For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ರಜನಿ ತಂಡಕ್ಕೆ ಕಲ್ಲು ಎಸೆದ ವಿದ್ಯಾರ್ಥಿಗಳು

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ದರ್ಬಾರ್' ಚಿತ್ರ ಇತ್ತೀಚಿಗಷ್ಟೆ ಲಾಂಚ್ ಸೆಟ್ಟೆರಿತ್ತು. ಆದರೆ, ಇದೀಗ ಈ ಸಿನಿಮಾದ ಚಿತ್ರೀಕರಣ ನಡೆಯುವ ವೇಳೆ ಚಿತ್ರತಂಡಕ್ಕೆ ವಿರೋಧ ವ್ಯಕ್ತವಾಗಿದೆ.

  ಮುಂಬೈನ ಕಾಲೇಜ್ ಒಂದರಲ್ಲಿ 'ದರ್ಬಾರ್' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಕಲ್ಲು ಎಸೆದು ತಮ್ಮ ಆಕ್ರೋಶವನ್ನು ತೋರಿಸಿದ್ದಾರೆ.

  ರಜನೀಕಾಂತ್ ನಟನೆಯ 'ದರ್ಬಾರ್' ಚಿತ್ರೀಕರಣ ವೇಳೆ ಕಲ್ಲೆಸೆತ

  ಚಿತ್ರದ ಮುಖ್ಯ ದೃಶ್ಯಗಳ ಚಿತ್ರೀಕರಣ ಅಲ್ಲಿ ನಡೆಯುತ್ತಿದ್ದ ಕಾರಣ, ಅದರ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಬಾರದು ಎಂದು ಚಿತ್ರತಂಡ ಹೇಳಿತ್ತು. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಕಲ್ಲು ಎಸೆದಿದ್ದಾರೆ. ಇದರ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿರುವ ಚಿತ್ರತಂಡ ಚಿತ್ರೀಕರಣವನ್ನೇ ಬೇರೆಡೆ ನಡೆಸಲು ಚಿಂತಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

  ಮುರುಗದಾಸ್ 'ದರ್ಬಾರ್' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಜನಿಗೆ ಮುರುಗದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಜನಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಪ್ಪತ್ತೈದು ವರ್ಷಕ್ಕೂ ಹಿಂದೆ 'ಪಾಂಡಿಯನ್' ಎಂಬ ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಆ ನಂತರ ಈಗಲೇ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಜನಿ - ಮುರುಗದಾಸ್ ಜೋಡಿಯ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್

  'ದರ್ಬಾರ್' ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾವನ್ನು ಸಂಕ್ರಾಂತಿಗೆ ಬಿಡುಗಡೆ ಮಾಡಲು ಪ್ಲಾನ್ ಚಿತ್ರತಂಡದಾಗಿದೆ. ನಯನಾತಾರ ಚಿತ್ರದ ನಾಯಕಿಯಾಗಿದ್ದಾರೆ.

  English summary
  The shooting of Darbar, starring Rajinikanth and Nayanthara, in Mumbai reportedly hit a roadblock after the students of a college, where the shoot was in progress, protested against the crew's strict rules.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X