»   » ತೆಲುಗು ನಟಿಯ ಅತ್ಯಾಚಾರ ಯತ್ನ ಪ್ರಕರಣದ ಬಗ್ಗೆ ಸೃಜನ್ ಲೋಕೇಶ್ ಸ್ಪಷ್ಟನೆ

ತೆಲುಗು ನಟಿಯ ಅತ್ಯಾಚಾರ ಯತ್ನ ಪ್ರಕರಣದ ಬಗ್ಗೆ ಸೃಜನ್ ಲೋಕೇಶ್ ಸ್ಪಷ್ಟನೆ

Posted By:
Subscribe to Filmibeat Kannada

ತೆಲುಗು ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ಪ್ರಕರಣ ನಿನ್ನೆ ದೊಡ್ಡ ಸುದ್ದಿಯಾಗಿತ್ತು. ಚಲಿಸುತ್ತಿರುವ ಕಾರಿನಲ್ಲಿ ತೆಲುಗು ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವ ನಟಿಯೊಬ್ಬರು ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಈ ಘಟನೆಯನ್ನು ವರದಿ ಮಾಡುವಾಗ ಕೆಲ ತೆಲುಗು ವೆಬ್ ಸೈಟ್ ಗಳು ಕಣ್ತಪ್ಪಿ ನಟ ಸೃಜನ್ ಲೋಕೇಶ್ ಎಂದು ಬರೆದಿದ್ದರು. ಅಲ್ಲದೆ ಸೃಜನ್ ಲೋಕೇಶ್ ಅವರ ಫೋಟೋವನ್ನು ಕೂಡ ಬಳಸಿಕೊಂಡಿದ್ದರು. ತೆಲುಗು ವೆಬ್ ಸೈಟ್ ಮಾಡಿದ ಈ ತಪ್ಪಿನಿಂದ ನಟ ಸೃಜನ್ ಲೋಕೇಶ್ ಅವರಿಗೆ ನೋವಾಗಿದೆ.

ತೆಲುಗು ನಟ ಸೃಜನ್ ಮೇಲೆ ಅತ್ಯಾಚಾರ ಯತ್ನದ ಆರೋಪ: ದೂರು ಕೊಟ್ಟ ಯುವ ನಟಿ

ಅಂದಹಾಗೆ, ಸದ್ಯ ತೆಲುಗು ನಟಿಯ ಅತ್ಯಾಚಾರ ಯತ್ನ ಪ್ರಕರಣದ ಬಗ್ಗೆ ಸೃಜನ್ ಲೋಕೇಶ್ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ಮುಂದೆ ಓದಿ...

ಸೃಜನ್ ಲೋಕೇಶ್ ಸ್ಪಷ್ಣನೆ

''ಸುಮ್ಮನೆ ಈ ರೀತಿಯ ಆರೋಪ ಮಾಡುವವರನ್ನು ನಾನು ಖಂಡಿಸುತ್ತೇನೆ. ಒಂದು ಸಣ್ಣ ಪರಿಶೀಲನೆ ಮಾಡದೆ ಈ ರೀತಿ ಹಾಕುವುದು ತೀರಾ ಅಸಂಬದ್ಧ''. ಎಂದು ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಏನು ಹೇಳಬೇಕೋ..

''ಯಾರೋ ಸೃಜನ್ ಅಂತ ಇರುವುದನ್ನು ಸೃಜನ್ ಲೋಕೇಶ್ ಎಂದು ಹಾಕುತ್ತಾರಲ್ಲ... ಅದು ಕೂಡ ಫೋಟೋ ಸಮೇತ. ಇವರಿಗೆ ಏನು ಹೇಳಬೇಕೋ''- ಸೃಜನ್ ಲೋಕೇಶ್, ನಟ

ನೋವಾಗಿದೆ

''ಈ ಘಟನೆಯಿಂದ ನನಗೆ ನೋವಾಗಿದೆ. ಜೊತೆಗೆ ಕೆಲವರ ಇಂತಹ ವರ್ತನೆ ಸ್ವೀಕರಿಸುವಂತದಲ್ಲ.'' ಸೃಜನ್ ಲೋಕೇಶ್, ನಟ

ಘಟನೆಯ ಹಿನ್ನಲೆ

ದೊಡ್ಡ ನಟಿಯಾಗಬೇಕು ಎಂದು ಆಸೆ ಹೊತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಯುವ ನಟಿ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಚಲಿಸುತ್ತಿರುವ ಕಾರಿನಲ್ಲಿ ತೆಲುಗು ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವ ನಟಿಯೊಬ್ಬರು ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಿರ್ದೇಶಕ ಚಲಪತಿಯನ್ನು ವಶಕ್ಕೆ ಪಡೆದಿದ್ದರು. ಆದರೆ ತೆಲುಗು ನಟ ಸೃಜನ್ ಎಸ್ಕೇಪ್ ಆಗಿದ್ದಾನೆ.

English summary
Kannada Actor Srujan Lokesh has taken his Facebook account to gave clarification about Telugu Actress attempt to rape case.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada