»   » 'ಈಗ' ನಿರ್ದೇಶಕ ರಾಜಮೌಳಿಗೆ ಮಾತೃ ವಿಯೋಗ

'ಈಗ' ನಿರ್ದೇಶಕ ರಾಜಮೌಳಿಗೆ ಮಾತೃ ವಿಯೋಗ

Posted By:
Subscribe to Filmibeat Kannada
Rajamouli mother passes away
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಹಾಗೂ ಕರ್ನಾಟಕ ರಾಯಚೂರು ಮೂಲದ ಎಸ್.ಎಸ್. ರಾಜಮೌಳಿ ಅವರ ತಾಯಿ ಶ್ರೀಮತಿ ರಾಜನಂದಿನಿ ಅವರು ಶನಿವಾರ (ಅ.20) ಇಹಲೋಕ ತ್ಯಜಿಸಿದ್ದಾರೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ರಾಜನಂದಿನಿ ಅವರ ಪತಿ ಹಾಗೂ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರಹಗಾರರಾಗಿ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅದು ಯಾವುದೇ ಸಭೆ ಸಮಾರಂಭವಿರಲಿ ರಾಜಮೌಳಿ ಕುಟುಂಬಿಕರೆಲ್ಲಾ ಕಾಣಿಸಿಕೊಳ್ಳುತ್ತಿದ್ದರು. ಆದರೆ ರಾಜನಂದಿನಿ ಅವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವರ ಅನಾರೋಗ್ಯವೇ ಕಾರಣ ಎನ್ನಲಾಗಿದೆ.

ಅವರ ತಾಯಿಯ ಅನಾರೋಗ್ಯದ ಕಾರಣ ರಾಜಮೌಳಿ ಅವರು ಇತ್ತೀಚೆಗೆ ಯಾವುದೇ ಚಿತ್ರೀಕರಣಕ್ಕೂ ಹಾಜರಾಗುತ್ತಿರಲಿಲ್ಲ. ತಮ್ಮ ತಾಯಿಯ ಅನಾರೋಗ್ಯದ ನೋವನ್ನು ಟ್ವಿಟ್ಟರ್ ನಲ್ಲಿ ಆಗಾಗ ತೋಡಿಕೊಂಡಿದ್ದರು ರಾಜಮೌಳಿ.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೈದರಾಬಾದಿನ ಸನ್ ಶೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಚಿಕಿತ್ಸೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಈ ಎರಡು ತಿಂಗಳ ಕಾಲ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕವೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. (ಏಜೆನ್ಸೀಸ್)

English summary
South Indian star director SS Rajamouli’s mother Rajanandini has passed away on 20th Saturday morning. She has been suffering from illness for a while now. She is survived by her husband Vijayendra Prasad and family.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada