»   » ಟ್ವಿಟ್ಟರ್ ನಲ್ಲಿ 'ಬಾಹುಬಲಿಗೆ' ಮಹಾಮಸ್ತಕಾಭಿಷೇಕ

ಟ್ವಿಟ್ಟರ್ ನಲ್ಲಿ 'ಬಾಹುಬಲಿಗೆ' ಮಹಾಮಸ್ತಕಾಭಿಷೇಕ

Posted By:
Subscribe to Filmibeat Kannada

ಇಡೀ ಚಿತ್ರರಂಗ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಟಾಲಿವುಡ್ ಚಿತ್ರ 'ಬಾಹುಬಲಿ' ಇದೇ 10ನೇ ತಾರೀಖಿನಂದು ಅಮೋಘವಾಗಿ ತೆರೆ ಕಾಣುತ್ತಿದ್ದು, ಅಭಿಮಾನಿಗಳು ಕೌಂಟ್ ಡೌನ್ ಶುರು ಹಚ್ಚಿಕೊಂಡಿದ್ದಾರೆ.

ಅದಕ್ಕಿಂತಲೂ ಹೆಚ್ಚಾಗಿ ಇಡೀ ಚಿತ್ರರಂಗದ ಹಲವಾರು ಸ್ಟಾರ್ ಗಳು ತಮ್ಮ-ತಮ್ಮ ಸ್ಟಾರ್-ವಾರ್ ಗಳನ್ನೆಲ್ಲಾ ಮರೆತು, ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಪ್ರಶಂಸೆಯ ಸುರಿಮಳೆಗಳನ್ನು ಸುರಿಸಿದ್ದಾರೆ.

ಟಾಲಿವುಡ್ ಖ್ಯಾತ ನಟ ಅಲ್ಲು-ಅರ್ಜುನ್ ಬಾಹುಬಲಿ ತಂಡಕ್ಕೆ ಹಾಗೂ ಚಿತ್ರದ ನಾಯಕ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. [ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಬಾಹುಬಲಿ]

ನಾನು 'ಡಾರ್ಲಿಂಗ್' ಪ್ರಭಾಸ್ ಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತು ನನ್ನ ಪ್ರೀತಿಯ ಗೆಳೆಯ ರಾಣಾದಗ್ಗುಬಾಟಿಯ ಮುಂದಿನ ಚಿತ್ರ ಜೀವನಕ್ಕೆ 'ಬಾಹುಬಲಿ' ಒಂದೊಳ್ಳೆ ಟರ್ನಿಂಗ್ ಪಾಯಿಂಟ್ ಆಗಲಿದೆ, ತೆಲುಗು ಚಿತ್ರರಂಗಕ್ಕೆ ಇಂತಹ ಅಮೋಘ ಚಿತ್ರವನ್ನು ಕೊಡುಗೆಯಾಗಿ ನೀಡಿದ್ದಕ್ಕಾಗಿ ಎಸ್.ಎಸ್. ರಾಜಮೌಳಿ ಅವರಿಗೆ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ ಅಂತ 'ಬನ್ನಿ' ಟ್ವೀಟ್ ಮಾಡಿದ್ದಾರೆ. 'ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?


ಅದ್ಧೂರಿ ಸೆಟ್, ರೋಚಕ ವಿಷುವಲ್ ಜೊತೆಗೆ, ವಿ ವಿಜಯೇಂದ್ರ ಪ್ರಸಾದ್ ಕಲ್ಪನೆಯಲ್ಲಿ ಮೂಡಿಬಂದಿರುವ 'ಬಾಹುಬಲಿ' ಚಿತ್ರಕ್ಕೆ 'ಈಗ' ಖ್ಯಾತಿಯ ಎಸ್.ಎಸ್ ರಾಜಮೌಳಿ ಆಕ್ಷನ್-ಕಟ್ ಹೇಳಿದ್ದಾರೆ. [ಮೈನವೀರೇಳಿಸುವ ಡೈಲಾಗ್ ನಲ್ಲಿ ಬಾಹುಬಲಿ ನ್ಯೂ ಟ್ರೈಲರ್]

ಭಾರತದ ಅದ್ಧೂರಿ ಸಿನೆಮಾದ ಬಗ್ಗೆ ಟ್ವಿಟ್ಟರ್ ನಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಹಾಗೂ ಶುಭಾಶಯಗಳ ಗುಚ್ಛ ಇಲ್ಲಿದೆ ನೋಡಿ....

'ಬನ್ನಿ' ಮತ್ತೊಂದು ಟ್ವೀಟ್

ಇಂತಹ ದೊಡ್ಡ ಪ್ರಾಜೆಕ್ಟ್ ತೆಲುಗು ಸಿನಿಮಾದಲ್ಲಿ ಆಗಿರುವುದು ಹೆಮ್ಮೆಯ ಸಂಗತಿ. ನಾನು ಎಲ್ಲಾ 'ಬಾಹುಬಲಿ' ಚಿತ್ರತಂಡಕ್ಕೆ ಶುಭಹಾರೈಸುತ್ತೇನೆ. ಅಂತ ಅಲ್ಲು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಅನುಷ್ಕಾ ಶೆಟ್ಟಿ

ಬಾಹುಬಲಿ ಚಿತ್ರದಲ್ಲಿ 'ಬಾಹುಬಲಿಗೆ' ದೇವಸೇನೆಯಾಗಿ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ ತಮ್ಮನ್ನು ಪರದೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ.

ಬಾಲಿವುಡ್ ಫೇಮಸ್ ಡೈರೆಕ್ಟರ್ ಕಮ್ ಆಕ್ಟರ್ ಕರಣ್ ಜೋಹರ್

ಹೈದರಾಬಾದ್ ನಲ್ಲಿ ಮುಂಗಡ ಟಿಕೇಟ್ ಕಾದಿರಿಸಲು ಒಂದು ಕಿ.ಮಿ ದೂರದಿಂದ ಜನ ಕ್ಯೂ ನಿಂತಿರುವುದು ಅಚ್ಚರಿಯ ಸಂಗತಿಯಾಗಿದೆ. ಭಾರತದ ಅತೀ ದೊಡ್ಡ ಮೋಷನ್ ಚಿತ್ರಕ್ಕೆ ಕೇವಲ ಎರಡೇ ದಿನಗಳು ಬಾಕಿ ಉಳಿದಿದೆ.

ಬಾಲಿವುಡ್ ನಟ ವಿವೇಕ್ ಒಬೆರಾಯ್

ನಿಜವಾಗಲೂ ರಾಜಮೌಳಿ ಸರ್ 'ದಿ ಲೆಜೆಂಡ್' ಅವರ 'ಬಾಹುಬಲಿ' ಇಡೀ ಟಾಲಿವುಡ್ ಗೆ ಹೆಮ್ಮೆಯ ಚಿತ್ರ. ಇಡೀ ಭಾರತ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಶ್ ಯು ಆಲ್ ದ ಬೆಸ್ಟ್ ಸರ್, ಮಗಧೀರ ಚಿತ್ರದ ನಂತರ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೇನೆ.

ರೇಣು ದೇಸಾಯಿ

ಈ ಒಂದು ಚಿತ್ರಕ್ಕೋಸ್ಕರ ಎಲ್ಲಾ ಕೆಲಸಗಳನ್ನು ಬದಿಗಿರಿಸಿ, ಎಲ್ಲರೂ ತೆಲುಗು ಚಿತ್ರರಂಗಕ್ಕಾಗಿ ತೆಲುಗು ಸಿನಿಮಾ ನೋಡಿ ಸಪೋರ್ಟ್ ಮಾಡಿ ಇದು ನನ್ನ ಪರ್ಸನಲ್ ರಿಕ್ವೆಸ್ಟ್.

ಪಿಸಿ ಶ್ರೀರಾಮ್

'ಬಾಹುಬಲಿ' ಚಿತ್ರದ ಪ್ರಾರಂಭೋತ್ಸವವಾಗಿದೆ. ಖಂಡಿತವಾಗಲೂ ಚಿತ್ರ ನೋಡಿಯೇ ತೀರುತ್ತೇನೆ.

English summary
Many celebrities from Telugu, Tamil, Malyalam and Bollywood industries are wishing 'Baahubali' team a huge success. SS Rajamouli directorial movie is set to release worldwide on July 10, 2015. Here are the Tweets and wishes from Stars and Celebrities

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada