For Quick Alerts
  ALLOW NOTIFICATIONS  
  For Daily Alerts

  ಸುದ್ದಿ ವಾಹಿನಿಗಳ ವಿರುದ್ಧ ನಟಿ ಶ್ರುತಿ ಹರಿಹರನ್ ಗರಂ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಸುದ್ದಿ ವಾಹಿನಿಗಳ ವಿರುದ್ಧ ಗರಂ ಆಗಿದ್ದಾರೆ. ದಾರಿತಪ್ಪಿಸುವ ಸುದ್ದಿಗಳನ್ನು ಬಿತ್ತರ ಮಾಡಬೇಡಿ ಎಂದು ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶ್ರುತಿ ಹರಿಹರನ್ ಇತ್ತೀಚಿಗೆ ಕೊರೊನಾ ಸೋಂಕಿತರಿಗೆ ಬೆಡ್, ಆಕ್ಸಿಜನ್ ಅವಶ್ಯಕತೆ ಇದೆ, ಸಹಾಯ ಮಾಡಿ ಎಂದು ಪೊಸ್ಟ್ ಹಾಕಿದ್ದರು.

  ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಶ್ರುತಿ ಹರಿಹರನ್ ತನ್ನ ಸ್ನೇಹಿತನಿಗೆ ಬೆಡ್, ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ ಎಂದು ಸುದ್ದಿ ಬಿತ್ತರಿಸಿದ್ದರು. ಈ ಸುದ್ದಿ ನೋಡಿ ಗರಂ ಆಗಿರುವ ನಟಿ ಶ್ರುತಿ ಹರಿಹರನ್, ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇಂಥ ಸುದ್ದಿಗಳನ್ನು ಬಿತ್ತರಿಸಬೇಡಿ ಎಂದಿದ್ದಾರೆ.

  ಶ್ರುತಿ ಹರಿಹರನ್ ಮುದ್ದಿನ ಮಗಳು ಜಾನಕಿಯ ಮುದ್ದಾದ ಫೋಟೋಗಳಿವುಶ್ರುತಿ ಹರಿಹರನ್ ಮುದ್ದಿನ ಮಗಳು ಜಾನಕಿಯ ಮುದ್ದಾದ ಫೋಟೋಗಳಿವು

  'ದೇವರ ದಯೆ ನನ್ನ ಕುಟುಂಬ ಮತ್ತು ಸ್ನೇಹಿತರೆಲ್ಲರು ಆರೋಗ್ಯವಾಗಿ, ಸುರಕ್ಷಿತರಾಗಿದ್ದಾರೆ. ಯಾರಿಗೆ ಅಗತ್ಯ ಇದಿಯೋ ಅವರಿಗೆ ನಾನು ಸಹಾಯ ಮಾಡುತ್ತಿದ್ದಾರೆ. ನಮಗ್ಯಾರಿಗೂ ಬೆಡ್ ಅವಶ್ಯಕತೆ ಇಲ್ಲ. ಭಯ ಹುಟ್ಟಿಸುವ ಸುದ್ದಿಗಳನ್ನು ಬಿತ್ತರಿಸುವುದನ್ನು ಮೊದಲು ನಿಲ್ಲಿಸಿ. ಈಗಾಗಲೇ ನಾವು ಭಯಭೀತರಾಗಿದ್ದೇವೆ. ಗೊಂದಲದಲ್ಲಿದ್ದೇವೆ' ಎಂದು ಹೇಳಿದ್ದಾರೆ.

  Recommended Video

  ಅನುಷ್ಕ ಗಾಗಿ ರೊಮ್ಯಾಂಟಿಕ್ ಹಾಡು ಹಾಡಿದ ವಿರಾಟ್ ಕೊಹ್ಲಿ | Filmibeat Kannada

  ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿರುವ ಶ್ರುತಿ ಹರಿಹರನ್ ಸದ್ಯ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದ್ದ ಶ್ರುತಿ ಬಳಿಕ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ಶ್ರುತಿ ಹರಿಹರನ್ ನಟಿಸಿದ್ದ ಆದ್ಯ ಸಿನಿಮಾ ತೆರೆಗೆ ಬಂದಿದೆ. ಶ್ರುತಿ ಮತ್ತೆ ಯಾವಾಗ ವಾಪಸ್ ಆಗ್ತಾರೆ, ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕು.

  English summary
  Actress Sruthi Hariharan requests to Kannada news channels to stop misleading news.
  Sunday, May 2, 2021, 15:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X