For Quick Alerts
  ALLOW NOTIFICATIONS  
  For Daily Alerts

  ದ್ವಾರಕೀಶ್ ಸೋತ ನಂತರ ಕರೆದು ಕಾಲ್ ಶೀಟ್ ನೀಡಿದ ಶಿವಣ್ಣ

  |

  ಒಬ್ಬ ನಿರ್ದೇಶಕ, ನಿರ್ಮಾಪಕ ಗೆದ್ದಾಗ ಅವರ ಜೊತೆಗೆ ಸಿನಿಮಾ ಮಾಡಲು ಸಾಕಷ್ಟು ನಟರು ಮುಂದೆ ಬರುತ್ತಾರೆ. ಆದರೆ, ನಿರ್ದೇಶಕ, ನಿರ್ಮಾಪಕ ಸೋತಾಗ ಮೊದಲು ಅಂತವರ ಜೊತೆಗೆ ನಿಲ್ಲುವುದು ನಟ ಶಿವರಾಜ್ ಕುಮಾರ್.

  ಈಗಾಗಲೇ ಈ ರೀತಿ ಅನೇಕ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಶಿವಣ್ಣ ಅವಕಾಶ ನೀಡುತ್ತಾ ಬಂದಿದ್ದಾರೆ. ಇದೀಗ ದ್ವಾರಕೀಶ್ ಬ್ಯಾನರ್ ನಲ್ಲಿ ಶಿವರಾಜ್ ಕುಮಾರ್ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಶುರುವಾದ ಹಿಂದೆ ಕುತೂಹಲಕಾರಿ ಘಟನೆ ನಡೆದಿದೆ.

  ಶಿವರಾಜ್ ಕುಮಾರ್ - ಪಿ ವಾಸು ಚಿತ್ರದ ಟೈಟಲ್ 'ಆಯುಷ್ಮಾನ್ ಭವ'

  ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದ ಸಿನಿಮಾ ಸೋಲು ಕಂಡಾಗ ದ್ವಾರಕೀಶ್ ಪುತ್ರ ಯೋಗೇಶ್ ರನ್ನು ಕರೆದು ಸ್ವತಃ ಶಿವಣ್ಣ ಸಿನಿಮಾ ಅವಕಾಶ ನೀಡಿದ್ದಾರೆ. ಶಿವರಾಜ್ ಕುಮಾರ್ ಅವರ ಇಂತಹ ಒಳ್ಳೆಯ ತನವನ್ನು ಯೋಗೇಶ್ ದ್ವಾರಕೀಶ್ ನೆನೆದರು.

  'ಅಮ್ಮ ಐ ಲವ್ ಯೂ' ಹಿಟ್ ಆಗಲಿಲ್ಲ

  'ಅಮ್ಮ ಐ ಲವ್ ಯೂ' ಹಿಟ್ ಆಗಲಿಲ್ಲ

  ದ್ವಾರಕೀಶ್ ನಿರ್ಮಾಣದಲ್ಲಿ, ಚಿರಂಜೀವಿ ಸರ್ಜಾ ನಟನೆಯಲ್ಲಿ ಬಂದ 'ಅಮ್ಮ ಐ ಲವ್ ಯೂ' ಸಿನಿಮಾ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಈ ಸಿನಿಮಾದ ನಂತರ ಏನು..? ಎಂದು ಕೂತಿದ್ದ, ತಂದೆ ಮಗನಿಗೆ ನೆನಪಾಗಿದ್ದು, ಶಿವರಾಜ್ ಕುಮಾರ್ ಹೇಳಿದ್ದ ಮಾತು. 'ಅಮ್ಮ ಐ ಲವ್ ಯೂ' ಚಿತ್ರದ ಪ್ರೆಸ್ ಮೀಟ್ ನಲ್ಲಿ ನನಗೊಂದು ಸಿನಿಮಾ ಮಾಡಿ ಎಂದು ಶಿವಣ್ಣ ಹೇಳಿದ್ದರು.

  ಶಿವಣ್ಣ ಹೇಳಿದ್ದ ಮಾತು ನೆನಪಿಗೆ ಬಂತು

  ಶಿವಣ್ಣ ಹೇಳಿದ್ದ ಮಾತು ನೆನಪಿಗೆ ಬಂತು

  ಶಿವಣ್ಣ 'ಅಮ್ಮ ಐ ಲವ್ ಯೂ' ಸಿನಿಮಾ ಪ್ರೆಸ್ ಮೀಟ್ ನಲ್ಲಿ ಹೇಳಿದ್ದ ಮಾತು ಯೋಗೀಶ್ ದ್ವಾರಕೀಶ್ ಗೆ ನೆನಪಿಗೆ ಬಂದು, ಅವರನ್ನು ಸಂಪರ್ಕ ಮಾಡಲು ಮುಂದಾದರು. ಅದೇ ವೇಳೆಗೆ, ಶಿವಣ್ಣ ಕೂಡ ದ್ವಾರಕೀಶ್ ಬ್ಯಾನರ್ ನಲ್ಲಿ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದರು. ಒಂದು ಕಥೆ ಕೇಳಿದ್ದ ಶಿವಣ್ಣ ಇದನ್ನು ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿಸಬೇಕು ಎಂದುಕೊಂಡಿದ್ದರು.

  ದ್ವಾರಕೀಶ್ ಬ್ಯಾನರ್ ನಲ್ಲಿ ಮೊದಲ ಬಾರಿಗೆ ಶಿವಣ್ಣ ಸಿನಿಮಾ!

  ಶಿವಣ್ಣನೇ ಪಿ ವಾಸು ಜೊತೆಗೆ ಮಾತನಾಡಿದರು

  ಶಿವಣ್ಣನೇ ಪಿ ವಾಸು ಜೊತೆಗೆ ಮಾತನಾಡಿದರು

  ಪಿ ವಾಸು ಜೊತೆಗೆ ಸಿನಿಮಾ ಮಾಡೋಣವೇ ಎಂದು ಯೋಗೀಶ್ ದ್ವಾರಕೀಶ್ ರಿಗೆ ಶಿವಣ್ಣ ಕೇಳಿದರು. ಅವರು ಓಕೆ ಹೇಳಿದ ನಂತರ ತಾವೇ ಪಿ ವಾಸು ಜೊತೆಗೆ ಯೋಗೀಶ್ ದ್ವಾರಕೀಶ್ ಬಗ್ಗೆ ಮಾತನಾಡಿದರು. ನಾವು ಸಿನಿಮಾ ಮಾಡೋಣ, ನೀವು ಅನೌನ್ಸ್ ಮಾಡಿ ಹೋಗಿ ಎಂದು ಯೋಗೀಶ್ ದ್ವಾರಕೀಶ್ ಶಕ್ತಿ ತುಂಬಿದರು.

  ಶಿವಣ್ಣ ಸಹಾಯ ನೆನೆದ ಯೋಗೀಶ್ ದ್ವಾರಕೀಶ್

  ಶಿವಣ್ಣ ಸಹಾಯ ನೆನೆದ ಯೋಗೀಶ್ ದ್ವಾರಕೀಶ್

  ಒಂದು ಸಿನಿಮಾ ಸೋತ ನಂತರ ಮುಂದೇನೂ ಎನ್ನುವ ಸ್ಥಿತಿಯಲ್ಲಿ ಇದ್ದಾಗ, ಶಿವರಾಜ್ ಕುಮಾರ್ ಅವಕಾಶ ನೀಡಿದರು. ಈ ಸಹಾಯವನ್ನು, ಶಿವಣ್ಣನ ಇಂತಹ ಗುಣವನ್ನು ದ್ವಾರಕೀಶ್ ನೆನೆದರು. ಕೇವಲ 20 ನಿಮಿಷದಲ್ಲಿ 'ಆಯುಷ್ಮಾನ್ ಭವ' ಸಿನಿಮಾದ ಮಾತುಕತೆ ಮುಗಿಸಿದರು. ಈ ರೀತಿಯಾಗಿ ಈ ಸಿನಿಮಾ ಪ್ರಾರಂಭ ಆಗಿದೆ.

  English summary
  Story behind Ayushman Bhava kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X