»   » ಸೃಜನ್ ಮಾಡ್ತಿರೋ ಒಳ್ಳೆ ಕೆಲಸ ನಿಮ್ಗೂ ಗೊತ್ತಿರಲಿ

ಸೃಜನ್ ಮಾಡ್ತಿರೋ ಒಳ್ಳೆ ಕೆಲಸ ನಿಮ್ಗೂ ಗೊತ್ತಿರಲಿ

Posted By:
Subscribe to Filmibeat Kannada
ಸೃಜನ್ ಲೋಕೇಶ್ ರ ಒಂದೊಳ್ಳೆ ಕೆಲಸ | Srujan lokesh's good deed| Filmibeat Kannada

ಸೃಜನ್ ಲೋಕೇಶ್ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಮಜಾ ಟಾಕೀಸ್, ವಾರದ ಅಂತ್ಯದಲ್ಲಿ ಮನೆ ಮಂದಿ ಎಲ್ಲರೂ ಕೂತು ನೋಡುವಂತ ಕಾರ್ಯಕ್ರಮವನ್ನ ನೆಡಿಸಿಕೊಡುವ ಸೃಜನ್ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೂ ಹಾಗೂ ಅಭಿಮಾನಿಗಳಿಗೂ ಚಿರಪರಿಚಿತರು. ಸುಬ್ಬಯ್ಯ ನಾಯ್ಡು ಕುಟುಂಬದ ಕುಡಿಯಾಗಿರುವ ಸೃಜನ್ ದಿವಂಗತ ನಟ ಲೋಕೇಶ್ ಅವರ ಪುತ್ರ.

ಕಿರು ತೆರೆಯಲ್ಲಿ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡಿರುವ ಸೃಜನ್ ಅಪ್ಪನ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಟಾಕಿಂಗ್ ಸ್ಟಾರ್ ಅಂತಾನೇ ಪೇಮಸ್ ಆಗಿರುವ ಸೃಜನ್ ಯಾರಿಗೂ ತಿಳಿಯದಂತೆ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಈ ಬಾರಿಯಾದ್ರೂ ಸೃಜನ್ ಮನೆ ಹೊಸಿಲು ತುಳಿಯುತ್ತಾರಾ 3 ಬಿಗ್ ಸ್ಟಾರ್ ಗಳು ?

ಸದಾ ಬ್ಯುಸಿ ಆಗಿರುತ್ತೇನೆ ಎನ್ನುವ ಕೆಲಸಗಳ ಮಧ್ಯೆ ಸೃಜ ನೂರಾರು ಜನರಿಗೆ ಮಾದರಿ ಆಗಿ ನಿಲ್ಲುತ್ತಾರೆ. ಮನಸ್ಸಿನಿಂದ ಮಾಡುವ ಕೆಲಸಕ್ಕೆ ಬಿಡುವೇಕೆ ಎನ್ನುವ ಸೃಜನ್ ಮಾಡುತ್ತಿರುವ ಕೆಲಸವಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಲೋಕೇಶ್ ಹೆಸರು ಸೃಜನ್ ರಿಂದ ಹಸಿರು

ಅಪ್ಪನ ಹೆಸರು ಬಳಸುವವನು ಮಗ ನಲ್ಲ, ಅಪ್ಪನ ಹೆಸರು ಉಳಿಸುವವನು ಮಗ ಎನ್ನುವ ಮಾತಿದೆ. ಅದಕ್ಕೆ ತಕ್ಕ ಉದಾಹರಣೆ ಸೃಜನ್ ಲೋಕೇಶ್, ಸೃಜನ್ ಇಲ್ಲಿವರೆಗೂ ಎಂದಿಗೂ ನಾನು ಇಂತವರ ಮೊಮ್ಮಗ ಅಥವಾ ಲೋಕೇಶ್ ಅವರ ಮಗ ಎನ್ನುವುದನ್ನ ಎಲ್ಲಿಯೂ ತೋರ್ಪಡಿಸಿಕೊಂಡಿಲ್ಲ. ಇಡೀ ಚಿತ್ರಗವೇ ಒಂದು ಕಡೆ ಈಜುತ್ತಿದ್ದರೆ ಸೃಜ ಮಾತ್ರ ಬೇರೆಯದ್ದೇ ದಾರಿ ತುಳಿದು ಅಭಿಮಾನಿಗಳನ್ನ ಪಡೆದುಕೊಂಡವರು.

ಕಾರ್ಯಕ್ರಮದ ಜೊತೆ ಪರಿಸರ ಕಾಳಜಿ

ಲೋಕೇಶ್ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ ನಟ ಸೃಜನ್ ಅಂದೇ ಒಳ್ಳೆ ಕೆಲಸಕ್ಕೆ ಚಾಲನೆ ನೀಡಿದರು. ನಿರ್ಮಾಣ ಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಗಿಡಗಳನ್ನ ಉಡುಗೊರೆಯಾಗಿ ಕೊಡಲು ಆರಂಭಿಸಿದರು.

ಕಲಾವಿದರಲ್ಲಿ ಪರಿಸರ ಕಾಳಜಿ

ಮಜಾ ಟಾಕೀಸ್ ಒಂದರಲ್ಲೇ ಸೃಜನ್ ಸುಮಾರು 1500 ಕ್ಕೂ ಹೆಚ್ಚು ಗಿಡಗಳನ್ನ ವಿತರಣೆ ಮಾಡಿದ್ದಾರೆ. ಔಷಧಿಗೆ ಉಪಯೋಗ ಆಗುವಂತಹ, ಹೂ ಮತ್ತು ಹಣ್ಣುಗಳನ್ನ ಬಿಡುವ ಸಸಿಗಳನ್ನ ನೀಡಲಾಗುತ್ತಿದೆ. ಈ ಮೂಲಕ ಪ್ರೇಕ್ಷಕರ ಹಾಗೂ ಕಲಾವಿದರಿಗೆ ಪರಿಸರದ ಬಗ್ಗೆ ಕಾಳಜಿ ಉಂಟು ಮಾಡುವಂತಾಗುತ್ತದೆ.

ಪ್ರೇರೇಪಿರಾದ ನೋಡುಗರು

ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ತಮ್ಮ ಮನೆಯ ಮದುವೆ, ಸಮಾರಂಭಗಳಲ್ಲಿ ತೆಂಗಿನ ಕಾಯಿಯ ಬದಲು ಗಿಡಗಳನ್ನ ನೀಡುವ ಅಭ್ಯಾಸ ಮಾಡಿಕೊಂಡಿರುವುದ ಸೃಜನ್ ಅವರಿಗೆ ಖುಷಿ ತಂದಿದೆ.

ಶಾಲಾ ಸ್ನೇಹಿತರಿಂದ ಡಿ ಬಾಸ್ ಗೆ ದೊರೆತ ಅಪೂರ್ವ ಕಾಣಿಕೆ

English summary
Kannada actor Srujan Lokesh is giving saplings to all those who visited Maja Talkies program. Till date Srujan has distributed about 1500 plants

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X