twitter
    For Quick Alerts
    ALLOW NOTIFICATIONS  
    For Daily Alerts

    'ರಾಗಿಣಿಗೆ ಡ್ರಗ್ಸ್ ತಗೋ ಅಂತ ಬಿಜೆಪಿ ಹೇಳಿರಲಿಲ್ಲ'- ಬಿಜೆಪಿ ಸಚಿವ

    |

    ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ನಟಿ ರಾಗಿಣಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು, ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಹಾಗೂ ಬಿಜೆಪಿ ಮುಖಂಡರ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದಿರುವ ವಿಚಾರ.

    Recommended Video

    ನಾನು ಅವತ್ತೇ ಸಾಯಬೇಕಿತ್ತು, ಸುದೀಪ್ ಬಂದು ನನ್ನನ್ನು ಬದುಕಿಸಿದ್ರು

    ಈ ವಿಚಾರವನ್ನು ಮುಂದಿಟ್ಟು ಬಿಜೆಪಿ ಪಕ್ಷವೇ ಡ್ರಗ್ ಜಾಲಕ್ಕೆ ಬೆಂಬಲಿಸಿದೆ ಎಂದು ವಿಪಕ್ಷಗಳು ಹಾಗು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ''ರಾಗಿಣಿಗೆ ಡ್ರಗ್ಸ್ ತಗೊಳ್ಳಿ ಅಂತ ಪಕ್ಷ ಹೇಳಿಲ್ಲ, ಮುಜುಗರದ ಪ್ರಶ್ನೆ ಇಲ್ಲ'' ಎಂದಿದ್ದಾರೆ.

    ಡ್ರಗ್ಸ್ ಪ್ರಕರಣ: ಸಿಸಿಬಿ ಅಧಿಕಾರಿಗಳಿಂದ ನಟಿ ರಾಗಿಣಿ ಬಂಧನಡ್ರಗ್ಸ್ ಪ್ರಕರಣ: ಸಿಸಿಬಿ ಅಧಿಕಾರಿಗಳಿಂದ ನಟಿ ರಾಗಿಣಿ ಬಂಧನ

    'ಡ್ರಗ್ಸ್ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಹಾಗೂ ಡ್ರಗ್ಸ್ ಜಾಲವನ್ನು ಕಿತ್ತಾಕುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

    ST Somashekar react on Actress Ragini dwivedi

    'ಸಿನಿಮಾ ಕಲಾವಿದರು ಯುವ ಜನರಿಗೆ ಮಾದರಿ. ಅವರೇ ಇಂತಹ ಕೃತ್ಯದಲ್ಲಿ ಭಾಗಿಯಾದರೇ ಯಾವ ರೀತಿ ಸಂದೇಶ ಹೋಗುತ್ತೆ. ಸಿನಿಮಾ ಕಲಾವಿದರು ಮಾತ್ರವಲ್ಲ, ಯಾರೇ ಆಗಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಸಚಿವರು ತಿಳಿಸಿದರು.

    English summary
    Drugs in Sandalwood: Karnataka minister ST Somashekar has react on actress Ragini dwivedi.
    Saturday, September 5, 2020, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X