»   » ಹೊಸ ವರ್ಷಕ್ಕೆ ಗೆಲುವಿನ 'ಖುಷಿ' ಯಾರಿಗೆ?

ಹೊಸ ವರ್ಷಕ್ಕೆ ಗೆಲುವಿನ 'ಖುಷಿ' ಯಾರಿಗೆ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ 2015 ನೇ ವರ್ಷ ತುಂಬಾನೇ ಸ್ಪೆಷಲ್. ಯಾಕಂದ್ರೆ 2015 ರಂದು ಬಿಡುಗಡೆಯಾಗುತ್ತಿರುವ ಮೊದಲನೇ ಚಿತ್ರ ಗಣೇಶ್ ಅಭಿನಯದ 'ಖುಷಿ ಖುಷಿಯಾಗಿ'.

ಜನವರಿ ಒಂದರಂದೇ ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸುತ್ತಿರುವ 'ಖುಷಿ ಖುಷಿಯಾಗಿ' ಪ್ರೇಕ್ಷಕರಿಗೆ ಖುಷಿ ಕೊಡಬಹುದು. ಆದ್ರೆ ಆ ಖುಷಿ ಗಣೇಶ್ ಗೆ ಲಭಿಸುವುದು ಕೇವಲ ಒಂದು ದಿನ ಮಾತ್ರ! ಇದಕ್ಕೆ ಕಾರಣ 'ಶಿವಂ'.

Upendra1

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ 'ಶಿವಂ' ಜನವರಿ ಎರಡರಂದು ಬಿಡುಗಡೆಯಾಗುತ್ತಿದೆ. ಭಿನ್ನ ವಿಭಿನ್ನ ಲುಕ್ ಗಳಲ್ಲಿ ಉಪ್ಪಿ ಮತ್ತು ರಾಗಿಣಿ ಕಾಣಿಸಿಕೊಂಡಿರುವ 'ಶಿವಂ' ಚಿತ್ರ ವಿವಾದಗಳಿಂದಲೇ ಸದ್ದು ಮಾಡಿದ್ದು ಹೆಚ್ಚು. [ಉಪ್ಪಿ 'ಶಿವಂ'ಗೆ 25 ಕಡೆ ಕೊಚ್ಚಿ ಹಾಕಿದ ಸೆನ್ಸಾರ್]

ಸಹಜವಾಗೇ ಎಲ್ಲರಿಗೂ ಕುತೂಹಲ ಕೆರಳಿಸಿರುವ 'ಶಿವಂ', 'ಖುಷಿ ಖುಷಿಯಾಗಿ' ಚಿತ್ರಕ್ಕಿಂತ ಬಿಗ್ ಓಪನ್ನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಇನ್ನೂ ಲಾಂಗ್ ಗ್ಯಾಪ್ ನಂತ್ರ ತೆರೆಗೆ ಬರುತ್ತಿರುವ ಗಣೇಶ್ ಗೂ 'ಖುಷಿ ಖುಷಿಯಾಗಿ' ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. [ಈ ಈಯರ್ ಎಂಡ್ ಕಳೀರಿ ಖುಷಿ ಖುಷಿಯಾಗಿ]

Ganesh

ಹಿಟ್ ಜೋಡಿ ಅಮೂಲ್ಯ ಮತ್ತು ಗಣೇಶ್ ಒಂದಾಗಿರುವ 'ಖುಷಿ ಖುಷಿಯಾಗಿ', ಅದ್ಭುತ ಯಶಸ್ಸು ಕಂಡ ತೆಲುಗಿನ 'ಗುಂಡೆಜಾರಿ ಗಲ್ಲಂತಯಿಂದಿ' ಚಿತ್ರದ ರೀಮೇಕ್ ಆದರೂ, ಹಾಡುಗಳಿಂದ ಬೇಜಾನ್ ಸೌಂಡ್ ಮಾಡಿದೆ. ಉಪ್ಪಿ ಕಡೆಯಿಂದ ಚಾಲೆಂಜ್ ಇದ್ದರೂ, ಹೊಸ ವರ್ಷದಂದು 'ಖುಷಿ ಖುಷಿಯಾಗಿ' ಗಾಂಧಿನಗರದಲ್ಲಿ ಖಾತೆ ತೆರೆಯುವುದಕ್ಕೆ ಗಣೇಶ್ ಅಂತೂ ಸರ್ವ ಸನ್ನದ್ಧವಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹಾಗೆ, ಒಂದೇ ದಿನದ ಅಂತರದಲ್ಲಿ ಬರುವ 'ಶಿವಂ' ಚಿತ್ರ ಕೂಡ ಗಾಂಧಿನಗರದ ಎಲ್ಲಾ ರೆಕಾರ್ಡ್ ಗಳನ್ನು ಉಡೀಸ್ ಮಾಡುವ ಹುಮ್ಮಸ್ಸಲ್ಲಿದೆ. ಬಹುದಿನಗಳ ನಂತ್ರ ಹೊಸ ವರ್ಷದಂದೇ ನಡೆಯುತ್ತಿರುವ ಈ ಸ್ಟಾರ್ ವಾರ್ ನಲ್ಲಿ ಗೆಲುವಿನ ಖುಷಿ ಯಾರಿಗೆ ಲಭಿಸುತ್ತೋ? ಆ ಪ್ರೇಕ್ಷಕ ಮಹಾಪ್ರಭುವೇ ನಿರ್ಧರಿಸಬೇಕು! (ಫಿಲ್ಮಿಬೀಟ್ ಕನ್ನಡ)

English summary
Now its official, Golden Star Ganesh and Upendra will be battlling for Box-office this New Year. Ganesh starrer Khushi Khushiyagi will be releasing on January 1st and with one day gap Uppi's Shivam will be releasing on January 2nd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada