»   » ಟಾಲಿವುಡ್ ನಲ್ಲಿ 'ತಾರಕ್' ಚೆಲುವೆ: ಚತುರ್ಭಾಷಾ ನಟಿ ಆದ ಶೃತಿ ಹರಿಹರನ್

ಟಾಲಿವುಡ್ ನಲ್ಲಿ 'ತಾರಕ್' ಚೆಲುವೆ: ಚತುರ್ಭಾಷಾ ನಟಿ ಆದ ಶೃತಿ ಹರಿಹರನ್

Posted By:
Subscribe to Filmibeat Kannada

ನಟಿ ಶೃತಿ ಹರಿಹರನ್ ತಮ್ಮ ನಟನೆಯ ಮೂಲಕ ದಿನೇ ದಿನೇ ಬೆಳೆಯುತ್ತಿರುವ ನಟಿ. ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿರುವ ಶೃತಿ ಈಗ ಟಾಲಿವುಡ್ ನಲ್ಲಿ ಸಿನಿಮಾ ಮಾಡಲಿದ್ದಾರೆ.

'ಕಿಚ್ಚನ್ ಟೈಂ'ನಿಂದ ಕಿಚ್ಚನ ಸಿನಿಮಾವರೆಗೂ ನಡೆದ ಶ್ರುತಿ ಹರಿಹರನ್

ಕನ್ನಡದ ನಂತರ ಈಗಾಗಲೇ ಶೃತಿ ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ. ಈಗ ತೆಲುಗು ಚಿತ್ರರಂಗಕ್ಕೆ ಶೃತಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದಹಾಗೆ, ಶೃತಿ ತೆಲುಗು ಸಿನಿಮಾದಲ್ಲಿ ನಟಿಸುವುದು ಪಕ್ಕಾ. ಆದರೆ ಆ ಚಿತ್ರದ ಬಗ್ಗೆ ಸದ್ಯಕ್ಕೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಂದಿಲ್ಲ.

 'Sruthi Hariharan' ready to make her debut to Telugu industry.

ಇನ್ನು ಶೃತಿ ಹರಿಹರನ್ ಅವರ ಆ ಹೊಸ ಸಿನಿಮಾ ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಶುರು ಆಗಲಿದೆಯಂತೆ. ಈ ಮೂಲಕ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿ ಶೃತಿ ಚತುರ್ಭಾಷಾ ನಟಿ ಅಂತ ಕರೆಸಿಕೊಳ್ಳಲಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾದಲ್ಲಿ ನಟಿಸಿದ ಖ್ಯಾತಿ ಶ್ರುತಿ ಪಾಲಾಗಲಿದೆ.

English summary
Kannada Actress 'Sruthi Hariharan' ready to make her debut to Telugu industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada