ನಟಿ ಶೃತಿ ಹರಿಹರನ್ ಮೊದಲ ಸಿನಿಮಾದಿಂದಲೇ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿರುವ ನಟಿ. ಕಮರ್ಶಿಯಲ್ ಮತ್ತು ಕಲಾತ್ಮಕ ಎರಡು ಸಿನಿಮಾಗಳನ್ನು ಮಾಡುತ್ತಿರುವ ಅವರು ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 'ನಾತಿಚರಾಮಿ' ಎಂಬ ಸಿನಿಮಾದಲ್ಲಿ ಶೃತಿ ಹರಿಹರನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ 'ಹರಿವು' ಸಿನಿಮಾ ಮಾಡಿ ರಾಷ್ಟ್ರ ಪಟ್ಟದಲ್ಲಿ ಹೆಸರು ಮಾಡಿದ್ದ ನಿರ್ದೇಶಕ ಮಂಸೋರೆ ಅವರ ಎರಡನೇ ಸಿನಿಮಾ ಇದಾಗಿದೆ. ಶೃತಿ ಹರಿಹರನ್, ಸಂಪತ್ ಕುಮಾರ್, ವಿಕಾಸ್ ರವರು ಇಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೂ ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿಯವರ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.
ಸದ್ಯಕ್ಕೆ ಇಷ್ಟು ವಿವರಗಳನ್ನು ಹಂಚಿಕೊಂಡಿರುವ ನಿರ್ದೇಶಕರು ''ಹರಿವು' ಚಿತ್ರಕ್ಕೆ ನೀವು ನೀಡಿದ ಬೆಂಬಲ, ಪ್ರೋತ್ಸಾಹ ಅಪಾರವಾದುದು. ಅದೇ ಪ್ರೋತ್ಸಾಹ ಈ ಸಿನಿಮಾಗೂ ನೀಡುತ್ತೀರಿ ಎಂಬ ನಂಬಿಕೆ ಇದೆ.'' ಎಂದು ಹೇಳಿದ್ದಾರೆ. 'ನಾತಿಚರಾಮಿ' ಸಿನಿಮಾದ ಮೊದಲ ಪೋಸ್ಟರ್ ಕೂಡ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ವಿಭಿನ್ನ ಶೈಲಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.