For Quick Alerts
  ALLOW NOTIFICATIONS  
  For Daily Alerts

  'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ!

  |

  ನವಗ್ರಹ ಸಿನಿಮಾ ಬಿಡುಗಡೆಯಾಗಿ 12 ವರ್ಷ ಕಳೆದಿದೆ. 2008ರ ನವೆಂಬರ್ 7 ರಂದು ಈ ಚಿತ್ರ ಪ್ರೇಕ್ಷಕರೆದುರು ಬಂದಿತ್ತು. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಸಲ ಖ್ಯಾತ ಖಳನಟರ ಮಕ್ಕಳನ್ನು ಒಟ್ಟುಗೂಡಿಸಿ ತಯಾರು ಮಾಡಿದಂತಹ ಚಿತ್ರ. ಆ ಸಮಯಕ್ಕೆ ಕನ್ನಡದ ಸೂಪರ್ ಸ್ಟಾರ್ ನಟನಾಗಿ ದರ್ಶನ್ ಅವರನ್ನು ನೆಗಿಟಿವ್ ಪಾತ್ರದಲ್ಲಿ ತೋರಿಸಿದ ಚಿತ್ರ.

  ಇಂದಿಗೂ ಇಂತಹ ಸಿನಿಮಾ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಬಂದಿಲ್ಲ. ಯಾರೂ ಇಂತಹ ಸಾಹಸಕ್ಕೆ ಕೈ ಹಾಕಿಲ್ಲ. ಈಗಲೇ ದರ್ಶನ್ ಅಭಿಮಾನಿಗಳು ನವಗ್ರಹ ಚಿತ್ರದ ಸೀಕ್ವೆಲ್ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಿನಕರ್ ತೂಗುದೀಪ್ ಸಹ ಈ ಬಗ್ಗೆ ಆಲೋಚಿಸುತ್ತಿರುವುದಾಗಿ ಹೇಳಿದ್ದರು. ಈಗ ವಿಷ್ಯ ಏನಪ್ಪಾ ಅಂದ್ರೆ ನವಗ್ರಹ ಚಿತ್ರದ ಜಗ್ಗು ಪಾತ್ರ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಖುದ್ದು ದಿನಕರ್ ಬಹಿರಂಗಪಡಿಸಿದ್ದಾರೆ. ಇಂಟರೆಸ್ಟಿಂಗ್ ವಿಷಯದ ಬಗ್ಗೆ ತಿಳಿಯಲು ಮುಂದೆ ಓದಿ....

  'ನವಗ್ರಹ' ಸೀಕ್ವೆಲ್: 12 ವರ್ಷದ ಡಿ ಬಾಸ್ ಅಭಿಮಾನಿಗಳ ಆಸೆ ಈಡೇರುತ್ತಾ?

  ದರ್ಶನ್ ಜಗ್ಗು ಪಾತ್ರಕ್ಕೆ ಅಂದುಕೊಂಡಿರಲಿಲ್ಲ

  ದರ್ಶನ್ ಜಗ್ಗು ಪಾತ್ರಕ್ಕೆ ಅಂದುಕೊಂಡಿರಲಿಲ್ಲ

  ಕೆಆರ್‌ಜೆ ಕನೆಕ್ಟ್ಸ್ ಯ್ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಿರುವ ಸಂದರ್ಶನದಲ್ಲಿ ನವಗ್ರಹ ಸಿನಿಮಾ ಕುರಿತು ನಿರ್ದೇಶಕ ದಿನಕರ್ ತೂಗುದೀಪ್ ಇಂಟರೆಸ್ಟಿಂಗ್ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ''ನವಗ್ರಹ ಸಿನಿಮಾದ ಜಗ್ಗು ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿಲಿಲ್ಲ. ಆದರೆ, ಕಥೆ ಕೇಳಿದ ಮೇಲೆ ನಾನೇ ಮಾಡ್ತೀನಿ ಅಂತ ದರ್ಶನ್ ಮಾಡಿದ ಪಾತ್ರ ಇದು'' ಎಂದು ದಿನಕರ್ ತಿಳಿಸಿದ್ದಾರೆ.

  ವಿನೋದ್ ಪ್ರಭಾಕರ್ ಅಂದುಕೊಂಡಿದ್ದೆ

  ವಿನೋದ್ ಪ್ರಭಾಕರ್ ಅಂದುಕೊಂಡಿದ್ದೆ

  ''ನವಗ್ರಹ ಕಥೆ ಮಾಡಿದ ಜಗ್ಗು ಪಾತ್ರ ದರ್ಶನ್ ಅಂದುಕೊಂಡಿರಲಿಲ್ಲ. ವಿನೋದ್ ಪ್ರಭಾಕರ್ ಈ ಪಾತ್ರ ಮಾಡುವುದು ಅಂತ ನಾನು ಫಿಕ್ಸ್ ಆಗಿದ್ದೆ. ಐಪಿಎಸ್ ಆಫೀಸರ್ ಆಗಿ ದರ್ಶನ್ ಬರ್ತಾರೆ ಅಂದುಕೊಂಡಿದ್ದೆ. ನವಗ್ರಹ ಕಥೆ ಕೇಳಿದ್ಮೇಲೆ ದರ್ಶನ್ ಜಗ್ಗು ಪಾತ್ರ ನಾನೇ ಮಾಡ್ತೀನಿ ಅಂದ್ರು. ನೆಗಿಟಿವ್ ಶೇಡ್ ಮಾಡ್ತೀನಿ ಅಂತ ನಿರ್ಧರಿಸಿದರು'' ಎಂದು ದಿನಕರ್ ಹೇಳಿಕೊಂಡಿದ್ದಾರೆ.

  ಕಥೆ ಕೇಳಿದ್ಮೇಲೆ ವಿನೋದ್ ಯೋಚಿಸಿದ್ದರು

  ಕಥೆ ಕೇಳಿದ್ಮೇಲೆ ವಿನೋದ್ ಯೋಚಿಸಿದ್ದರು

  ''ಸಿನಿಮಾ ಆರಂಭಿಸುವುದಕ್ಕೆ ಮುಂಚೆಯೇ ಎಲ್ಲರಿಗೂ ನವಗ್ರಹ ಬಗ್ಗೆ ಹೇಳಿದ್ದೆ. ಎಲ್ಲರಿಗೂ ಗೊತ್ತಿತ್ತು. ವಿನೋದ್ ಬಳಿಯೂ ಪಾತ್ರದ ಬಗ್ಗೆ ಹೇಳಿದ್ದೆ. ಕಥೆ ಮುಗಿದ ಮೇಲೆ ನಿರ್ಧರಿಸೋಣ ಅಂದಿದ್ದರು. ದರ್ಶನ್ ಆಗ ಅರ್ಜುನ ಸಿನಿಮಾ ಮಾಡ್ತಿದ್ರು. ಜಯಣ್ಣ ಆಫೀಸ್‌ನಲ್ಲಿ ಎಲ್ಲರನ್ನು ಕರೆಸಿ ಕಥೆ ಹೇಳಿದೆ. ಎಲ್ಲರಿಗೂ ಇಷ್ಟ ಆಯ್ತು. ಆದರೆ, ವಿನೋದ್ ಪ್ರಭಾಕರ್ ನೆಗಿಟಿವ್ ಶೇಡ್ ಅಂತ ಸ್ವಲ್ಪ ಯೋಚಿಸಿದರು. ಅಷ್ಟರಲ್ಲಿ ದರ್ಶನ್ ನಾನೇ ಮಾಡ್ತಿನಿ ಅಂದ್ರು. ಹೀಗೆ ಜಗ್ಗು ಪಾತ್ರಕ್ಕೆ ದರ್ಶನ್ ಬಂದ್ರು'' ಎಂದು ವಿವರಿಸಿದರು.

  ನವಗ್ರಹ : ಒಂದು ಅಪರೂಪದ ಚಿತ್ರ

  ನವಗ್ರಹ 2 ಯಾವಾಗ?

  ನವಗ್ರಹ 2 ಯಾವಾಗ?

  ''ನವಗ್ರಹ ಸಿನಿಮಾದ ಸೀಕ್ವೆಲ್ ಮಾಡಬೇಕು ಎಂಬ ಆಲೋಚನೆ ಇರಲಿಲ್ಲ. ಆದರೆ, ಪ್ರೇಕ್ಷಕರು ಕ್ಲೈಮ್ಯಾಕ್ಸ್ ಮುಗಿದ ಮೇಲೆ ಅಂತಹದೊಂದು ನಿರೀಕ್ಷೆ ವ್ಯಕ್ತಪಡಿಸಿದರು. ಅವರ ಆಸೆ ನೋಡಿದ್ಮೇಲೆ ಅನಿಸಿತ್ತು. ನವಗ್ರಹ 2 ಮಾಡಬೇಕು ಅಂತ. ನೋಡೋಣ, ಅದಕ್ಕೆ ಸಮಯ ಬರುತ್ತೆ'' ಎಂದು ದಿನಕರ್ ತೂಗುದೀಪ ಸುಳಿವು ನೀಡಿದರು.

  ಭಯಂಕರವಾಗಿದೆ ಮದಗಜ ವಿಲನ್ ಲುಕ್ | Filmibeat Kannada
  English summary
  Director Dinakar thoogudeepa reveals story behind the super hit movie of Navagraha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X