ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

Recommended Video

Ambareesh, Kannada Actor Demise : ಕಳೆದ ವರ್ಷ ಅಣ್ಣ ನಿಧನರಾದ ದಿನಾಂಕವೇ ಅಂಬರೀಶ್ ನಿಧನ | Oneindia Kannada

ಕನ್ನಡದ 'ಕನ್ವರ್ ಲಾಲ್', ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನಿನ್ನೆ (ನವೆಂಬರ್ 24) ರಾತ್ರಿ 10:15 ಸುಮಾರಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು.

ಕಾಕತಾಳೀಯ ಅಂದ್ರೆ, ಅಂಬರೀಶ್ ರವರ ಸಹೋದರ ಡಾ.ಹರೀಶ್ ವಿಧಿವಶರಾಗಿ ನಿನ್ನೆಗೆ ಸರಿಯಾಗಿ ಒಂದು ವರ್ಷ.

strange-co-incidence-in-kannada-actor-ambareesh-death

ಹೌದು, ಕಳೆದ ವರ್ಷ.. ಅಂದ್ರೆ ನವೆಂಬರ್ 24, 2017 ರಂದು ಅಂಬರೀಶ್ ಅವರ ಅಣ್ಣ ಡಾ.ಹರೀಶ್ ಕೊನೆಯುಸಿರೆಳೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಹರೀಶ್ ವರ್ಷದ ಹಿಂದೆ ಬಾರದ ಲೋಕಕ್ಕೆ ಪಯಣಿಸಿದ್ದರು. ವಿಚಿತ್ರ ಅಂದ್ರೆ, ಈ ವರ್ಷದ ನವೆಂಬರ್ 24 ರಂದು ಅಂಬರೀಶ್ ಮೋಡದ ಮರೆಗೆ ಸರಿದಿದ್ದಾರೆ.

ಸಹೋದರ ಹರೀಶ್ ಮೃತಪಟ್ಟಿದ್ದ ದಿನವೇ ಅಂಬರೀಶ್ ನಿಧನ

ನಿನ್ನೆ ಮೃತಪಟ್ಟ ಅಂಬರೀಶ್ ಅವರ ಪಾರ್ಥೀವ ಶರೀರವನ್ನ ಇದೀಗ ಜೆ.ಪಿ.ನಗರ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಭಾನುವಾರ (ನವೆಂಬರ್ 25) ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಅಂಬರೀಶ್ ಅಂತಿಮ ಸಂಸ್ಕಾರ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ.

English summary
Strange co-incidence in Kannada Actor Ambareesh death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X