»   » ಸ್ಯಾಂಡಲ್ ವುಡ್ ಗೆ ಮತ್ತೆ ಸನ್ನಿ ಲಿಯೋನ್ ರೀ ಎಂಟ್ರಿ

ಸ್ಯಾಂಡಲ್ ವುಡ್ ಗೆ ಮತ್ತೆ ಸನ್ನಿ ಲಿಯೋನ್ ರೀ ಎಂಟ್ರಿ

Posted By:
Subscribe to Filmibeat Kannada

ಫೇಮಸ್ ರಿಯಾಲಿಟಿ ಶೋ ಮಜಾ ಟಾಕೀಸ್ ತಂಡ ಹೊಸ ಸಾಹಸಕ್ಕೆ ಕೈ ಹಾಕಿದೆ. ಅದೇನಪ್ಪಾ ಅಂದ್ರೆ ಇಂದ್ರಜಿತ್ ಲಂಕೇಶ್ ಹೊಸ ಚಿತ್ರ "ಲವ್ ಯೂ ಆಲಿಯಾ" ನಿರ್ದೇಶನ ಮಾಡ್ತಾ ಇರೋದು ನಿಮಗೆಲ್ಲಾ ಗೊತ್ತೆ ಇದೆ. ಈಗಾಗ್ಲೆ ಅಡಿಯೋ ರಿಲೀಸ್ ಕೂಡಾ ಆಗಿರೋ ಚಿತ್ರಕ್ಕೆ ಇದೀಗ ಹೊಸತೊಂದು ಕಳೆ ಬಂದಿದೆ.

'ಜೋಗಿ' ಪ್ರೇಮ್ ನಟಿಸಿ ನಿರ್ದೇಶಿಸಿದ್ದ "ಡಿಕೆ" ಚಿತ್ರದಲ್ಲಿ "ಸೇಸಮ್ಮ" ಹಾಡಿಗೆ ಹೆಜ್ಜೆ ಹಾಕಿ ಇಡೀ ಗಾಂಧಿನಗರವನ್ನೇ ತನ್ನತ್ತ ಸೆಳೆಯುವಂತೆ ಮಾಡಿದ್ದ ಬಾಲಿವುಡ್ ಹಾಟ್ ತಾರೆ ಸನ್ನಿ ಲಿಯೋನ್, ಇಂದ್ರಜಿತ್ ಅವರ "ಲವ್ ಯೂ ಆಲಿಯಾ" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡ್ತಾ ಇದ್ದಾಳೆ.


Srujan Lokesh to shake legs with Sunny Leone Love You Aaliya film

ಚಿತ್ರದಲ್ಲಿ ಈ ಮೊದಲು ಸನ್ನಿ ಜೊತೆ ಯಾರು ಹೆಜ್ಜೆ ಹಾಕಲಿದ್ದಾರೆ ಅನ್ನೋದು ಪಕ್ಕಾ ಆಗಿರಲಿಲ್ಲಾ. ಆದ್ರೆ ಇದೀಗ ಲೇಟೆಸ್ಟ್ ಆಗಿ ಇಂದ್ರಜಿತ್ ಹೇಳೋ ಪ್ರಕಾರ ಸನ್ನಿ ಜೊತೆ ನಮ್ ಸೃಜನ್ "ಲವ್ ಯೂ ಆಲಿಯಾ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಅದಕ್ಕಾಗಿ ಭರ್ಜರಿಯಾಗಿ ಸಿಕ್ಸ್ ಪ್ಯಾಕ್ ರೆಡಿ ಮಾಡ್ಕೊಂಡು ಇನ್ನೇನು ಸದ್ಯದಲ್ಲೇ ಹಾಡಿನ ಶೂಟಿಂಗ್ ಸ್ಪಾಟ್ ಗೆ ಹಾಜರಾಗಲಿದ್ದಾರೆ.


ಈ ಹಿಂದೆ ಇಂದ್ರಜಿತ್ ತಂದೆ ಲಂಕೇಶ್ ಅವರು ಸೃಜನ್ ತಂದೆ ಲೋಕಕೇಶ್ ಅವರ "ಎಲ್ಲಿಂದಲೋ ಬಂದವರು" ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದೇ ರೀತಿ ಇಂದ್ರಜಿತ್ "ಲವ್ ಯೂ ಆಲಿಯಾ"ದಲ್ಲಿ ಸೃಜನ್ ಜೊತೆ ಕೈ ಜೋಡಿಸಿದ್ದಾರೆ. ಇದು ಮಾತ್ರವಲ್ಲದೆ, "ಲವ್ ಯೂ ಆಲಿಯಾ" ನಂತರ ಇಂದ್ರಜಿತ್ ನಿರ್ದೇಶಿಸುವ ಸೃಜನ್ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮುಂದಿನ ಚಿತ್ರಗಳಿಗೆ ಲೋಕೇಶ್ ಪ್ರೋಡಕ್ಷನ್ ಅಡಿಯಲ್ಲಿ ಪ್ರೊಡ್ಯೂಸ್ ಮಾಡಲು ಸೃಜನ್ ಪ್ಲಾನ್ ಮಾಡುತ್ತಿದ್ದಾರೆ.


ಅದೇನೆ ಇರಲಿ "ಸೇಸಮ್ಮ" ಗಾಂಧಿನಗರದಲ್ಲಿ ಹವಾ ಏಬ್ಬಿಸಿದಂತೆ ಇಲ್ಲೂ ಸನ್ನಿ ತಮ್ಮ ಅಭಿಮಾನಿಗಳನ್ನು ಮೋಡಿ ಮಾಡಲಿದ್ದಾರಾ ಅನ್ನೋದನ್ನ ಚಿತ್ರ ಬಿಡುಗಡೆವರೆಗೂ ಕಾದು ನೋಡಬೇಕಿದೆ.

English summary
Director Indrajith Lankesh has announced that 'Maja Talkies' Star Srujan Lokesh will be shaking his legs with Bollywood actress Sunny Leone for the item number in 'Love You Alia' film.This marks the re entry of Sunny leone to KFI aka Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada