Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!
Recommended Video

ರಾಷ್ಟ್ರಾದ್ಯಂತ ಸುದ್ದಿ ಆಗುತ್ತಿರುವ #ಮೀಟೂ ಅಭಿಯಾನದ ಭಾಗವಾಗಲು ಹೋಗಿ ಕನ್ನಡ ನಟಿ ಶ್ರುತಿ ಹರಿಹರನ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಜೆಂಟಲ್ ಮ್ಯಾನ್' ಎಂದೇ ಗುರುತಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರತ್ತ ನಟಿ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ದಾರೆ.
''ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು. ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದರು'' ಅಂತೆಲ್ಲ ನಟಿ ಶ್ರುತಿ ಹರಿಹರನ್ ಆರೋಪಿಸಿದ್ದಾರೆ.
ಶ್ರುತಿ ಹರಿಹರನ್ ಮಾಡಿರುವ ಆರೋಪವನ್ನ ಅರ್ಜುನ್ ಸರ್ಜಾ ತಳ್ಳಿಹಾಕಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಅತ್ತೆ ಮತ್ತು ಮಾವ ಗುಡುಗಿದ್ದಾರೆ. ಶ್ರುತಿ ಹರಿಹರನ್ ಬಗ್ಗೆ ಧ್ರುವ ಸರ್ಜಾ ಸಿಡಿದೆದ್ದಿದ್ದಾರೆ. ಇದೀಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಕೂಡ ಇದೇ ವಿವಾದದ ಕುರಿತು ತುಟಿ ಎರಡು ಮಾಡಿದ್ದಾರೆ.
ಶ್ರುತಿ ಹರಿಹರನ್ ಕೊಟ್ಟಿರುವ ಏಟಿಗೆ ಐಶ್ವರ್ಯ ಅರ್ಜುನ್ ಹೇಗೆ ತಿರುಗೇಟು ಕೊಟ್ಟಿದ್ದಾರೆ ಅಂತ ನೀವೇ ಓದಿರಿ, ಕೆಳಗಿರುವ ಸ್ಲೈಡ್ ಗಳಲ್ಲಿ...

ಸುಳ್ಳು ಆರೋಪ
''ನನ್ನ ತಂದೆ ಹೆಣ್ಮಕ್ಕಳಿಗೆ ತುಂಬಾ ಗೌರವ ಕೊಡ್ತಾರೆ. ನನ್ನ ತಂದೆಯಿಂದ ಶ್ರುತಿ ಹರಿಹರನ್ ಕಲಿಯೋದು ತುಂಬಾ ಇದೆ. ಇದು ಸುಳ್ಳು ಆರೋಪ. ನನ್ನ ತಂದೆ ಹೇಗೆ ಅಂತ ನನಗೆ ಗೊತ್ತು'' ಅಂತಾರೆ ನಟಿ ಐಶ್ವರ್ಯ ಅರ್ಜುನ್.
ಶ್ರುತಿ
ಹರಿಹರನ್
ಗೆ
ಓಪನ್
ಚಾಲೆಂಜ್
ಹಾಕಿದ
ಧ್ರುವ
ಸರ್ಜಾ!

ಆಗಲೇ ಹೇಳಬೇಕಿತ್ತು
''ಅವರಿಗೆ ರಿಹರ್ಸಲ್ ಸಮಯದಲ್ಲಿ ಮುಜುಗರ ಆದಾಗಲೇ ಹೇಳಬೇಕಿತ್ತು. ಶ್ರುತಿ ಹರಿಹರನ್ ಗೆ ದೊಡ್ಡ ಬಾಯಿ ಇದೆ. ಆಕೆ stuggling actress ಅಲ್ಲ. ರಿಹರ್ಸಲ್ ಗೆ ಬರಲ್ಲ ಅನ್ನೋದು ಬೇರೆ. ದೂರು ನೀಡುವುದು ಬೇರೆ. ಆಗ ಅವರು ಏನೂ ಮಾತನಾಡಿಲ್ಲ'' - ಐಶ್ವರ್ಯ ಅರ್ಜುನ್, ನಟಿ, ಅರ್ಜುನ್ ಸರ್ಜಾ ಪುತ್ರಿ
'ರೆಸಾರ್ಟ್
ಗೆ
ಹೋಗೋಣ
ಬಾ'
ಎಂದು
ಕರೆದರು
:
ಸರ್ಜಾ
ಮೇಲೆ
ಶ್ರುತಿ
ಬಾಂಬ್!

ಪ್ರೀಮಿಯರ್ ಶೋ ದಿನ ಏನಾಯ್ತು.?
''ಸಮಸ್ಯೆ ಆಗಿದ್ದರೆ, ಪ್ರೀಮಿಯರ್ ಶೋ ದಿನ ಶ್ರುತಿ ಹರಿಹರನ್ ನನ್ನ ಜೊತೆ ಯಾಕೆ ಅಷ್ಟು ಚೆನ್ನಾಗಿ ಮಾತನಾಡಿದರು.? ''ನಿಮ್ಮ ತಂದೆಯ ದೊಡ್ಡ ಫ್ಯಾನ್ ನಾನು. ಅವರು ಸೂಪರ್ ಸ್ಟಾರ್. ಅವರ ಜೊತೆ ಸಿನಿಮಾ ಮಾಡಬೇಕು'' ಅಂತ ನನ್ನ ಬಳಿ ಯಾಕೆ ಹೇಳಿದರು.? ಅವರಿಗೆ ನನ್ನ ತಂದೆಯಿಂದ ಸಮಸ್ಯೆ ಆಗಿದ್ದರೆ, ಹೀಗೆ ಯಾಕೆ ನನ್ನ ಬಳಿ ಹೇಳಬೇಕಿತ್ತು'' ಎಂದು ಪ್ರಶ್ನಿಸುತ್ತಾರೆ ಐಶ್ವರ್ಯ ಅರ್ಜುನ್.
'ನಾಚಿಕೆ
ಆಗಬೇಕು'
:
ಶ್ರುತಿ
ವಿರುದ್ಧ
ಅರ್ಜುನ್
ಸರ್ಜಾ
ಕೆಂಡಾಮಂಡಲ!

ಹಿಂದೆ ಬೇರೆ ಯಾರೋ ಇದ್ದಾರೆ
''ಶ್ರುತಿ ಹರಿಹರನ್ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಹಿಂದೆ ಬೇರೆ ಯಾರೋ ಇದ್ದಾರೆ. ಸದ್ಯದಲ್ಲೇ ಎಲ್ಲವೂ ಬಹಿರಂಗ ಆಗಲಿದೆ'' - ಐಶ್ವರ್ಯ ಅರ್ಜುನ್, ನಟಿ, ಅರ್ಜುನ್ ಸರ್ಜಾ ಪುತ್ರಿ