»   » ದಂಗುಬಡಿಸುವ ರಾಜಮೌಳಿ 'ಬಾಹುಬಲಿ' ಚಿತ್ರದ ಸೆಟ್ಸ್

ದಂಗುಬಡಿಸುವ ರಾಜಮೌಳಿ 'ಬಾಹುಬಲಿ' ಚಿತ್ರದ ಸೆಟ್ಸ್

By: ರವಿಕಿಶೋರ್
Subscribe to Filmibeat Kannada

ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಅದ್ದೂರಿ ಚಿತ್ರ 'ಬಾಹುಬಲಿ'. ಈ ಚಿತ್ರ ಕೇವಲ ಟಾಲಿವುಡ್ ಚಿತ್ರ ಎನ್ನಿಸಿಕೊಳ್ಳದೆ ಇಡೀ ದೇಶದ ಗಮನವನ್ನು ಸೆಳೆದಿದೆ. ಈ ಬಾರಿ ರಾಜಮೌಳಿ ಏನೆಲ್ಲಾ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಇನ್ನು ಚಿತ್ರಕ್ಕೆ ಯಾವ ರೀತಿಯ ತಾಂತ್ರಿಕತೆ ಬಳಸಿಕೊಂಡಿದ್ದಾರೆ, ಮೇಕಪ್, ಕ್ಯಾಮೆರಾ ವರ್ಕ್ ಏನೆಲ್ಲಾ ಇದೆ ಎಂಬುದು ಈ ಚಿತ್ರವನ್ನು ಕುತೂಹಲದಿಂದ ನಿರೀಕ್ಷಿಸುವಂತಾಗಿದೆ. ಸರಿಸುಮಾರು ರು.150 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಎಂದರೆ ನಿರೀಕ್ಷೆಗಳು ಏನೆಲ್ಲಾ ಇರಬೇಡ. ['ಬಾಹುಬಲಿ'ಯಲ್ಲಿ ಸುದೀಪ್ ಹೆಸರು, ಪಾತ್ರ ಬಹಿರಂಗ]

ಹಾಲಿವುಡ್ ಸಿನಿಮಾ ರೇಂಜ್ ನಲ್ಲಿರುವ ಈ ಚಿತ್ರವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತಿದೆ. ಒಂದಕ್ಕೆ 'ಬಾಹುಬಲಿ ದಿ ಬಿಗಿನಿಂಗ್' ಎಂದು ಹೆಸರಿಡಲಾಗಿದೆ. ದಂಗುಬಡಿಸುವ ವಿಜ್ಯುಯಲ್ ಎಫೆಕ್ಟ್ಸ್ ಈ ಚಿತ್ರದ ಪ್ರಮುಖ ಹೈಲೈಟ್ಸ್ ಗಳಲ್ಲಿ ಒಂದು.

ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿ

ಬಾಹುಬಲಿ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಾಗಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದೊಂದು ಅತ್ಯದ್ಭುತ ಚಿತ್ರ

ಟಾಲಿವುಡ್ ಚಿತ್ರೋದ್ಯಮದ ಇತಿಹಾಸದಲ್ಲೇ ಇದೊಂದು ಅತ್ಯದ್ಭುತ ಚಿತ್ರ ಎನ್ನಲಾಗಿದೆ. ಪ್ರಸ್ತುತ ಮೊದಲ ಭಾಗಕ್ಕೆ ಸಂಬಂಧಿಸಿದ ನಿರ್ಮಾಣನಂತರದ ಕೆಲಸಗಳು ಭರದಿಂದ ಸಾಗುತ್ತಿವೆ.

ಪ್ರಭಾಸ್ ಅವರದು ದ್ವಿಪಾತ್ರಾಭಿನಯ

ಬಾಹುಬಲಿ ಹಾಗೂ ಶಿವುಡು ಪಾತ್ರಗಳಲ್ಲಿ ಪ್ರಭಾಸ್ ಕಾಣಿಸಲಿದ್ದಾರೆ. ಅವರದು ದ್ವಿಪಾತ್ರಾಭಿನಯ. ಬಾಹುಬಲಿಗೆ ಅನುಷ್ಕಾ ಜೋಡಿಯಾದರೆ, ಶಿವುಡುಗೆ ತಮನ್ನಾ. ಸತ್ಯರಾಜ್ ಹಾಗೂ ರಮ್ಯಕೃಷ್ಣ ಸಹ ಪಾತ್ರವರ್ಗದಲ್ಲಿದ್ದಾರೆ.

ಚಿತ್ರದ ಪ್ರಮುಖ ಆಕರ್ಷಣೆಗಳು ಒಂದೆರಡಲ್ಲ

ಚಿತ್ರದಲ್ಲಿನ ಯುದ್ಧ ಸನ್ನಿವೇಶಗಳು, ಕುದುರೆ ವರಸೆ ಮುಂತಾದ ಸನ್ನಿವೇಶಗಳು ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿವೆ.

ಸುಂದರ ತಾಣಗಳಲ್ಲಿ ಚಿತ್ರೀಕರಣ

ಕರ್ನೂಲಿನ ಒರವಕಲ್ಲು ರಾಕ್ ಗಾರ್ಡನ್, ಅಥಿರಪಲ್ಲಿ ಫಾಲ್ಸ್, ರಾಮೋಜಿ ಫಿಲಂ ಸಿಟಿ, ಮಹಾಬಲೇಶ್ವರದ ಸುಂದರ ತಾಣಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಅತ್ಯಂತ ದುಬಾರಿ ಚಿತ್ರ

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಚಿತ್ರ ಎಂಬ ಹಿರಿಮೆಗೂ ಬಾಹುಬಲಿ ಚಿತ್ರ ಪಾತ್ರವಾಗಿದೆ.

ಬಿಬಿಸಿಯ ಸಾಕ್ಷ್ಯಚಿತ್ರದಲ್ಲೂ ಬಾಹುಬಲಿ

ನೂರು ವರ್ಷಗಳ ಭಾರತೀಯ ಚಿತ್ರರಂಗದ ಬಿಬಿಸಿಯ ಸಾಕ್ಷ್ಯಚಿತ್ರದಲ್ಲೂ ಬಾಹುಬಲಿ ಚಿತ್ರ ಸ್ಥಾನಪಡೆದಿರುವುದು ವಿಶೇಷ.

ಸುದೀಪ್ ಅವರ ಗಮನಾರ್ಹ ಪಾತ್ರ

ಪ್ರಭಾಸ್ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಸುದೀಪ್ ಅವರು ಗಮನಾರ್ಹ ಪಾತ್ರವನ್ನು ಪೋಷಿಸುತ್ತಿದ್ದಾರೆ.

ಮಹತ್ತರ ತಿರುವು ನೀಡುವ ಪಾತ್ರ

ಸುದೀಪ್ ಅವರದು ಅತಿಥಿ ಪಾತ್ರವಾದರೂ ಚಿತ್ರದಲ್ಲಿ ಮಹತ್ತರ ತಿರುವು ನೀಡುವ ಪಾತ್ರ ಎನ್ನಲಾಗುತ್ತಿದೆ. ಈ ಪಾತ್ರದ ಬಗ್ಗೆ ಸುದೀಪ್ ಸಹ ಅಷ್ಟೇ ಕುತೂಹಲದಿಂದಿದ್ದಾರೆ.

ಆಯುಧಗಳ ವ್ಯಾಪಾರಿಯಾಗಿ ಕಿಚ್ಚ

"ಬಾಹುಬಲಿ ಚಿತ್ರದಲ್ಲಿ ತಾನು ಆಯುಧಗಳ ವ್ಯಾಪಾರಿಯಾಗಿ ಕಾಣಿಸುತ್ತೇನೆ. ನನ್ನ ಪಾತ್ರದ ಹೆಸರು ಅಸ್ಲಂ ಖಾನ್. ಇದಿಷ್ಟೇ ಅಲ್ಲದೆ ಈ ಚಿತ್ರದಲ್ಲಿ ನನ್ನ ಹಾಗೂ ಸತ್ಯರಾಜ್ ನಡುವೆ ಕತ್ತಿಯೊಂದಿಗೆ ಕಾದಾಡುವ ಸನ್ನಿವೇಶವೂ ಇದೆ" ಎಂದಿದ್ದಾರೆ.

ಬಾಹುಬಲಿ ಮರೆಯಲಾಗದ ಅನುಭವ

ಬಾಹುಬಲಿ ಚಿತ್ರೀಕರಣ ನನಗೆ ಮರೆಯಲಾಗದ ಅನುಭವ ಕೊಟ್ಟಿದೆ. ಚಿತ್ರದಲ್ಲಿ ಅದ್ಭುತವಾದ ಸೆಟ್ಸ್, ಉತ್ತಮ ಟೀಂ, ಮುಖ್ಯವಾಗಿ ರಾಜಮೌಳಿ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿರುವುದು ತುಂಬಾ ಸಂತಸ ತಂದಿದೆ. ಶೀಘ್ರದಲ್ಲೇ ಮತ್ತಷ್ಟು ವಿವರಗಳನ್ನು ಟ್ವೀಟ್ ಮಾಡುತ್ತೇನೆ ಎಂದಿದ್ದರು.

ರಾಣಾ ಖಳನಾಯಕನ ಪಾತ್ರ

ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ಚಿತ್ರದ ನಾಯಕಿ. ಬಾಹುಬಲಿ ಚಿತ್ರದ ಪಾತ್ರವರ್ಗದಲ್ಲಿ ರಾಣಾ, ಅಡಿವಿ ಶೇಷ್ ಮುಂತಾದವರು ಇದ್ದಾರೆ. ಚಿತ್ರದ ಪ್ರಭಾಸ್ ನಾಯಕ ನಟನಾದರೆ ರಾಣಾ ಖಳನಾಯಕನ ಪಾತ್ರ.

ಅತ್ಯುತ್ತಮ ಕ್ಯಾಮೆರಾ ವರ್ಕ್

ಈ ಚಿತ್ರ ತಾಂತ್ರಿಕವಾಗಿಯೂ ಅತ್ಯುತ್ತಮವಾಗಿದ್ದು 'arri alexa XT' ಎಂಬ ಅತ್ಯಾಧುನಿಕ ಕ್ಯಾಮೆರಾ ಬಳಸಲಾಗಿದೆ.

ಹಲವು ಭಾಷೆಗಳಲ್ಲಿ ತೆರೆಗೆ

ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆಯುತ್ತಿದೆ. ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸೆಂಥಿಲ್ ಕುಮಾರ್ ಕ್ಯಾಮೆರಾ

ಗ್ರಾಫಿಕ್ಸ್ ಗೂ ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮಗಧೀರ, ಈಗ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸೆಂಥಿಲ್ ಕುಮಾರ್ ಈ ಚಿತ್ರದಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ.

ವಾರಿಯರ್ ಫೈಟ್ ಗೆ 2000 ಜ್ಯೂನಿಯರ್ ಆರ್ಟಿಸ್ಟ್

ತೆಲುಗಿನ ಬಾಹುಬಲಿ ತಮಿಳಲ್ಲಿ ಮಹಾಬಲಿಯಾಗಿ ತೆರೆಗೆ ಬರಲಿದೆ. 2015ಕ್ಕೇ ತಮಿಳಿನಲ್ಲೂ ಚಿತ್ರವನ್ನು ರಿಲೀಸ್ ಮಾಡಲಿರೋ ರಾಜಮೌಳಿ ಒಂದು ವಾರಿಯರ್ ಫೈಟ್ ಗೆ 2000 ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಬಳಸಿಕೊಳ್ಳುತ್ತಿದ್ದಾರೆ.

ಕಲ್ಪನೆಗಳಿಗೆ ಕಿಚ್ಚು ಹಚ್ಚಿರುವ ಚಿತ್ರ

ಆ ಅದ್ಭುತ ಫೈಟ್ ಹೇಗಿರಬಹುದು ಅನ್ನುವುದನ್ನ ಯೋಚಿಸೀನೇ ಚಿತ್ರಪ್ರೇಮಿಗಳು ಹೊಸ ಕಲ್ಪನೆ ಕನಸುಗಳಲ್ಲಿ ಕಳೆದುಹೋಗಿರೋದು ಗ್ಯಾರಂಟಿ.

ಮೇ ತಿಂಗಳಲ್ಲೇ ಚಿತ್ರದ ತೆರೆಗೆ?

ರಾಜಮೌಳಿ ಏನನ್ನೇ ಮಾಡಿದರೂ ಅದೊಂದು ಮಾಸ್ಟರ್ ಪೀಸ್. ಚಿತ್ರದ ಮೊದಲ ಭಾಗ ಮೇ ಎರಡನೇ ವಾರದ ಬಳಿಕ ತೆರೆಗೆ ಬರಲಿದೆ ಎನ್ನುತ್ತವೆ ಮೂಲಗಳು.

ಇದೊಂದು ಐತಿಹಾಸಿಕ ಚಿತ್ರ

‌ಚಿತ್ರದಲ್ಲಿನ ಕತ್ತಿ, ಗುರಾಣಿ, ಆನೆ, ಕುದುರೆ, ಅರಮನೆಯಂತಹ ಸೆಟ್ಟಿಂಗ್ ನೋಡಿದರೆ ಇದೊಂದು ಐತಿಹಾಸಿಕ ಚಿತ್ರದಂತೆ ಭಾಸವಾಗುತ್ತದೆ.

ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ

ಆದರೆ ಕಥೆ ಏನು ಎಂಬ ಗುಟ್ಟನ್ನು ಮಾತ್ರ ರಾಜಮೌಳಿ ಎಲ್ಲೂ ಹೇಳಿಕೊಂಡಿಲ್ಲ. ಒಂದು ವೇಳೆ ಹೇಳಿದರೂ ಏನೂ ಉಪಯೋಗವಿಲ್ಲ. ಯಾಕೆಂದರೆ ರು.150 ಕೋಟಿ ಬಜೆಟ್ ನಲ್ಲಿ ಇನ್ನೊಂದು ಸಿನಿಮಾ ಮಾಡಲು ಸಾಧ್ಯವೇ.

ರಿಲೀಸ್ ಗೂ ಮುನ್ನವೇ ಹಿಟ್ ಆದ ಚಿತ್ರ

ರಾಜಮೌಳಿ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆ ಇಲ್ಲ. 'ಬಾಹುಬಲಿ' ಚಿತ್ರ ಬಿಡುಗಡೆಗೆ ಮುನ್ನವೇ ಹಿಟ್ ಆಗಿದೆ. ಇನ್ನು ಕಲೆಕ್ಷನ್ ಮಾತ್ರ ಬಾಕಿ ಇದೆ.

English summary
Baahubali is an upcoming two-part Indian epic film being simultaneously made in Telugu and Tamil languages.The film will be simultaneously dubbed into Malayalam, Hindi and in several foreign languages. Baahubali is directed by S. S. Rajamouli and features Prabhas, Rana Daggubati, Anushka Shetty and Tamannaah in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada