»   » ಹೊಸ ಚಾಲೆಂಜ್ ಗೆ ಸಿದ್ದವಾದ ಶ್ರುತಿ ಹರಿಹರನ್.!

ಹೊಸ ಚಾಲೆಂಜ್ ಗೆ ಸಿದ್ದವಾದ ಶ್ರುತಿ ಹರಿಹರನ್.!

Posted By:
Subscribe to Filmibeat Kannada

'ಲೂಸಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿನಂತೆ ಬೆಳೆದು ನಿಂತ ನಟಿ ಶ್ರುತಿ ಹರಿಹರನ್. ಈಗ ಶ್ರುತಿ ಹರಿಹರನ್ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಮಹಿಳಾ ಪ್ರಧಾನ ಚಿತ್ರಗಳಿಗೆ ಮೊದಲ ಆಯ್ಕೆ ಎನಿಸಿಕೊಂಡಿದ್ದಾರೆ. ಸ್ಪೆಷಲ್ ಸಾಂಗ್ ಗಳಲ್ಲಿ ಕುಣಿಯುವುದರ ಮೂಲಕ ಬೆಸ್ಟ್ ಡ್ಯಾನ್ಸರ್ ಆಗಿದ್ದಾರೆ. ಇನ್ನು ಸ್ಟಾರ್ ನಟರ ಚಿತ್ರಗಳಿಗೂ ಶ್ರುತಿ ಲಕ್ಕಿ ನಾಯಕಿ.

ಸ್ಯಾಂಡಲ್ ವುಡ್ ಸಾಮ್ರಾಜ್ಯದ ಮುಂದಿನ ರಾಣಿ 'ಶೃತಿ ಹರಿಹರನ್' ಆಗ್ಬಹುದಲ್ವಾ?

ಹೀಗಿರುವಾಗ, ಶ್ರುತಿ ಹರಿಹರನ್ ಗೆ ಸಾಲು ಸಾಲು ಸಿನಿಮಾಗಳ ಆಫರ್ ಬರ್ತಿದೆ. ಇವುಗಳಲ್ಲಿ 'ಆಟಗಾರ' ಖ್ಯಾತಿಯ ನಿರ್ದೇಶಕ ಕೆ.ಎಂ ಚೈತನ್ಯ ಅವರ ಮುಂದಿನ ಚಿತ್ರದಲ್ಲಿ ಶ್ರುತಿ ನಾಯಕಿ ಆಗಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ಶ್ರುತಿ ಅವರದ್ದು ತುಂಬಾ ಸ್ಪೆಷಲ್ ಹಾಗೂ ಚಾಲೆಂಜಿಂಗ್ ಪಾತ್ರ. ಇದುವರೆಗೂ ಈ ಪಾತ್ರದಲ್ಲಿ ಶ್ರುತಿ ಹರಿಹರನ್ ಕಾಣಿಸಿಕೊಂಡೇ ಇರಲಿಲ್ಲ. ಯಾವುದು ಆ ಪಾತ್ರ ಎಂಬುದು ಮುಂದೆ ಓದಿ.........

ಥ್ರಿಲ್ಲಿಂಗ್ ಸಬ್ಜೆಕ್ಟ್ ನಲ್ಲಿ ಥ್ರಿಲ್ಲಿಂಗ್ ಪಾತ್ರ

ಕೆ.ಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರ ಥ್ರಿಲ್ಲಿಂಗ್ ಕ್ರೈಂ ಕಥೆಯಾಗಿದೆ. ಈ ಮಿಸ್ಟರಿ ಸ್ಟೋರಿಯಲ್ಲಿ ಶ್ರುತಿ ಹರಿಹರನ್ ಅವರದ್ದು ಸ್ಟ್ರಾಂಗ್ ಕ್ಯಾರೆಕ್ಟರ್ ಅಂತೆ.

ಪೊಲೀಸ್ ಆಫೀಸರ್ ಶ್ರುತಿ

ಅಂದ್ಹಾಗೆ, ಕೆ.ಎಂ ಚೈತನ್ಯ ಹಾಗೂ ಶ್ರುತಿ ಹರಿಹರನ್ ಕಾಂಬಿನೇಷನ್ ಚಿತ್ರದಲ್ಲಿ ಶ್ರುತಿ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸಲಿದ್ದಾರಂತೆ. ಎಸಿಪಿ ಅವತಾರದಲ್ಲಿ ಲೂಸಿಯಾ ಬೆಡಗಿ ಹೊಸ ಚಾಲೆಂಜ್ ಗೆ ಸಿದ್ದವಾಗಿದ್ದಾರೆ.

'ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?

ಚಿರು ಸರ್ಜಾ ನಾಯಕ

ಈಗಾಗಲೇ ಕೆ.ಎಂ ಚೈತನ್ಯ ಅವರ 'ಆಟಗಾರ' ಹಾಗೂ 'ಆಕೆ' ಚಿತ್ರಗಳಲ್ಲಿ ನಾಯಕನಾಗಿರುವ ಚಿರಂಜೀವಿ ಸರ್ಜಾ, ಚೈತನ್ಯ ಅವರ ಮುಂದಿನ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.

ಪ್ರಮುಖ ಪಾತ್ರದಲ್ಲಿ ಸಂಗೀತಾ ಭಟ್

ಮೂಲಗಳ ಪ್ರಕಾರ ಈ ಚಿತ್ರದಲ್ಲಿ 'ಎರಡನೇ ಸಲ' ಖ್ಯಾತಿಯ ಸಂಗೀತಾ ಭಟ್ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

'ತಾರಕ್'ಗಾಗಿ ಮಲೇಶಿಯಾದಲ್ಲಿ ಶ್ರುತಿ

ಸದ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಶ್ರುತಿ, ಮಲೇಶಿಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆ.ಎಂ ಚೈತನ್ಯ ಆಕೆ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಂತರ ಇವರಿಬ್ಬರ ಜೋಡಿಯಲ್ಲಿ ಹೊಸ ಸಿನಿಮಾ ಶುರುವಾಗಲಿದೆ.

'ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್

English summary
Kannada Actress Sruthi Hariharan To be playing an ACP Role in her next film With Director K M Chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada