For Quick Alerts
  ALLOW NOTIFICATIONS  
  For Daily Alerts

  ಅವಯವ ದಾನಕ್ಕೆ ಮುಂದಾದ ಎಸ್ಎಸ್ ರಾಜಮೌಳಿ

  By Rajendra
  |

  ಕರ್ನಾಟಕದ ರಾಯಚೂರು ಮೂಲದ ಹಿಟ್ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವಯವ ದಾನಕ್ಕೆ ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಅವರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ರಾಜಮೌಳಿ ಅವರದು. ಅವರು ಇತ್ತೀಚೆಗೆ ಹೈದರಾಬಾದಿನ ಗಾಂಧಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದರು.

  ಮೆಡಿಕಲ್ ಕಾಲೇಜು ಆಯೋಜಿಸಿದ್ದ ಅವಯವ ದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ರಾಜಮೌಳಿ. ಬಳಿಕ ಅವರು ಕಾರ್ಯಕ್ರಮದಿಂದ ಉತ್ತೇಜಿತರಾಗಿ ತಮ್ಮ ಅವಯವಗಳನ್ನು ದಾನ ಮಾಡುವುದಾಗಿ ಘೋಷಿಸಿದರು.

  ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, "ಎಲ್ಲ ವೈದ್ಯರಿಗೂ ಹಾಗೂ ಪ್ರೊಫೆಸರ್ ಗಳಿಗೆ ಧನ್ಯವಾದಗಳು. ಗಾಂಧಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದು ತುಂಬ ಸಂತಸವಾಗಿದೆ. ನಾನು ನನ್ನ ಅವಯವಗಳನ್ನು ದಾನ ಮಾಡಬೇಕೆಂದು ನಿರ್ಧರಿಸಿದ್ದೇನೆ" ಎಂದಿದ್ದಾರೆ.

  ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಟ್ವೀಟಿಸಿದ್ದು, ಒಬ್ಬರ ದೇಹದ ಅವಯವಗಳು ಎಂಟು ಮಂದಿಗೆ ಜೀವ ಕೊಡುತ್ತವೆ. ಹಾಗೆಯೇ ತಮ್ಮ ಫಾಲೋವರ್ಸ್ ಗೆ ಒಂದು ಮಹಾನ್ ಸಂದೇಶವನ್ನೂ ರವಾನಿಸಿದ್ದಾರೆ. ತಾವು ಅವಯವ ದಾನಕ್ಕೆ ಸ್ವ ಇಚ್ಛೆಯಿಂದ ಮುಂದೆ ಬರುವುದಾದರೆ www.mohanfoundation.org ಭೇಟಿ ನೀಡಿ ಎಂದಿದ್ದಾರೆ.

  ರಾಜಮೌಳಿ ಕೇವಲ ಬಾಕ್ಸಾಫೀಸ್ ಹಿಟ್ ಚಿತ್ರಗಳನ್ನು ನೀಡುವುದರ ಜೊತೆಗೆ ತಮಗೆ ಬಂದ ಲಾಭದಲ್ಲಿ ಕೊಂಚ ಪಾಲನ್ನು ಸಮಾಜಸೇವೆಗೂ ಮೀಸಲಿಟ್ಟಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲುವ ಅವರ ಕಾರ್ಯಕ್ರಮಕ್ಕೆ 'ಪ್ರಾಜೆಕ್ಟ್ 511' ಎಂದು ಹೆಸರಿಟ್ಟಿದ್ದಾರೆ. ಆಲ್ ದ ಬೆಸ್ಟ್ ರಾಜಮೌಳಿ. (ಒನ್ಇಂಡಿಯಾ ಕನ್ನಡ)

  English summary
  Karnataka Raichuru born successful film director SS Rajamouli pledged to donate his organs. The filmmaker was so inspired and moved by the organ donation program conducted by Gandhi Medical College, Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X