For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನಾಗಿ ಮಿಂಚಿದ ಸಿನಿಸ್ಟಾರ್ಸ್ ಮಕ್ಕಳು

  |

  ಸ್ಯಾಂಡಲ್ ವುಡ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಈ ವರ್ಷವೂ ಜೋರಾಗಿ ನಡೆದಿದೆ. ತಮ್ಮ ಮಕ್ಕಳಿಗೆ ಕೃಷ್ಣ ಹಾಗೂ ರಾಧಾ ವೇಷ ಧರಿಸಿ ಹಲವು ತಾರೆಯರು ಸಂಭ್ರಮಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿಯ ಇಬ್ಬರು ಮಕ್ಕಳಿಗೂ ಕೃಷ್ಣ-ರಾಧಾ ಗೆಟಪ್ ಹಾಕಿಸಿದ್ದಾರೆ.

  Upendra as college student I love you behind the scenes | Filmibeat Kannada

  ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ರಾಕಿಂಗ್ ದಂಪತಿಯ ಮುದ್ದು ಮಕ್ಕಳ ಜೊತೆ ಇನ್ನು ಕೆಲವು ಸ್ಟಾರ್‌ಗಳ ಮಕ್ಕಳು ಸಹ ಬಾಲಕೃಷ್ಣನಾಗಿ ಮಿಂಚಿದ್ದಾರೆ. ಈ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಮುಂದೆ ಓದಿ....

  ರಾಧಾ ಕೃಷ್ಣ ಆಗಿ ಮಿಂಚಿದ ಯಶ್-ರಾಧಿಕಾ ಮುದ್ದು ಮಕ್ಕಳುರಾಧಾ ಕೃಷ್ಣ ಆಗಿ ಮಿಂಚಿದ ಯಶ್-ರಾಧಿಕಾ ಮುದ್ದು ಮಕ್ಕಳು

  ಯಶ್-ರಾಧಿಕಾ ಮಕ್ಕಳು

  ಯಶ್-ರಾಧಿಕಾ ಮಕ್ಕಳು

  ಜೂ.ಯಶ್ ಗೆ ಕೃಷ್ಣನ ವೇಷ ಧರಿಸಿದ್ರೆ, ಮಗಳು ಐರಾಗೆ ರಾಧೆಯ ಹಾಗೆ ಅಲಂಕರಿಸಿದ್ದರು. ಇಬ್ಬರನ್ನು ಒಟ್ಟಿಗೆ ಕೂರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ "ಪುಟ್ಟ ರಾಧೆ ಮತ್ತು ಕೃಷ್ಣ ಅವರಿಂದ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು" ಎಂದು ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

  ಬಾಲಕೃಷ್ಣನಾಗಿ ರಿಷಬ್ ಶೆಟ್ಟಿ ಮಗ

  ಬಾಲಕೃಷ್ಣನಾಗಿ ರಿಷಬ್ ಶೆಟ್ಟಿ ಮಗ

  ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಗ ಕರಣ್ ಸಹ ಬಾಲಕೃಷ್ಣನಾಗಿ ಮಿಂಚಿದ್ದಾರೆ. ಕೃಷ್ಣನ ವೇಷಧರಿಸಿದ್ದ ಕರಣ್ ಫೋಟೋಶೂಟ್ ಮಾಡಿಸಿ ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌‌ನಲ್ಲಿ ಫೋಟೋ ಹಂಚಿಕೊಂಡು 'ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು' ತಿಳಿಸಿದ್ದರು.

  ಲೂಸ್ ಮಾದ ಯೋಗೇಶ್ ಮಗಳು

  ಲೂಸ್ ಮಾದ ಯೋಗೇಶ್ ಮಗಳು

  ಲೂಸ್ ಮಾದ ಯೋಗೇಶ್ ಅವರ ಮಗಳಿಗೆ ಕೃಷ್ಣನ ಗೆಟಪ್ ಹಾಕಿಸಿದ್ದಾರೆ. ಮಗಳ ಜೊತೆ ಮೊದಲ ವರ್ಷದ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಯೋಗೇಶ್ ಬಹಳ ಖುಷಿಯಾಗಿದ್ದಾರೆ.

  ಪ್ರಿಯಾ ಹಾಸನ್

  ಪ್ರಿಯಾ ಹಾಸನ್

  ಜಂಭದ ಹುಡುಗಿ ಖ್ಯಾತಿಯ ಪ್ರಿಯಾ ಹಾಸನ್ ಮೊದಲ ಸಲ ತನ್ನ ಮಗನ ಫೋಟೋ ಹಂಚಿಕೊಂಡಿದ್ದಾರೆ. ''ಹಾಯ್ ಫ್ರೆಂಡ್ಸ್ ಇವತ್ತು ಕೃಷ್ಣ ಜನ್ಮಾಷ್ಟಮಿ. ಇವತ್ತೇ ಫಸ್ಟ್ ಟೈಮ್ ನನ್ನ ಮಗನ ಫೋಟೋ ಸೋಷಿಯಲ್ ಮೀಡಿಯಾ ದಲ್ಲಿ ಹಾಕ್ತಿರುವುದು. ನೋಡಿ ಇವನೇ ನನ್ನ ಮಗ ಆರ್ಯ ಹೇಗಿದ್ದಾನೆ. ಎಲ್ಲರಿಗೂ ಹಬ್ಬದ ಶುಭಾಶಯಗಳು'' ಎಂದು ವಿಶ್ ಮಾಡಿದ್ದಾರೆ.

  English summary
  Kannada actor Yash and radhika pandit, loosa mada yogesh, actress priya hassan and rishab shetty shared thair children photos in the special vacation of krishna janmashtami.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X