»   » 'ಬಿಗ್ ಎಫ್ಎಂ'ನಲ್ಲಿ ಸ್ಟ್ರೇಟ್ ಹಿಟ್ ವಿತ್ ರವಿಚಂದ್ರನ್

'ಬಿಗ್ ಎಫ್ಎಂ'ನಲ್ಲಿ ಸ್ಟ್ರೇಟ್ ಹಿಟ್ ವಿತ್ ರವಿಚಂದ್ರನ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಕ್ರಿಯಾಶೀಲ ನಟರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಒಬ್ಬರು. ಸದಾ ಒಂದಿಲ್ಲೊಂದು ಹೊಸತನ್ನು ಮಾಡುತ್ತಲೇ ಇರುವ ವ್ಯಕ್ತಿತ್ವ ಅವರದು. ರವಿಚಂದ್ರನ್ ಕಿರುತೆರೆಗೆ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಅವರು ಕಲರ್ಸ್ ಕನ್ನಡ ವಾಹಿನಿಯ 'ಡಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಬಂದು ಎಲ್ಲರನ್ನೂ ಚಕಿತಗೊಳಿಸಿದರು.

ಇದೀಗ ಅವರು ರೇಡಿಯೋ ಜಾಕಿಯಾಗಿ ಹೊಸ ಅವತಾರದಲ್ಲಿ ಕೇಳುಗರನ್ನು ರಂಜಿಸಲಿದ್ದಾರೆ. ಭಾರತದ ಅತಿದೊಡ್ಡ ರೇಡಿಯೋ ನೆಟ್ ವರ್ಕ್ 92.7 ಬಿಗ್ ಎಫ್ಎಂ ನಲ್ಲಿ ಅವರ ಭಿನ್ನ ಕಾರ್ಯಕ್ರಮ 'ಸ್ಟ್ರೇಟ್ ಹಿಟ್ ವಿತ್ ರವಿಚಂದ್ರನ್' ಆರಂಭವಾಗಿದೆ.

Straight hit with Ravichandran on Big FM

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7ರಿಂದ 10 ಗಂಟೆವರೆಗೆ ಈ ಕಾರ್ಯಕ್ರಮ ಪ್ರಸಾರ ಪ್ರಾರಂಭಿಸಿದೆ. ಈ ಸಮಯದಲ್ಲಿ ಕನಸುಗಾರ ರವಿಚಂದ್ರನ್ ತಮ್ಮ ಬಣ್ಣದ ಜಗತ್ತಿನ ಕನಸುಗಳನ್ನು ಶ್ರೋತೃಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

ರವಿಚಂದ್ರನ್ ಅವರ ಬಣ್ಣದ ಬದುಕಿನ ಕಥೆ ಎಂದರೆ ಕೇಳಲು ಕನ್ನಡ ಕುಲಕೋಟಿ ತುದಿಗಾಲಲ್ಲಿ ನಿಂತಿರುತ್ತದೆ. ಅವರ ಬಣ್ಣದ ಜಗತ್ತಿನ ಕಥೆಯನ್ನು ಕೇಳುತ್ತಾ ಕೇಳುತ್ತಾ ಮೈಮರೆತು ಹಾಗೆಯೇ ನಿದ್ದೆಗೆ ಜಾರಬಹುದು. ಕೇವಲ ಕೇಳುವುದಷ್ಟೇ ಅಲ್ಲದೆ, ಕೇಳುಗರು ತಮ್ಮ ಸಂದೇಹ, ಪ್ರಶ್ನೆಗಳನ್ನು ರವಿಚಂದ್ರನ್ ಅವರಿಗೆ ಕೇಳುವ ಅವಕಾಶವನ್ನೂ ಬಿಗ್ ಎಫ್ಎಂ ನೀಡುತ್ತಿದೆ. (ಏಜೆನ್ಸೀಸ್)

English summary
Tune into "Straight hit with Ravichandran" everyday from 7pm to 10 pm starting from Monday to Saturday only on 92.7 Big FM. Behold the Crazy Star, the dream mechant and the show man of Kannada cinema, for the first time in the history of Indian radio.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada