ್ಚಕರಿಗೆ ಇತ್ತೀಚೆಗಷ್ಟೇ ನಟ ದರ್ಶನ್ ನಾಯಿ ಮರಿಗಳನ್ನು ನೀಡಿದ್ದರು. ಇದೀಗ ಅದೇ ದೇವಸ್ಥಾನಕ್ಕೆ ಹೆಬ್ಬಾಗಿಲನ್ನು ನಿರ್ಮಿಸಿ ಕೊಟ್ಟಿದ್ದಾರೆ ನಟ ಸೃಜನ್ ಲೋಕೇಶ್.

  ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೂ, ಗಜ ಹಾಗೂ ಸೃಜನಿಗೂ ಇರುವ ನಂಟಿನ ಬಗ್ಗೆ ಸ್ವತಃ ಸೃಜನ್ ಲೋಕೇಶ್ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿರಿ...

  ಸೃಜನ್ ಜನ್ಮದಿನ

  ಸೃಜನ್ ಜನ್ಮದಿನ

  ನಟ ಸೃಜನ್ ಲೋಕೇಶ್ ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕಾಗಿ ಹೆಬ್ಬಾಗಿಲನ್ನು ನಿರ್ಮಿಸಿದ್ದ ಸೃಜನ್ ಇಂದು ಜನ್ಮದಿನದ ಪ್ರಯುಕ್ತ ಅದರ ಉದ್ಘಾಟನೆ ಕಾರ್ಯವನ್ನ ನೆರವೇರಿಸಿದರು.

  ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ದರ್ಶನ್ ಕೊಟ್ಟ ಕಾಣಿಕೆಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ದರ್ಶನ್ ಕೊಟ್ಟ ಕಾಣಿಕೆ

  ಬಂಡೆಮಹಾಕಾಳಮ್ಮ ದೇವಿ ಮೇಲೆ ನಂಬಿಕೆ

  ಬಂಡೆಮಹಾಕಾಳಮ್ಮ ದೇವಿ ಮೇಲೆ ನಂಬಿಕೆ

  ''ಚಿಕ್ಕವಯಸ್ಸಿನಿಂದಲೂ ಈ ದೇವಸ್ಥಾನಕ್ಕೆ ಬರ್ತಿದ್ವಿ. ಇಲ್ಲಿಗೆ ಬಂದಾಗೆಲ್ಲ ನನಗೆ ಪಾಸಿಟಿವ್ ಅನ್ಸುತ್ತೆ. ಈ ದೇವಸ್ಥಾನಕ್ಕೆ ಬಂದು ಹೋದಾಗೆಲ್ಲ ನಾನೇನು ಅಂದುಕೊಂಡಿರುತ್ತೇನೋ, ಅದೆಲ್ಲ ಸಲೀಸಾಗಿ ನಡೆದು ಹೋಗುತ್ತದೆ. ದೇವಸ್ಥಾನಕ್ಕೆ ಏನಾದರೂ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದೆ. ತಾತ ಹಾಗೂ ಅಪ್ಪನ ಹೆಸರಿನಲ್ಲಿ ಶಾಶ್ವತವಾಗಿ ದೇವಸ್ಥಾನದ ಹೆಬ್ಬಾಗಿಲು ಇರಲಿ ಅಂತ ನಮ್ಮ ಸಂಸ್ಥೆಯಿಂದ ನಿರ್ಮಿಸಿ ಕೊಟ್ಟಿದ್ದೇವೆ'' ಅಂತಾರೆ ನಟ ಸೃಜನ್ ಲೋಕೇಶ್

  ಜನ್ಮದಿನದಂದು ನಟ ಸೃಜನ್ ಲೋಕೇಶ್ ಮಾಡಿದ ಮಹತ್ವದ ಕಾರ್ಯ 'ಇದು'.!ಜನ್ಮದಿನದಂದು ನಟ ಸೃಜನ್ ಲೋಕೇಶ್ ಮಾಡಿದ ಮಹತ್ವದ ಕಾರ್ಯ 'ಇದು'.!

  ಗಜ ಜೊತೆಗೆ ಸೃಜ ಸಾಥ್

  ಗಜ ಜೊತೆಗೆ ಸೃಜ ಸಾಥ್

  ''ದರ್ಶನ್ ಕೂಡ ನನಗೆ ಸಾಥ್ ಕೊಟ್ಟು ಹೆಬ್ಬಾಗಿಲ ಪೇಂಟಿಂಗ್ ಜವಾಬ್ದಾರಿ ಹೊತ್ತರು. 'ಗಜ' ಹಾಗೂ 'ಸೃಜ' ಇಬ್ಬರೂ ಒಟ್ಟಿಗೆ ಸೇರಿ ಬಂಡೆಮಹಾಕಾಳಮ್ಮ ದೇವಸ್ಥಾನದ ಹೆಬ್ಬಾಗಿಲು ನಿರ್ಮಿಸಿದ್ದೇವೆ. ಇದೇ ಖುಷಿ ನನಗೆ'' - ಸೃಜನ್ ಲೋಕೇಶ್

  ದೇವಿ ಮೇಲೆ ದರ್ಶನ್ ಗೂ ನಂಬಿಕೆ ಇದೆ

  ದೇವಿ ಮೇಲೆ ದರ್ಶನ್ ಗೂ ನಂಬಿಕೆ ಇದೆ

  ''ದರ್ಶನ್ ಗೆ ಕೂಡ ಈ ದೇವಸ್ಥಾನದ ಮೇಲೆ ನಂಬಿಕೆ ಇದೆ. ಅವರಿಗೂ ಇಲ್ಲಿಗೆ ಬಂದಾಗ ಪಾಸಿಟಿವ್ ಫೀಲ್ ಆಗಿದೆ. ಸುಸ್ತಾದಾಗ, ಬೇಜಾರಾದಾಗ ಇಲ್ಲಿಗೆ ಬಂದು, ಪೂಜೆ ಮಾಡಿಸಿಕೊಂಡು ಹೋದ ತಕ್ಷಣ ಅವರಿಗೆ ಫ್ರೆಶ್ ಅನ್ಸುತ್ತೆ'' ಎನ್ನುತ್ತಾರೆ ಸೃಜನ್ ಲೋಕೇಶ್.

  English summary
  Talking Star Srujan Lokesh and Challenging Star Darshan have faith in Bande Mahakalamma Devi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X