»   » ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ

ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ

By: ಹರಾ
Subscribe to Filmibeat Kannada

ತೆರೆ ಮೇಲೆ ರೆಬೆಲ್ ಸ್ಟಾರ್ ಅಂಬರೀಶ್ ಹೇಗೆ ಖಡಕ್ಕೋ, ನಿಜ ಜೀವನದಲ್ಲೂ ಹಾಗೇ. ಅಂಬಿ ಮಾತಿಗೆ ಯಾರೇ ಆಗಲಿ ತಲೆ ಬಾಗುತ್ತಾರೆ. ಅವರು ಹೇಳಿದ್ದನ್ನ ಎಲ್ಲರೂ ಚಾಚೂ ತಪ್ಪದೇ ಪಾಲಿಸುತ್ತಾರೆ.

ಡಾ.ರಾಜ್ ಕುಮಾರ್ ನಂತ್ರ ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸಿರುವುದು ಇದೇ ಅಂಬರೀಶ್. ಈಗಾಗಲೇ ಅನೇಕ ವಿವಾದಗಳನ್ನ ಅಂಬಿ ನೀರು ಕುಡಿದಷ್ಟೇ ಸಲೀಸಾಗಿ ಬಗೆಹರಿಸಿದ್ದಾರೆ. ಆದ್ರೆ, ಈಗ ಎದ್ದಿರುವ ವಿವಾದ ಅಂತಿಂಥದ್ದಲ್ಲ. 'ನಾ ಕೊಡೆ..ನೀ ಬಿಡೆ..' ಅನ್ನುವಂತಿದೆ ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಸಮಸ್ಯೆ.

ರಾಜಕಾರಣದ ಮಧ್ಯೆಯೂ ಸಮಯ ಬಿಡುವು ಮಾಡಿಕೊಂಡು ಅಂಬರೀಶ್ ನಿರ್ಮಾಪಕರ ಸಂಘದ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕೆ ನಿನ್ನೆ ಕಲಾವಿದರ ಸಂಘದ ಸಭೆ ಕರೆದಿದ್ದರು. ಈ ಸಭೆಯಲ್ಲಿ ಎಲ್ಲಾ ಕಲಾವಿದರೂ ಭಾಗವಹಿಸಬೇಕಿತ್ತು.

ಎಲ್ಲಾ ಕಲಾವಿದರಿಗೂ, ಸಂಘದ ಕಡೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದ್ರೆ, ಸಭೆಗೆ ಬಂದವರಿಗಿಂತ ಬಾರದಿರುವವರೇ ಹೆಚ್ಚಾಗಿದ್ದರು. ಮುಂದೆ ಓದಿ....

ಸ್ಟಾರ್ ನಟರ ಪೈಕಿ ಬಂದವರು ಶಿವಣ್ಣ ಮಾತ್ರ!

ಕನ್ನಡ ನಿರ್ಮಾಪಕರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸದಾ ಗೌರವ ನೀಡುವ ಶಿವರಾಜ್ ಕುಮಾರ್ ನಿನ್ನೆಯ ಮಹತ್ವದ ಸಭೆಗೆ ಹಾಜರಾಗಿದ್ದರು. ಆದ್ರೆ, ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂಬಿ ತಡವಾಗಿ ಆಗಮಿಸಿದ್ದಕ್ಕೆ ಬೇಸೆತ್ತು, ಶಿವಣ್ಣ ಮನೆ ಕಡೆ ಮುಖ ಮಾಡಿದರು. [ಅಂಬಿ ಬರ್ಲಿಲ್ಲ ; ಶಿವಣ್ಣ, ಸರೋಜ ದೇವಿ ಕಾಯ್ಲಿಲ್ಲ..!]

ದರ್ಶನ್ ಕಾಣ್ಲಿಲ್ಲ..ಸುದೀಪ್ ಬರ್ಲಿಲ್ಲ..!

ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಳ್ಳುತ್ತಾರೆ ಅಂತಲೇ ಎಲ್ಲರೂ ಹೇಳಿದರು. ಆದ್ರೆ, ದರ್ಶನ್ ಫಿಲ್ಮ್ ಚೇಂಬರ್ ಸುತ್ತ ಮುತ್ತ ಸುಳಿಯಲಿಲ್ಲ. ಇನ್ನೂ ಸುದೀಪ್ ಕೂಡ ಕ್ಯಾರೇ ಅನ್ಲಿಲ್ಲ. ಅಸಲಿಗೆ ಸುದೀಪ್ ರವರ ಮೂರು ಚಿತ್ರಗಳು ನಿನ್ನೆ ಸೆಟ್ಟೇರಿವೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ಗಣೇಶ್-ರಮೇಶ್ ಪತ್ತೆ ಆಗ್ಲಿಲ್ಲ..!

ರಿಯಾಲಿಟಿ ಶೋಗಳಲ್ಲಿ ಖ್ಯಾತಿ ಪಡೆದಿರುವ ನಟ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಿನ್ನೆ ಫಿಲ್ಮ್ ಚೇಂಬರ್ ಕಡೆ ತಲೆ ಹಾಕಲಿಲ್ಲ. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

ಎಲ್ಲಿ ಹೋದರು ರವಿಚಂದ್ರನ್?

ಕನ್ನಡ ಚಿತ್ರರಂಗದ ಹಿರಿಯರ ಪೈಕಿ ರವಿಚಂದ್ರನ್ ಕೂಡ ಒಬ್ಬರು. ಖಡಕ್ ವ್ಯಕ್ತಿತ್ವ ಹೊಂದಿರುವ ರವಿಚಂದ್ರನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರೆ, ತೆಗೆದುಕೊಳ್ಳುವ ನಿರ್ಧಾರದಲ್ಲಿ ತೂಕ ಬರುತ್ತಿತ್ತು. ಅಲ್ಲದೇ, ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿರುವ ಕಾರಣ ಎರಡೂ ಕಡೆಯ ಸಾಧಕ ಭಾದಕ ರವಿಚಂದ್ರನ್ ಗೆ ಗೊತ್ತಿದೆ. ಆದರೂ, ಅವರು ಮಿಸ್ ಆಗಿದ್ದು ಅನೇಕ ಪ್ರಶ್ನೆಗಳನ್ನ ಹುಟ್ಟುಹಾಕಿವೆ. [ನಟ ಜಗ್ಗೇಶ್ ಬೇಸರ ಯಾರ ಮೇಲೆ?]

ಪುನೀತ್-ಯಶ್ ಎಲ್ಲಿ?

ಇನ್ನೂ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗವಹಿಸಬೇಕಿತ್ತು. ಅವರೂ ಗೈರು ಹಾಜರಾಗಿದ್ದಾರೆ. [ಕನ್ನಡ ಚಿತ್ರರಂಗದಲ್ಲಿ ರಾದ್ಧಾಂತ - ಫ್ರೇಂ ಬೈ ಫ್ರೇಂ]

ಅಂಬಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ..!

ಹಿಂದೆ ಡಾ.ರಾಜ್ ಕುಮಾರ್ ನೀಡಿದ ಒಂದು ಕರೆಗೆ ಇಡೀ ಚಿತ್ರರಂಗ ಒಂದಾಗಿ ನಿಲ್ಲುತ್ತಿತ್ತು. ಆದ್ರೆ, ಈಗಿನ ಪರಿಸ್ಥಿತಿ ಹೇಗಿದೆ? ನಿರ್ಮಾಪಕರು ಬೀದಿಗಿಳಿದು ಒಂದು ವಾರ ಕಳೆದಿದೆ. ಸಭೆಯಲ್ಲಿ ಕೂತು ಚರ್ಚಿಸೋಣ ಅಂತ ಅಂಬಿ ಎಲ್ಲಾ ಕಲಾವಿದರಿಗೂ ಪತ್ರ ಬರೆದಿದ್ದಾರೆ. ಹೀಗಿದ್ದರೂ, ಅವರ ಮಾತಿಗೆ ಕವಡೆ ಕಾಸಿನ ಬೆಲೆ ಬೇಡ್ವಾ? ಅವರ ಮಾತನ್ನ ಕೇಳುವ ತಾಳ್ಮೆ ಯಾರಿಗೂ ಇಲ್ವಾ? ಅನ್ನೋದು ಈಗ ಎದ್ದಿರುವ ಪ್ರಶ್ನೆ. [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

ಹಿರಿಯ ಕಲಾವಿದರಷ್ಟೇ ಇದ್ದರು..!

ಸಭೆಯಲ್ಲಿ ಹಿರಿಯ ನಟ ಶ್ರೀನಾಥ್, ಜಯಮಾಲಾ, ಹೇಮಾ ಚೌಧರಿ, ಪ್ರಮೀಳಾ ಜೋಷಾಯಿ ಮುಂತಾದವರು ಪಾಲ್ಗೊಂಡಿದ್ದರು. ನಿರ್ಮಾಪಕರ ಕೆಂಗಣ್ಣು ಇರುವುದು ಸ್ಟಾರ್ ನಟರ ಮೇಲೆ ಮಾತ್ರ. ಅವರೇ ಇಲ್ಲದೇ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದು ಹೇಗೆ? ನಿರ್ಮಾಪಕರಿಗೆ ಮಣಿಯದೇ ಹೋದರೂ, ಅಂಬಿ ಮಾತಿಗೆ ಬೆಲೆಕೊಟ್ಟಾದರೂ ಸೆಲೆಬ್ರಿಟಿ ನಟರು ಬರಬಹುದಿತ್ತಲ್ಲವೇ? ಯಾರೂ ಬಾರದೇ ಇದ್ದು, ಸಭೆ ವಿಫಲವಾಗಿದ್ದಕ್ಕೆ ಅಂಬಿ 'ಧಿಕ್ಕಾರ' ಕೂಗಿಸಿಕೊಂಡರು.

ನಿರ್ಮಾಪಕರ ಸಮಸ್ಯೆ ಏನು?

ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ನಿರ್ಮಾಪಕರು ಫಿಲ್ಮ್ ಚೇಂಬರ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಟಿವಿ ಚಾನೆಲ್ ನವರು ಕನ್ನಡ ಚಿತ್ರಗಳನ್ನ ಕೊಂಡುಕೊಳ್ಳುತ್ತಾಯಿಲ್ಲ. ಆದರೂ, ಅದೇ ವಾಹಿನಿಗಳಲ್ಲಿ ಸ್ಟಾರ್ ನಟರು ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ನಟರು ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಿಲ್ಲ. ಪ್ರೊಡ್ಯೂಸರ್ಸ್ ಲಾಸ್ ನಲ್ಲಿದ್ದಾರೆ. ಅವರ ಸಹಾಯಕ್ಕೆ ಕಲಾವಿದರು ಬರುತ್ತಿಲ್ಲ ಅನ್ನೋದು ಈಗ ಭುಗಿಲೆದ್ದಿರುವ ದೊಡ್ಡ ವಿವಾದ.

English summary
Kannada Actor Ambareesh presided over the Meeting in KFCC yesterday (June 7th). Except Shivarajkumar, None of the other star actors including Sudeep, Darshan, Ganesh, Puneeth Rajkumar, Ravichandran made their presence in Film Chamber.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada