»   » ದುಲ್ಕರ್ ಸಲ್ಮಾನ್ ಚಿತ್ರದಲ್ಲಿ ತೆರೆಹಂಚಿಕೊಂಡ ಶ್ರುತಿ ಹರಿಹರನ್

ದುಲ್ಕರ್ ಸಲ್ಮಾನ್ ಚಿತ್ರದಲ್ಲಿ ತೆರೆಹಂಚಿಕೊಂಡ ಶ್ರುತಿ ಹರಿಹರನ್

Posted By:
Subscribe to Filmibeat Kannada

'ಲೂಸಿಯ' ಬೆಡಗಿ ಶ್ರುತಿ ಹರಿಹರನ್ ಈಗ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

ನಟಿ ಶ್ರುತಿ ಹರಿಹರನ್ ಬಗೆಗಿನ ಲೇಟೆಸ್ಟ್ ಕುತೂಹಲಕಾರಿ ಸುದ್ದಿ ಏನಂದ್ರೆ, ಇತ್ತೀಚೆಗೆ ಮಾಲಿವುಡ್ ಚಿತ್ರವೊಂದರಲ್ಲೂ ತೆರೆಹಂಚಿಕೊಂಡಿದ್ದಾರೆ. ಹೌದು, ಮಲಯಾಳಂ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅಭಿನಯದ 'ಸೋಲೋ(Solo)' ಚಿತ್ರದಲ್ಲಿ ಶ್ರುತಿ ಹರಿಹರನ್ ಬಣ್ಣ ಹಚ್ಚಿದ್ದಾರೆ.

Sruthi Hariharan shared screen with Dulquer Salmaan in 'Solo' movie

'ಸೋಲೋ' ಚಿತ್ರದಲ್ಲಿ ಅಭಿನಯಿಸಿದ ಅನುಭವವನ್ನು ಸ್ವತಃ ಶ್ರುತಿ ಹರಿಹರನ್ ರವರು ತಮ್ಮ ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ. " ಸೋಲೋ ಚಿತ್ರೀಕರಣದ ಪ್ರೊಸೆಸ್ ನನಗೆ ಅತ್ಯದ್ಭುತ ಅನುಭವ ನೀಡಿತು. ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚಿಕ್ಕದಾಗಿದ್ದರು ಸಹ ದೀರ್ಘಕಾಲ ನನ್ನಲ್ಲಿ ಮರುಕಳಿಸುವಂತಹ ಕ್ಯಾರೆಕ್ಟರ್ ಅದು" ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಅಂದಹಾಗೆ 'ಸೋಲೋ' ಚಿತ್ರದ ನಟ ದುಲ್ಕರ್ ಸಲ್ಮಾನ್(ಮಮ್ಮುಟ್ಟಿ ಮಗ) ಕನ್ನಡದ ಯುವ ಸಿನಿ ಪ್ರಿಯರಿಗೆ 'ಬೆಂಗಳೂರು ಡೇಸ್', 'ಚಾರ್ಲಿ', 'ವಿಕ್ರಮಾದಿತ್ಯನ್' ಚಿತ್ರಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಮಲಯಾಳಂ ಭಾಷೆ ಅರ್ಥವಾಗದಿದ್ದರೂ ಸಹ ಅವರ ಸಿನಿಮಾಗಳನ್ನು ನೋಡಬೇಕೆನ್ನುವ ಹಾಗೆ ಅಭಿನಯದ ಮೂಲಕ ಮೋಡಿಮಾಡಿದ್ದಾರೆ.

Sruthi Hariharan shared screen with Dulquer Salmaan in 'Solo' movie

ನಟಿ ಶ್ರುತಿ ಹರಿಹರನ್ ಈ ಹಿಂದೆಯೂ 'ಸಿನೆಮಾ ಕಂಪನಿ', 'Call Me@' ಮತ್ತು 'Thekku Thekkoru Deshathu' ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ತಮಿಳು ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.

English summary
Kannada Actress Sruthi Hariharan has shared screen with mollywood actor Dulquer Salmaan in 'Solo' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada