»   » ಕಾಮುಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶ್ರುತಿ ಹರಿಹರನ್ ದೂರು

ಕಾಮುಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶ್ರುತಿ ಹರಿಹರನ್ ದೂರು

Posted By:
Subscribe to Filmibeat Kannada

ನಟಿ ಶ್ರುತಿ ಹರಿಹರನ್, ನಟಿಯರ ಮುಖವನ್ನು ನಗ್ನ ಚಿತ್ರಗಳಿಗೆ ಅಂಟಿಸಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುವಾರ(ಮೇ 11) ಸೈಬರ್ ಅಪರಾಧ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.

ಸೈಬರ್ ಅಪರಾಧ ಇಲಾಖೆಯಲ್ಲಿ ದೂರು ದಾಖಲಿಸಿರುವ ಶ್ರುತಿ ಹರಿಹರನ್ ತಮ್ಮ ದೂರಿನಲ್ಲಿ 'ನಗ್ನಚಿತ್ರಗಳೊಂದಿಗೆ ತಮ್ಮ ಮುಖವನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳು ಹರಿಯಬಿಟ್ಟಿದ್ದಾರೆ. ಅಲ್ಲದೇ ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಕ್ರಿಯೇಟ್ ಮಾಡಿದ್ದು, ಆ ಖಾತೆಯಲ್ಲಿ ಅಂತಹ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

Sruthi Hariharan has filed a police complaint against unknown culprits

'ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ನಟಿಯರ ಮುಖವನ್ನು ನಗ್ನಚಿತ್ರಗಳೊಂದಿಗೆ ಫೋಟೋಶಾಪ್ ಮೂಲಕ ಅಂಟಿಸಿ ಅಪ್ ಲೋಡ್ ಮಾಡುವ ಚುಟುವಟಿಕೆ ಹೆಚ್ಚಾಗಿದೆ. ಇದರಲ್ಲಿ ನನ್ನ ಚಿತ್ರವನ್ನು ಹಾಗೆ ಮಾಡಿ ಅಪರಿಚಿತ ವ್ಯಕ್ತಿಗಳು ಅಪ್ ಲೋಡ್ ಮಾಡಿದ್ದಾರೆ. ಇದರಿಂದ ನನಗೆ ನೋವಾಗಿದ್ದು, ಅಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನಟಿ ಶ್ರುತಿ ಹರಿಹರನ್ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಹೇಳಿದ್ದಾರೆ.

ದೂರು ದಾಖಲಿಸಿಕೊಂಡಿರುವ ಸೈಬರ್ ಅಪರಾಧ ಇಲಾಖೆ ಪೊಲೀಸ್ ಅಧಿಕಾರಿಗಳು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

English summary
Actress Sruthi Hariharan has filed a police complaint against unknown miscreants who have uploaded morphed images of her online. She filed the complaint at the cyber crime police on Friday morning.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada