twitter
    For Quick Alerts
    ALLOW NOTIFICATIONS  
    For Daily Alerts

    ನಿಲ್ಲದ ಕೊರೊನಾ ಹಾವಳಿ: ದೊಡ್ಡ ಚಿತ್ರಗಳಿಗೆ ಹೆಚ್ಚಿದ ತಲೆನೋವು

    |

    ಕೊರೊನಾ ವೈರಸ್ ಸಂಕಷ್ಟ ಮುಗಿತು, ನಿಧಾನವಾಗಿ ಎಲ್ಲವೂ ಮೊದಲಿನಂತೆ ಆಗುತ್ತದೆ. ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್ ಪ್ರದರ್ಶನ ಕಾಣಲಿದೆ ಎಂಬ ಭರವಸೆಯಿಂದ ದೊಡ್ಡ ಚಿತ್ರಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿರುವಾಗಲೇ ಎರಡನೇ ಅಲೆ ಅಪ್ಪಳಿಸಿ ಎಲ್ಲ ಯೋಜನೆಗಳನ್ನು ತಲೆಕೆಳಗಾಗಿಸಿದೆ.

    ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದೇ ಅದೃಷ್ಟ. ಅದಾದ ಬಳಿಕ ರಾಜ್ಯಗಳು ಮತ್ತೆ ಲಾಕ್‌ಡೌನ್ ಮೊರೆ ಹೋಗಿದೆ. ಥಿಯೇಟರ್‌ಗಳು ಮತ್ತೆ ಮುಚ್ಚಿವೆ, ಶೂಟಿಂಗ್ ರದ್ದುಗೊಂಡಿದೆ. ಸಹಜ ಸ್ಥಿತಿಗೆ ಬಂದಿದ್ದ ಹಿನ್ನೆಲೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿ ಡೇಟ್ ಲಾಕ್ ಮಾಡಿದ್ದರು. ಆದ್ರೀಗ, ಈ ಹಿಂದೆ ನಿರ್ಧರಿಸಿದ ದಿನಾಂಕಕ್ಕೆ ಚಿತ್ರಗಳು ಬರುವುದು ಬಹುತೇಕ ಅನುಮಾನ ಆಗಿದೆ. ಮತ್ತೆ ಮುಂದೂಡಿಕೆಯಾಗುತ್ತಾ ದೊಡ್ಡ ಸಿನಿಮಾಗಳು? ಮುಂದೆ ಓದಿ...

    ಆಚಾರ್ಯ, ತಲೈವಿ ಮುಂದಕ್ಕೆ ಹೋಗಿದೆ

    ಆಚಾರ್ಯ, ತಲೈವಿ ಮುಂದಕ್ಕೆ ಹೋಗಿದೆ

    ಈ ಹಿಂದೆ ನಿರ್ಧರಿಸಿದಂತೆ ಆಗಿದ್ದರೆ ಮೇ 13 ರಂದು ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಹರಡುವಿಕೆ ಹೆಚ್ಚಾದ ಕಾರಣ ರಿಲೀಸ್ ಮುಂದೂಡಿಕೆಯಾಗಿದೆ. ಅದಕ್ಕೂ ಮುಂಚೆ ಏಪ್ರಿಲ್ 23 ರಂದು ತಲೈವಿ ಬರಬೇಕಿತ್ತು. ಆ ಚಿತ್ರವೂ ಮುಂದಕ್ಕೆ ಹೋಗಿತ್ತು. ಈಗ ಈ ಸಿನಿಮಾಗಳ ಬಿಡುಗಡೆ ಯಾವಾಗ ಎನ್ನುವುದು ಸ್ವತಃ ಚಿತ್ರತಂಡಕ್ಕೂ ತಲೆಬಿಸಿ ಉಂಟು ಮಾಡಿದೆ.

    ಬಾಲಿವುಡ್‌ ಪ್ರಿಯರಿಗೆ ಈ ಸುದ್ದಿ: 2021ರಲ್ಲಿ ತೆರೆಗೆ ಬರಲಿರುವ ಚಿತ್ರಗಳ ಬಿಡುಗಡೆ ದಿನಾಂಕಬಾಲಿವುಡ್‌ ಪ್ರಿಯರಿಗೆ ಈ ಸುದ್ದಿ: 2021ರಲ್ಲಿ ತೆರೆಗೆ ಬರಲಿರುವ ಚಿತ್ರಗಳ ಬಿಡುಗಡೆ ದಿನಾಂಕ

    ಕೆಜಿಎಫ್ ಮತ್ತು ರಾಧೇ ಶ್ಯಾಮ್

    ಕೆಜಿಎಫ್ ಮತ್ತು ರಾಧೇ ಶ್ಯಾಮ್

    ಎರಡನೇ ಅಲೆಯಿಂದಲೇ ಹೆಚ್ಚು ಸಾವು-ನೋವು ಸಂಭವಿಸಿದೆ. ಮೂರನೇ ಅಲೆಯ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೊಡುತ್ತಿದ್ದಾರೆ. ಒಂದು ವೇಳೆ ಸೋಂಕು ಹರಡುವಿಕೆ ನಿಯಂತ್ರಣ ಕಷ್ಟವಾದಲ್ಲಿ ಬಹುನಿರೀಕ್ಷೆಯ ಕೆಜಿಎಫ್ (ಜುಲೈ 16) ಮತ್ತು ರಾಧೇ ಶ್ಯಾಮ್ (ಜುಲೈ 30) ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಅನುಮಾನ.

    ಪುಷ್ಪ ಮತ್ತು ಆರ್ ಆರ್ ಆರ್

    ಪುಷ್ಪ ಮತ್ತು ಆರ್ ಆರ್ ಆರ್

    ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳಾದ ಪುಷ್ಪ ಮತ್ತು ಆರ್‌ಆರ್‌ಆರ್ ಚಿತ್ರಗಳು ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿಕೊಂಡಿದೆ. ಆಗಸ್ಟ್ 13ಕ್ಕೆ ಪುಷ್ಪ ಹಾಗೂ ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್ ಚಿತ್ರ ಬರಲು ಸಜ್ಜಾಗಿದೆ. ಬಹುಶಃ ಈ ಚಿತ್ರಗಳ ಮೇಲೂ ಪರಿಣಾಮ ಬೀರಬಹುದು. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ನವೆಂಬರ್ 4ಕ್ಕೆ ಬರಲಿದೆ.

    ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಬಂದ್: ಸಂಕಷ್ಟಕ್ಕೆ ಸಿಲುಕಿದ 14 ಸಿನಿಮಾಗಳುಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಬಂದ್: ಸಂಕಷ್ಟಕ್ಕೆ ಸಿಲುಕಿದ 14 ಸಿನಿಮಾಗಳು

    ಕೋಟಿಗೊಬ್ಬ-ಸಲಗ-ಭಜರಂಗಿ

    ಕೋಟಿಗೊಬ್ಬ-ಸಲಗ-ಭಜರಂಗಿ

    ರಾಬರ್ಟ್, ಪೊಗರು, ಯುವರತ್ನ ಚಿತ್ರಗಳು ಸಿಕ್ಕ ಅವಕಾಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗುವ ಅದೃಷ್ಟ ಪಡೆದುಕೊಂಡಿತ್ತು. ಆದರೆ, ಕೋಟಿಗೊಬ್ಬ, ಸಲಗ, ಭಜರಂಗಿ 2 ಚಿತ್ರಗಳಿಗೆ ಆ ಅವಕಾಶ ಸಿಕ್ಕಿಲ್ಲ. ಈ ಚಿತ್ರಗಳು ಒಟಿಟಿಯಲ್ಲಿ ಬರಲು ಸಹ ಸಿದ್ದವಿಲ್ಲ. ಥಿಯೇಟರ್ ಓಪನ್ ಆಗಲಿ ಎಂದು ಕಾಯುತ್ತಿವೆ.

    Recommended Video

    Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada
    ಒಟಿಟಿಗೆ ಒಲ್ಲದ ಮನಸ್ಸು

    ಒಟಿಟಿಗೆ ಒಲ್ಲದ ಮನಸ್ಸು

    ಕೆಲವು ಸ್ಟಾರ್ ನಟರ ಚಿತ್ರಗಳು ಒಟಿಟಿಯಲ್ಲಿ ಬರುವ ಕಡೆ ಆಸಕ್ತಿ ತೋರುತ್ತಿವೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಬಿಗ್ ಬಜೆಟ್ ಚಿತ್ರಗಳು ಚಿತ್ರಮಂದಿರಗಳಲ್ಲಿಯೇ ಬರುತ್ತೇವೆ ಎಂದು ಹಠಕ್ಕೆ ಬಿದ್ದಿವೆ. ಹಾಗಾಗಿ, ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಸ್ಟಾರ್ ನಟರ ಸಿನಿಮಾಗಳ ದರ್ಶನ ಸಿಗುವುದು ಡೌಟು.

    English summary
    Coronavirus crisis: Star actors films will postponed again due to the fear of COVID 19.
    Sunday, May 23, 2021, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X