For Quick Alerts
  ALLOW NOTIFICATIONS  
  For Daily Alerts

  'ಕೌರವ' ಬಿ ಸಿ ಪಾಟೀಲ್ ಮಗಳಿಗೆ ಕೂಡಿ ಬಂತು ಕಂಕಣ ಭಾಗ್ಯ

  By Pavithra
  |
  ಬಿ.ಸಿ ಪಾಟೀಲ್ ಮಗಳಿಗೆ ಕೂಡಿ ಬಂದ ಕಂಕಣ ಭಾಗ್ಯ ..! | Filmibeat Kannada

  ಕನ್ನಡ ಸಿನಿಮಾರಂಗದಲ್ಲಿ 'ಕೌರವ' ಅಂತಾನೇ ಪ್ರಖ್ಯಾತಿ ಪಡೆದಿರುವ ಬಿ.ಸಿ ಪಾಟೀಲ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಬಿ,ಸಿ ಪಾಟೀಲ್ ಹಾಗೂ ವನಜಾ ಪಾಟೀಲ್ ಅವರ ಮಗಳಾದ ನಟಿ ಸೃಷ್ಟಿ ಪಾಟೀಲ್ ವಿವಾಹಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ.

  'ಹ್ಯಾಪಿ ನ್ಯೂ ಇಯರ್' ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ ಸೃಷ್ಟಿ ಪಾಟೀಲ್ ಒಂದು ಸಿನಿಮಾ ನಂತರ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಆರಂಭ ಮಾಡಿದ್ದರು. ಕಳೆದ ಭಾರಿಯ ಚುನಾವಣೆಯಲ್ಲಿ ಅಪ್ಪನ ಪರವಾಗಿ ಪ್ರಚಾರ ಮಾಡಿ ತಂದೆಯ ಗೆಲುವಿಗೆ ಕಾರಣವಾದರು.

  'ಈ' ಚೆಲುವೆ ಯಾರೂಂತ ನೀವು ಗುರುತಿಸಿ ಹೇಳಬಲ್ಲಿರಾ?'ಈ' ಚೆಲುವೆ ಯಾರೂಂತ ನೀವು ಗುರುತಿಸಿ ಹೇಳಬಲ್ಲಿರಾ?

  ಅಪ್ಪನ ಶಾಲೆ, ರಾಜಕೀಯ ಎಲ್ಲವನ್ನೂ ಗಂಡು ಮಗನಂತೆ ನಿಭಾಯಿಸುತ್ತಿರುವ ಸೃಷ್ಟಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಾಗಾದರೆ 'ಕೌರವ'ನ ಮನೆಗೆ ಅಳಿಯನಾಗುತ್ತಿರುವ ಹುಡುಗ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಬಿ ಸಿ ಪಾಟೀಲ್ ಮಗಳ ಮದುವೆ

  ಬಿ ಸಿ ಪಾಟೀಲ್ ಮಗಳ ಮದುವೆ

  ನಟ, ನಿರ್ಮಾಪಕ ಬಿ ಟಿ ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಮದುವೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಇತ್ತೀಚಿಗಷ್ಟೆ ಸೃಷ್ಟಿ ಪಾಟೀಲ್ ಅವರ ನಿಶ್ಚಿತಾರ್ಥ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ನೆರವೇರಿದೆ.

  ಸುಜಯ್ ಬೇಲೂರು ಜೊತೆ ಸೃಷ್ಟಿ ಮದುವೆ

  ಸುಜಯ್ ಬೇಲೂರು ಜೊತೆ ಸೃಷ್ಟಿ ಮದುವೆ

  ನಟಿ ಸೃಷ್ಟಿ ಪಾಟೀಲ್ ಮದುವೆ ಆಗುತ್ತಿರುವ ಹುಡುಗನ ಹೆಸರು ಸುಜಯ್ ಬೇಲೂರು. ಮೂಲತಃ ಬೇಲೂರಿನವರಾಗಿರುವ ಸುಜಯ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನು ಹೊಂದಿದ್ದಾರೆ.

  ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥ

  ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥ

  ಸುಜಯ್ ಮತ್ತು ಸೃಷ್ಟಿ ಅವರ ನಿಶ್ಚಿತಾರ್ಥದ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಬಿ ಸಿ ಪಾಟೀಲ್ ಕುಟುಂಬಕ್ಕೆ ಆಪ್ತರಾಗಿರುವ ಸ್ನೇಹಿತರು ಹಾಗೂ ರಾಜಕೀಯ ಗಣ್ಯರು ಮತ್ತು ಉದ್ಯಮಿಗಳು ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

  ಮುಂದಿನ ವರ್ಷ ಮದುವೆ

  ಮುಂದಿನ ವರ್ಷ ಮದುವೆ

  ಸೃಷ್ಟಿ ಹಾಗೂ ಸುಜಯ್ ವಿವಾಹ ಮುಂದಿನ ವರ್ಷ ಅಂದರೆ ಜನವರಿ ತಿಂಗಳಲ್ಲಿ ನಡೆಯಲಿದೆ ಎನ್ನುವುದು ತಿಳಿದು ಬಂದಿದೆ. ಆದರೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಮಾಹಿತಿಯನ್ನು ಇನ್ನು ಬಿಟ್ಟುಕೊಟ್ಟಿಲ್ಲ.

  ಸ್ನೇಹಿರತರೇ ಈಗ ಪ್ರೇಮಿಗಳು

  ಸ್ನೇಹಿರತರೇ ಈಗ ಪ್ರೇಮಿಗಳು

  ಸೃಷ್ಟಿ ಹಾಗೂ ಸುಜಯ್ ಸುಮಾರು ನಾಲ್ಕು ವರ್ಷದಿಂದ ಸ್ನೇಹಿತರಾಗಿದ್ದವರು. ಸ್ನೇಹ ಪ್ರೀತಿಗೆ ತಿರುಗಿದ ನಂತರ ಇಬ್ಬರ ಮನೆಯಲ್ಲಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಈಗ ಪೋಷಕರು ಇಬ್ಬರ ಪ್ರೀತಿಗೆ ಅಸ್ತು ಎಂದಿದ್ದಾರೆ.

  English summary
  Kannada cinema actress Srushti Patil has recently got engaged. srushti Patil Daughter of actor BC Patil. srushti Patil's wedding will be held with Sujay Belur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X