»   » ನೀಲಿ ರಾಣಿ 'ಸನ್ನಿ'ಗಾಗಿ 5 ಗಂಟೆ ಜಿಮ್ ನಲ್ಲಿ ಸುಸ್ತು..!

ನೀಲಿ ರಾಣಿ 'ಸನ್ನಿ'ಗಾಗಿ 5 ಗಂಟೆ ಜಿಮ್ ನಲ್ಲಿ ಸುಸ್ತು..!

Posted By:
Subscribe to Filmibeat Kannada

ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾಳೆ. 'ಸೇಸಮ್ಮ' ಆಗಿ ಗಾಂಧಿನಗರದ ಬಾಗಿಲು ತಟ್ಟಿ ಬಂದ ಸನ್ನಿ ಈಗ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲಿದ್ದಾಳೆ.

ಸನ್ನಿ ಜೊತೆ ಹೆಜ್ಜೆ ಹಾಕುವ ಸುವರ್ಣಾವಕಾಶ ಸೃಜನ್ ಲೋಕೇಶ್ ಪಾಲಾಗಿದೆ. ಸನ್ನಿ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಅಷ್ಟು ಸುಲಭವಾಗಿ ಯಾರಿಗೂ ಸಿಕ್ಕಲ್ಲ. ಬೆಳ್ಳಿತೆರೆ ಮೇಲೆ ಕ್ಲಿಕ್ ಆಗಬೇಕು ಅಂತ ವರ್ಷಗಳಿಂದ ಪ್ರಯತ್ನ ಪಡುತ್ತಿರುವ ಸೃಜನ್ ಗೆ ಸನ್ನಿ ಜೊತೆ ಡ್ಯಾನ್ಸಿಂಗ್ ಚಾನ್ಸ್ ಸಿಕ್ಕಿದೆ ಅಂದ್ರೆ ಬಿಡ್ತಾರಾ?


Srujan Lokesh works hard in gym for Sunny Leone

ಸಿಕ್ಕಿರುವ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳುವುದಕ್ಕೆ ಪ್ರತಿದಿನ 5 ಗಂಟೆಗಳ ಕಾಲ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರಂತೆ ಸೃಜನ್ ಲೋಕೇಶ್. ಹಾಟ್ ಬ್ಯೂಟಿ ಸನ್ನಿ ಜೊತೆ ಕಟ್ಟುಮಸ್ತಾಗಿ ಕಾಣಲು ಸಿಕ್ಸ್ ಪ್ಯಾಕ್ ಆಬ್ ಬಿಲ್ಡ್ ಮಾಡುತ್ತಿದ್ದಾರೆ ಸೃಜನ್ ಲೋಕೇಶ್. [ಸ್ಯಾಂಡಲ್ ವುಡ್ ಗೆ ಮತ್ತೆ ಸನ್ನಿ ಲಿಯೋನ್ ರೀ ಎಂಟ್ರಿ]


Srujan Lokesh works hard in gym for Sunny Leone

'ಇದು ಸನ್ನಿಯನ್ನ ಇಂಪ್ರೆಸ್ ಮಾಡೋಕಾ' ಅಂತ ನಮ್ಮನ್ನ ಕೇಳ್ಬೇಡಿ. ಸೃಜನ್ ಫಿಟ್ ಆದ್ಮೇಲೆ, ಸನ್ನಿ ಬೆಂಗಳೂರಿಗೆ ಬಂದ ಮೇಲೆ ಇಂದ್ರಜಿತ್ ಹಾಡಿನ ಚಿತ್ರೀಕರಣ ಮಾಡಲಿದ್ದಾರಂತೆ. ಸನ್ನಿ ಲಿಯೋನ್ ಜೊತೆ ಸೃಜನ್ ಹೇಗೆ ಮಜಾ ತೆಗೆದುಕೊಳ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

English summary
Kannada Actor Srujan Lokesh is busy working out in Gym. According to the sources, Srujan Lokesh is spending 5 hours in Gym daily to build six pack. This is mainly because Srujan is roped into dance with Sunny Leone in Indrajith Lankesh directorial 'Love You Alia'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada